ನಟ ದ್ವಾರಕೀಶ್ ಗೆ ಸಂಕಷ್ಟ…!!!

Published on

726 Views

ಕನ್ನಡ ಚಿತ್ರರಂಗದ ಕುಳ್ಳ ಎಂದೇ ಖ್ಯಾತಿ ಪಡೆದ ನಟ ದ್ವಾರಕೀಶ್ ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ.
‘ಚಾರುಲತಾ’ ಸಿನಿಮಾ ನಿರ್ಮಾಣಕ್ಕಾಗಿ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ರವರಿಂದ 50 ಲಕ್ಷ ಸಾಲ ಪಡೆದ ದ್ವಾರಕೀಶ್ ರವರು ಅದನ್ನು ಚಂದ್ರಶೇಖರ್ ಗೆ ಮರಳಿ ಕೊಡುವಾಗ 52 ಲಕ್ಷ ರೂಪಾಯಿಯ ಆಂಧ್ರ ಬ್ಯಾಂಕ್ ನ ಚೆಕ್ ನೀಡಿದ್ದರು.

ದ್ವಾರಕೀಶ್ ನೀಡಿದ್ದ ಆ ಚೆಕ್ ಬೌನ್ಸ್ ಆದ ಕಾರಣ 5 ವರ್ಷ ದ ಹಿಂದೆಯೇ ಚಂದ್ರಶೇಖರ್ ಕೋರ್ಟ್ ಮೆಟ್ಟೇಲೆರಿದ್ದರು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 25 ನೇ ಎಸಿಎಂಎಂ ನ್ಯಾಯಾಲಯವು ಸಾಲವಾಗಿ ಪಡೆದಿದ್ದ ಹಣವನ್ನು ನೀಡುವಂತೆ ತಾಕಿತ್ತು ಮಾಡಿದ್ದಾರೆ. 52 ಲಕ್ಷದ 20 ಸಾವಿರ ರೂಪಾಯಿ ನೀಡಲು ವಿಫಲವಾದಲ್ಲಿ ಒಂದು ವರ್ಷ ಜೈಲು ಎಂದು ಆದೇಶ ನೀಡಿದೆ. ದ್ವಾರಕೀಶ್ ರವರಿಗೆ ಬೇರೆ ದಾರಿಯಿಲ್ಲದೆ ಹಣ ಮರುಪಾವತಿ ಮಾಡಲೇ ಬೇಕಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com