ಬಿರಿಯಾನಿ ವ್ಯಾಪಾರ ಶುರುಮಾಡಿದ ನಟ ಚಂದನ್

Published on

372 Views

ಸ್ಯಾಂಡಲ್ ವುಡ್ ನಟ ಚಂದನ್ ಇದೀಗ ಸಿನಿಮಾ ನಟನೆಯ ಜೊತೆಗೆ ಇದೀಗ ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿದ್ದಾರೆ. ಬೆಂಗಳೂರಿನ ಸಹಕಾರನಗರದಲ್ಲಿ ಇಂದು ಅದರ ಉದ್ಘಾಟನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಂದಿದ್ದು, ಉದ್ಘಾಟನೆ ಮಾಡಿ ಚಂದನ್ ಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ. ಇದನ್ನು ಚಂದನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಂದನ್ ಸೀರಿಯಲ್ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈಗ ಡಾರ್ಲಿಂಗ್ ಕೃಷ್ಣ ಅಭಿನಯದ, ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿರುವ shrikrishna@gmail.com ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ಮಲಯಾಳಂ ನಲ್ಲೂ ಬಿಡುಗಡೆಗೊಳ್ಳಲಿದೆ.

https://fb.watch/2cl_amMIcj/

Copyright ©2026 . All Rights Reserved. privacy | terms Whatsapp: 9538193653 Email: hello@flixoye.com