Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Published on

1197 Views

ಕಳೆದ ಹಲವು ಸಮಯಗಳಿಂದ ವೈರಲ್ ಆಗಿದ್ದ ಬಾಲಿವುಡ್ ಜೋಡಿ ಅಭಿಷೇಕ್‌ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರ ಡಿವೋರ್ಸ್ (Abhishek Aishwarya Divorce) ಸುದ್ದಿಗೆ ಕೊನೆಗೂ ಅಂತ್ಯ ಕಾಣುವಂತಿದೆ.

ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವಂತೆ ಅಭಿಷೇಕ್ – ಐಶ್ವರ್ಯಾ ಅವರ ಇತ್ತೀಚಿನ ಕೆಲವು ನಡೆಗಳು ಕಂಡುಬಂದಿದ್ದು, ಮೀಡಿಯಾಗಳಿಗೆ ಇವರ ಡಿವೋರ್ಸ್ ಸುದ್ದಿಯೇ ಆಹಾರವಾಗಿತ್ತು.

Abhishek Aishwarya Divorce News

ಆದರೆ ಇದೀಗ ಅಭಿಷೇಕ್ ಬಚ್ಚನ್ ಅವರು ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಅವರಿಬ್ಬರ ನಡುವೆ ಡಿವೋರ್ಸ್ ಕನ್ಫರ್ಮ್ ಆಗಿದೆ ಎನ್ನಲಾಗಿದೆ‌.

ಇತ್ತೀಚೆಗೆ ಯಾವುದೇ ಕಾರ್ಯಕ್ರಮಗಳಿಗೆ ಹೋದಾಗಲೂ, ಅಭಿಷೇಕ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಕೂಡ ಪ್ರತ್ಯೇಕವಾಗಿಯೇ ಭಾಗವಹಿಸುತ್ತಿದ್ದರು.

ಇತ್ತೀಚೆಗಷ್ಟೇ ನಡೆದ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಸಮಾರಂಭಕ್ಕೂ ಕೂಡ ಅಭಿಷೇಕ್ – ಐಶ್ವರ್ಯಾ ಪ್ರತ್ಯೇಕವಾಗಿಯೇ ಬಂದಿದ್ದರು. ಅಭಿಷೇಕ್ ತನ್ನ ಕುಟುಂಬದವರೊಂದಿಗೆ ಬಂದರೆ, ಐಶ್ವರ್ಯಾ ರೈ ತನ್ನ ಮಗಳು ಆರಾಧ್ಯ ಅವರೊಂದಿಗೆ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಆ ಸಮಯದಲ್ಲೇ ಇವರ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಸುದ್ದಿಗೆ ಇನ್ನಷ್ಟು ಪುಷ್ಠಿ ದೊರಕಿದ್ದು, ಇದೀಗ ಅಭಿಷೇಕ್ ಬ‍‍ಚ್ಚನ್ ಅವರದ್ದೆನ್ನಲಾದ ವಿಡಿಯೋ ಮೂಲಕ ಕನ್ಫರ್ಮ್‌ ಆಗಿದೆ.

ಅಭಿಷೇಕ್ ಅವರು ವಿಚ್ಛೇದನದ ಕುರಿತಾದ ಪೋಸ್ಟ್ ಒಂದಕ್ಕೆ ಲೈಕ್ ಕೊಟ್ಟಿದ್ದು, ಅದು ಕೂಡ ವೈರಲ್ ಆಗಿತ್ತು‌. ಐಶ್ವರ್ಯಾ ರೈ ಅವರಿಂದ ಅಭಿಷೇಕ್ ವಿಚ್ಛೇದನ (Abhishek Aishwarya Divorce) ಪಡೆಯಲಿದ್ದಾರೆ ಎನ್ನುವ ಸುದ್ದಿಗೆ ಅಭಿಷೇಕ್ ಬಚ್ಚನ್ ಅವರೇ ಆಹಾರ ನೀಡಿದಂತಾಗಿತ್ತು.

2007 ರಲ್ಲಿ ಬಚ್ಚನ್ ಕುಟುಂಬದ ಕುಡಿ ಅಭಿಷೇಕ್ ಬಚ್ಚನ್ ಅವರ ಕೈಹಿಡಿದಿದ್ದ ಮಂಗಳೂರಿನ ಬೆಡಗಿ, ಮಾಜಿ ಮಿಸ್ ವರ್ಲ್ಡ್ ಹಾಗೂ ಪದ್ಮಶ್ರೀ ಪುರಸ್ಕೃತ ನಟಿ ಐಶ್ವರ್ಯಾ ರೈ, 2011 ರಲ್ಲಿ ಆರಾಧ್ಯ ಎಂಬ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ಐಶ್ವರ್ಯಾ ಅವರ ಪತಿಯ ಕುಟುಂಬದಲ್ಲಿ ಮಾವ ಬಿಗ್ ಬಿ ಅಮಿತಾಭ್ ಬಚ್ಚನ್ ಜಗದ್ವಿಖ್ಯಾತ ನಟರಾದರೆ, ಅತ್ತೆ ಜಯಾ ಬಚ್ಚನ್ ನಟಿ ಹಾಗೂ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಕೂಡ ನಟನೆ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಪ್ರೊ ಕಬಡ್ಡಿ ಲೀಗ್‌ನ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಮಾಲಕರು ಕೂಡ ಆಗಿದ್ದಾರೆ.

Abhishek Aishwarya Divorce: ಸುದ್ದಿಗೆ ಪುಷ್ಠಿ ನೀಡಿದ ವಿಡಿಯೋ ಅಸಲಿಯತ್ತೇನು?

ಆದರೆ ಇದೀಗ, ಜುಲೈನಲ್ಲಿ ನಾನು ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ್ದೇವೆ. ಕಳೆದ ಕೆಲವು ವರ್ಷಗಳನ್ನು ನಿಭಾಯಿಸೋದು ನಮಗೆ ಕಷ್ಟವಾಗಿತ್ತು” ಎನ್ನುವ ಹೇಳಿಕೆಯಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇಬ್ಬರ ನಡುವಿನ ವಿಚ್ಛೇದನ ಕನ್ಫರ್ಮ್ ಎನ್ನಲಾಗಿದೆ.

ಇದನ್ನೂ ಓದಿ: Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

ಆದರೆ, ಮೂಲಗಳ ಪ್ರಕಾರ ಈ ವಿಡಿಯೋ ಅಸಲಿಯಲ್ಲ, ಅದೊಂದು AI Generated (ಕೃತಕ ಬುದ್ಧಿಮತ್ತೆ) ವಿಡಿಯೋ ಎನ್ನಲಾಗಿದ್ದು, ಅಭಿಷೇಕ್ ಬಚ್ಚನ್ ಅವರ ಹಳೆಯ ವಿಡಿಯೋವೊಂದಕ್ಕೆ ಅಭಿಷೇಕ್ ಬಚ್ಚನ್ ಅವರ ಧ್ವನಿಯನ್ನೇ ಹೋಲುವ AI ಧ್ವನಿ ಬಳಸಿ ವೈರಲ್ ಮಾಡಿದ್ದು ಎನ್ನಲಾಗಿದೆ.

ಈ ವಿಡಿಯೋದ ಬಗ್ಗೆ ಅಸಲಿಯತ್ತೇನು ಅಥವಾ ಐಶ್ವರ್ಯಾ – ಅಭಿಷೇಕ್ ಅಧಿಕೃತವಾಗಿ ವಿಚ್ಛೇದನ‌ (Abhishek Aishwarya Divorce) ಪಡೆಯಲಿದ್ದಾರೆಯೇ ಎನ್ನುವ ಸುದ್ದಿ ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಸುದ್ದಿ ಸುಳ್ಳಾಗಲಿ‌ ಹಾಗೂ ಈ ಸ್ಟಾರ್ ಜೋಡಿ ಅನ್ಯೋನ್ಯವಾಗಿ ಬಾಳುವಂತಾಗಲಿ ಎನ್ನುವುದೇ ಎಲ್ಲರ ಹಾರೈಕೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com