ಕಾಡುವ ಕರಾಳ ರಾತ್ರಿ..!
ಚಿತ್ರ: ಕರಾಳ ರಾತ್ರಿ
ನಿರ್ಮಾಣ: ಡಿ ಪಿಕ್ಚರ್ಸ್
ಚಿತ್ರಕಥೆ, ನಿರ್ದೇಶನ:ದಯಾಳ್ ಪದ್ಮನಾಭನ್
ಕಥೆ: ಮೋಹನ್ ಹಬ್ಬು
ಸಂಗೀತ: ಗಣೇಶ್ ನಾರಾಯಣ್
ಛಾಯಾಗ್ರಹಣ: ಪಿ.ಕೆ.ಎಚ್.ದಾಸ್
ಸಂಕಲನ: ದಿ ಕ್ರೇಜಿ ಮೈಂಡ್ಸ್
ತಾರಾಗಣ: ಅನುಪಮಾ ಗೌಡ, ಕಾರ್ತಿಕ್ ಜಯರಾಂ, ರಂಗಾಯಣ ರಘ, ವೀಣಾ ಸುಂದರ್, ನವೀನ್ ಕೃಷ್ಣ, ಸಿಹಿ ಕಹಿ ಚಂದ್ರು, ಜಯಶ್ರೀನಿವಾಸನ್
ನಮ್ಮ ರೇಟಿಂಗ್ – 4.5
ಒಂದು ಸಣ್ಣ ಹಳ್ಳಿ ಅಲ್ಲಿ ಒಂದು ಒಂಟಿ ಮನೆ. ಒಂದು ಸಾರಾಯಿ ಅಂಗಡಿ ಇಷ್ಟರಲ್ಲಿಯೇ ಇಡೀ ಸಿನಿಮಾ ಮಾಡಿ ಮುಗಿಸಿರುವ ದಯಾಳ್ ಪದ್ಮನಾಭನ್ ಮೇಕಿಂಗ್ ಸ್ಟೈಲ್ ನ್ನು ಮೆಚ್ಚಲೇ ಬೇಕು. ಎಲ್ಲಿಯೂ ಪ್ರೇಕ್ಷಕರಿಗೆ ಬೋರ್ ಹೊಡಿಸದೆ ಸಿನಿಮಾವನ್ನು ಚಿಕ್ಕದಾಗಿ , ಚೊಕ್ಕವಾಗಿ ಮಾಡಿ ಮುಗಿಸಿದ್ದಾರೆ. ಪುಟ್ಟದಾದ ಹಳ್ಳಿಯೊಳಗೆ ಇಡೀ ಕಥೆ ಸಾಗುತ್ತದೆ. ಚಿತ್ರದ ಸಂಭಾಷಣೆ, ಕ್ಯಾಮರಾ ವರ್ಕ್, ಹಿನ್ನೆಲೆ ಸಂಗೀತ ಕರಾಳ ರಾತ್ರಿಯಲ್ಲಿ ತಮ್ಮ ಕಮಾಲ್ ತೋರಿಸಿದೆ.
ಸಡನ್ನಾಗಿ ಕಾಸು ಮಾಡಬೇಕೆಂಬ ದುರಾಸೆಗೆ ಬಿದ್ದು, ಕೊಲೆ ಮಾಡುವಂತಹ ನಿರ್ಧಾರ ದೊಂದಿಗೆ ಮುಂದುವರೆಯುವ ಕಥೆ ‘ ಕರಾಳ ರಾತ್ರಿ’ .
ಮಲ್ಲಣ್ಣನ ಒಂಟಿ ಮನೆಗೆ ಅನಿರೀಕ್ಷಿತವಾಗಿ ಸೇರಿಕೊಳ್ಳುವ ಚೆನ್ನಕೇಶವ ಆ ಮನೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳುತ್ತಾನೆ. ಆ ರಾತ್ರಿ ಏನೇನಾಗುತ್ತೆ, ಆ ಕರಾಳ ರಾತ್ರಿಯಲ್ಲಿ ಬಂದು ಹೋಗುವ ಪಾತ್ರಗಳು ಇವೆಲ್ಲವನ್ನು ದಯಾಳ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದಲ್ಲಿ ಅನುಪಮಾ ಗೌಡ ಬಜಾರಿ ಹುಡುಗಿಯಾಗಿ ಮಲ್ಲಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಕಿತ್ತುತಿನ್ನುವ ಬಡತನ ಇನ್ನೊಂದು ಕಡೆ ಮದುವೆ ಆಗಿಲ್ಲ ಎಂಬ ಕೊರಗು ಈ ಪಾತ್ರಕ್ಕೆ ಅನುಪಮಾ ಗೌಡ ಜೀವ ತುಂಬಿದ್ದಾರೆ. ಚೆನ್ನಕೇಶವನಾಗಿ ಕಾರ್ತಿಕ್ ಜಯರಾಂ, ರೆಟ್ರೋ ಲುಕ್ ನಲ್ಲಿ ಜೆಕೆ ಉತ್ತಮ ಅಭಿನಯ ನೀಡಿದ್ದಾರೆ. ನವೀನ್ ಕೃಷ್ಣ ಒಂದು ಸೀನ್ ನಲ್ಲಿ ಬಂದು ಹೋಗುತ್ತಾರೆ. ರಂಗಾಯಣ ರಘ ಹಾಗೂ ವೀಣಾ ಸುಂದರ್ ಅವರ ಅಭಿನಯ ಸೂಪರ್. ‘ಕರಾಳ ರಾತ್ರಿ’ ಇದು ರಾತ್ರಿಯಲ್ಲಿ ನಡೆಯವಂತಹ ಕಥೆಯಾದ್ರು ಎಲ್ಲೂ ಬೋರ್ ಹೊಡಿಸುವುದಿಲ್ಲ. ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಕಥೆ ಕಾಡುತ್ತದೆ. ಕರಾಳ ರಾತ್ರಿಯ ಕಮಾಲ್ ನೋಡಬೇಕೆಂದರೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ. ನಿಮಗೂ ಇಷ್ಟವಾಗುತ್ತದೆ.