ನಟ ಚೇತನ್ ಅವರ ಚೇತನ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಕೊರಗ ಸಮುದಾಯದವರಿಗೆ ಕಿಟ್ ವಿತರಣೆ

Published on

419 Views

ಕೊರೋನಾ ಹಿನ್ನೆಲೆ‌ ಕಳೆದ ಕೆಲವು ದಿನದಿಂದ ಸೆಮಿ‌ ಲಾಕ್ಡೌನ್ ಜಾರಿಯಲ್ಲಿದ್ದು ಹಲವರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕರಾವಳಿ ಕುಂದಾಪುರದ ಗಂಗೊಳ್ಳಿ ಭಾಗದ ಕೊರಗ ಸಮುದಾಯಕ್ಕೆ ಅಕ್ಕಿ ಹಾಗೂ ಆಹಾರ ಸಾಮಾಗ್ರಿ ಕಿಟ್ ನೀಡುವ ಮೂಲಕ ಸ್ಯಾಂಡಲ್ ವುಡ್ ನಟರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಮೈನಾ ಖ್ಯಾತಿಯ ನಟ ಚೇತನ್ ಅವರ ಚೇತನ್ ಫೌಂಡೇಶನ್ ಟ್ರಸ್ಟ್ ಹಾಗೂ ಬೆಂಗಳೂರು ಉದ್ಯಮಿಯಾದ ಕೆ.ವಿ ನಾಗರಾಜ್, ಉದ್ಯಮಿ ದಿನೇಶ್ ಮಂಗಳೂರು, ನಟ ವಜ್ರಾಂಗ್ ಶೆಟ್ಟಿ (ಮಣಿ ಶೆಟ್ಟಿ ತೆಕ್ಕಟ್ಟೆ) ಹಾಗೂ ಸಂಕಲ್ಪ ಕ್ಲಿನಿಕ್ ಮುಳ್ಳಿಕಟ್ಟೆ ಮಾಲಕ ಪುಷ್ಪರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಂಗೊಳ್ಳಿ ಶಾಖೆ ಸಹಯೋಗದೊಂದಿಗೆ ಆಹಾರ ಕಿಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ಅನ್ನು ಗಂಗೊಳ್ಳಿ ಗ್ರಾಮ, ಗುಜ್ಜಾಡಿ, ತ್ರಾಸಿ, ಮೋವಾಡಿ ಗ್ರಾಮದಲ್ಲಿ 21 ಬಡ ಕುಟುಂಬಗಳಿಗೆ ವಿತರಿಸಲಾಯಿತು.

ಈ ಸಂದರ್ಭ ನಟ ವಜ್ರಾಂಗ್ ಶೆಟ್ಟಿ, ದ.ಸಂ.ಸ ಗಂಗೊಳ್ಳಿ ಶಾಖೆ ಮುಖಂಡರಾದ ಜಗದೀಶ್ ಗಂಗೊಳ್ಳಿ, ಸದಸ್ಯರಾದ ಸಂಪತ್, ಸಚಿನ್, ವಿಶ್ವನಾಥ್, ರಾಘವೇಂದ್ರ, ಸತೀಶ್, ಮಿಥುನ್ ಮೊದಲಾದವರಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com