Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್
Bheema Movie Review: ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ಭೀಮ ಚಿತ್ರ ಶುಕ್ರವಾರ ತೆರೆಕಂಡಿದ್ದು, ರಿಲೀಸ್‌ಗೂ ಮುನ್ನವೇ ಸಾಕಷ್ಟು ಹವಾ ಮೂಡಿಸಿತ್ತು. ಶುಕ್ರವಾರ ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ ತೆರೆಕಂಡ ಈ ಚಿತ್ರ, ಜನಮೆಚ್ಚುಗೆ ಗಳಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.
ಮಾದಕ ವಸ್ತು ಅಥವಾ ಡ್ರಗ್ಸ್‌ನ ಮಾರಾಟ ಮತ್ತು ಮತ್ತು ಅದರಿಂದ ಯುವಕರ ಮೇಲಾಗುವ ಪರಿಣಾಮದ ಬಗ್ಗೆ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಲ್ಲಿ ಈ ಚಿತ್ರತಂಡ ಯಶಸ್ವಿಯಾಗಿದೆ.
ಸ್ವತಃ ದುನಿಯಾ ವಿಜಯ್ ಅವರೇ ನಟಿಸಿ ನಿರ್ದೇಶಿಸಿರುವ ಈ ಚಿತ್ರ, ಮೊದಲ ದಿನದ ಪ್ರದರ್ಶನದಲ್ಲೇ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
@charanrajmr2701 sir music & BGM ge theatre BLAST💥
Thank you @OfficialViji sir..Olle theatre experience❤️#Bheema #BheemaReview pic.twitter.com/LGvhKpPymu— Blacony Boy (@LohitKu) August 10, 2024
ಮೊದಲ ದಿನವೇ ₹3.95 ಕೋಟಿ ಗಳಿಸಿದ್ದ ಚಿತ್ರ ಎರಡನೇ ದಿನವಾದ ನಿನ್ನೆ ₹3.35 ಕೋಟಿ ಗಳಿಸಿತ್ತು ಎನ್ನಲಾಗಿದೆ.
Bheema Movie Review: ದುನಿಯಾ ವಿಜಯ್ ಡೈರೆಕ್ಷನ್ ಸಕ್ಸಸ್
ಇದುವರೆಗೂ ಕೇವಲ ಆಕ್ಷನ್ ಸೀಕ್ವೆಲ್‌ಗಳಿರುವ ಚಿತ್ರಗಳಲ್ಲಿ ನಟಿಸುತ್ತಿದ್ದ ದುನಿಯಾ ವಿಜಯ್, ಈ ಬಾರಿ ಸಂದೇಶವುಳ್ಳ ಚಿತ್ರವೊಂದನ್ನು ಜನರಿಗೆ ತಲುಪಿಸಿ, ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.
ಚಿತ್ರದಲ್ಲಿ ಬಹುತೇಕ ಆಕ್ಷನ್ ಸೀಕ್ವೆಲ್‌ಗಳಿದ್ದು, ಬೆಂಗಳೂರಿನ ಕೆಲವು ಮಾಫಿಯಾಗಳನ್ನು ಚಿತ್ರ ಬಿಚ್ಚಿಟ್ಟಿರುವುದರಿಂದ ಸ್ಟೋರಿಲೈನ್ ಮೂಲಕ ಚಿತ್ರವನ್ನು ಹಲವರು ನೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಹೆಚ್ಚು ಆಕ್ಷನ್ ಹಾಗೂ ನೇರ ಭಾಷೆಗಳಿರುವುದರಿಂದ, ಕಂಪ್ಲೀಟ್ ಮಾಸ್ ಆಕ್ಷನ್ ಚಿತ್ರವಾಗಿದೆ.
Movie psyche agittu. After long time olle kannada movie bantu finally. Youths should watch this movie. KFI will Rule again 🎥❤️ aa climax alli iro twist antu 🔥#Bheema #BheemaReview #duniyavijay pic.twitter.com/UOhvR0NLmV
— Kartik Naruni (@KartikNaruni) August 10, 2024
ಮೊದಲ ಹಾಫ್‌ನಲ್ಲಿ ನೀವು ನೋಡುವ ಕಾಮಿಡಿ ಹಾಗೂ ಸಾಂಗ್ಸ್‌ಗಳು ಮತ್ತು ಎರಡನೇ ಹಾಫ್‌ನಲ್ಲಿ ನೀವು ನೋಡುವ ಸಖತ್ ಟ್ವಿಸ್ಟ್‌ಗಳು ಇಡೀ ಚಿತ್ರವನ್ನು ಗೆಲ್ಲಿಸಿವೆ.
ಇತ್ತೀಚೆಗೆ ಪರಭಾಷಾ ಚಿತ್ರಗಳ ಪ್ರಭಾವದ ನಡುವೆ, ಕನ್ನಡ ಚಿತ್ರಗಳಿಗೆ ಫ್ಯಾನ್ಸ್ ಥಿಯೇಟರ್‌ಗೆ ಬರಲ್ಲ ಎನ್ನುವ ಮಾತನ್ನು ವಿಜಯ್ ಅವರ ಭೀಮ ಅಕ್ಷರಶಃ ಸುಳ್ಳಾಗಿಸಿದ್ದಾನೆ. ಮೊದಲೆರಡು ದಿನದ ನಂತರ ವೀಕೆಂಡ್ ರಜೆ ಹಾಗೂ ಮುಂದಿನ ವಾರದ ಸ್ವಾತಂತ್ರ್ಯ ದಿನಾಚರಣೆಯ ದಿನದ ರಜೆಯ ಲಾಭವೂ ಕೂಡ ಚಿತ್ರಕ್ಕಿದೆ. ರಿವ್ಯೂ ಚೆನ್ನಾಗಿರೋದ್ರಿಂದ ಥಿಯೇಟರ್‌ಗೆ ಇನ್ನಷ್ಟು ಜನ ಬರಬಹುದು ಅನ್ನೋ ನಿರೀಕ್ಷೆ ತಂಡಕ್ಕಿದೆ.
Maverick kannada music director #CharanRaj delivered another mass sound track & BGM for #Bheema
“ಆಡಿ ಬಾ ಮಗನೆ, ಭೀಮ, ನೋಡುವೆ ಕಣ್ಣಿನ ತುಂಬ”, anthem song👌🏻 #BheemaRunningSuccessfully #BheemaReview pic.twitter.com/tmpUlRMwRq— Lokesh. L (@loki_rocki) August 11, 2024
ಇನ್ನು ಚಿತ್ರವನ್ನು ಸಂಪೂರ್ಣವಾಗಿ ದುನಿಯಾ ವಿಜಯ್ ಅವರೇ ನಟಿಸಿ ನಿರ್ದೇಶಿಸಿದ್ದು, ಅವರೊಂದಿಗೆ ನಾಯಕಿಯಾಗಿ ಅಶ್ವಿನಿ ಅಂಬರೀಶ್ ನಟಿಸಿದ್ದಾರೆ.
ಇತರ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಕಾಕ್ರೋಚ್ ಸುಧಿ, ನಯನಾ ಸೂಡ, ರಾಘು ಶಿವಮೊಗ್ಗ, ಪ್ರಿಯಾ ಶಠಮರ್ಷಣ ಮುಂತಾದವರು ತಮ್ಮ ಪಾತ್ರಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚರಣ್ ರಾಜ್ ಅವರ ಸಂಗೀತ ನಿರ್ದೇಶನ ಅತ್ಯದ್ಭುತವಾಗಿದ್ದು, ಈಗಾಗಲೇ ಟ್ವಿಟ್ಟರ್‌ನಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸರಿಸುಮಾರು 125 ದಿನ ಚಿತ್ರೀಕರಿಸಲಾದ ಈ ಭೀಮ ಚಿತ್ರವನ್ನು ಬಹುತೇಕ ಸೆಟ್‌ಗಳಿಲ್ಲದೇ ಚಿತ್ರಿಸಲಾಗಿದೆ.
ನೀವೂ ಥಿಯೇಟರ್‌ನಲ್ಲಿ ನೋಡಿ ಹಾಗೂ ಕನ್ನಡದ ಈ ಸಂದೇಶವುಳ್ಳ ಚಿತ್ರವನ್ನು ಪ್ರೋತ್ಸಾಹಿಸಿ.