ಆದಿ ಪುರಾಣ(Aadi Purana) ಮೊದಲ ಪ್ರತಿ ಸಿದ್ದ

Published on

485 Views

ರೈನ್ ಬೋ ಪೆÇ್ರಡಕ್ಷನ್ ಅಡಿಯಲ್ಲಿ ಶಮಂತ್ ನಿರ್ಮಾಣ ಮಾಡಿರುವ ಒಂದು ಅಚ್ಚುಕಟ್ಟಾದ ಸಿನಿಮಾ ?ಆದಿ ಪುರಾಣ(Aadi Purana)? ಹೆಸರಾಂತ ಸಂಕಲನಕಾರ ಮೋಹನ್ ಕಾಮಾಕ್ಷಿ ನಿರ್ದೇಶನದಲ್ಲಿ ತಯಾರಾಗಿ ಡಿ ಟಿ ಎಸ್ ತಂತ್ರಜ್ಞಾನ ಅಳವಡಿಸಿಕೊಂಡು ಮೊದಲ ಪ್ರತಿಯನ್ನು ಪಡೆದುಕೊಂಡಿದೆ.

ಆದಿ ಒಬ್ಬ ಮುಗ್ದ. ಅವನ ಬಾಳಿನಲ್ಲಿ ಘಟಿಸುವ ಅನೇಕ ಸಂದರ್ಭಗಳು ಚಿತ್ರಕತೆಯಲ್ಲಿ ಹೊಸ ವಿಧಾನದಲ್ಲಿ ಹೇಳಲಾಗಿದೆ. ಶಷಾಂಕ್ ಮುಖ್ಯ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಅಹಲ್ಯ ಸುರೇಶ್ ಹಾಗೂ ಮೋಕ್ಷ ಕುಶಾಲ್ ನಾಯಕಿಯರು.

ಎಂ ಜಿ ಗುರುಪ್ರಸಾದ್ ಛಾಯಾಗ್ರಹಣ, ವಿಕ್ರಮ್ ವಸಿಷ್ಠ, ಚಂದನ ಹಾಗೂ ಸಿದ್ದಾರ್ತ್ ಕಾಮತ್ ಸಂಗೀತ, ಮಹೇಂದ್ರ ರಾವ್ ಹಾಗೂ ಮೋಹನ್ ಕಾಮಾಕ್ಷಿ ಸಂಭಾಷಣೆ, ಸಾಕ್ಷಿ ವೆಲ್ ಕಾರ್ಯಕಾರಿ ನಿರ್ಮಾಪಕರು, ಕವಿರಾಜ್ ಮತ್ತು ವಿಕ್ರಮ್ ವಸಿಷ್ಠ ಗೀತ ಸಾಹಿತ್ಯ, ಅನುಷ ಶಮಂತ್ ಹಾಗೂ ತೇಜಸ್ವಿನಿ ವಸ್ತ್ರ ವಿನ್ಯಾಸ, ಹಿರಿಯ ನೃತ್ಯ ನಿರ್ದೇಶಕಿ ತಾರಾ ಅವರು ಒಂದು ಹಾಡಿಗೆ ಹೆಜ್ಜೆ ಹಾಕಿಸಿದ್ದಾರೆ, ರಘು ಕಲಾ ನಿರ್ದೇಶನ ಒದಗಿಸಿದ್ದಾರೆ.

ರಂಗಾಯಣ ರಘು, ಜೈ ದೇವ್, ಕರಿ ಸುಬ್ಬು, ನಾಗೇಂದ್ರ ಷಾ, ಡಾ ವತ್ಸಲಾ ಮೋಹನ್, ಶಕ್ತಿ ವೆಲ್, ಸಮೀರ, ಆದಿತ್ಯ ಭರಾದ್ವಾಜ್, ಜಿಮ್ ಶಿವು, ರಾಧ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com