ಬಿಡುಗಡೆಗೆ ಸಜ್ಜಾಗುತ್ತಿರುವ ಕೋಡ್ಲು ರಾಮಕೃಷ್ಣ ನಿರ್ದೇಶನದ, ರಾಗಿಣಿ ಪ್ರಜ್ವಲ್ ಅಭಿನಯದ “ಶ್ಯಾನುಭೋಗರ ಮಗಳು” ಚಲನಚಿತ್ರ.
ಶಾನುಭೋಗರ ಮಗಳು ಚಿತ್ರವು ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾದಂಬರಿ ಆಧಾರಿತ ಚಲನಚಿತ್ರ, ಇದರಲ್ಲಿ ರಾಗಿಣಿ ಪ್ರಜ್ವಲ್ (ಪ್ರಜ್ವಲ್ ದೇವರಾಜ್ ಅವರ ಪತ್ನಿ) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ರಚಿಸಿದ್ದ ‘ಶಾನುಭೋಗರ ಮಗಳು’ ಕಾದಂಬರಿ ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. “ಶಾನುಭೋಗರ ಮಗಳು” ಕಾದಂಬರಿಯು ಭಾಗ್ಯ ಕೃಷ್ಣಮೂರ್ತಿ ಅವರ ಸ್ಫೂರ್ತಿದಾಯಕ ಲೇಖನ ಮತ್ತು ಗ್ರಾಮೀಣ ಜೀವನದ ಆಕರ್ಷಕ ಚಿತ್ರಣದಿಂದ ಗಮನಾರ್ಹವಾಗಿದೆ ಮತ್ತು ಸ್ವಾತಂತ್ರ್ಯಪೂರ್ವದ ಕಥೆಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ಆಕ್ಷನ್ ಕಟ್ ಹೇಳಿದ್ದು, ರಾಗಿಣಿ ಪ್ರಜ್ವಲ್‌ರನ್ನು ಪವರ್‌ಫುಲ್ ಪಾತ್ರದ ಮೂಲಕ ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ.
2013 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ “ಅಟ್ಟಹಾಸ”ದಲ್ಲಿ ವೀರಪ್ಪನ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ ಕಿಶೋರ್ ಅವರು ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ರಮೇಶ್‍ಭಟ್, ಸುಧಾಬೆಳವಾಡಿ,ಪದ್ಮಾ ವಾಸಂತಿ,ವಾಣಿಶ್ರೀ, ಭಾಗ್ಯಶ್ರೀ,ಕುಮಾರಿ ಅನನ್ಯ, ಟಿ.ಎನ್. ಶ್ರೀನಿವಾಸ ಮೂರ್ತಿ, ನಿರಂಜನ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಗಣನೀಯ ಬದಲಾವಣೆಗಳನ್ನು ಕಂಡುಬರುತ್ತಿರುವ, ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗುವ, ವ್ಯಾಪಕ ಪ್ರೇಕ್ಷಕರನ್ನು ಗುರಿಯಾಗಿರುವ ಚಿತ್ರಗಳ ಮದ್ಯೆ ಒಂದು ಕಾದಂಬರಿ ಆಧಾರಿತ ಚಿತ್ರ ವೀಕ್ಷಕರನ್ನು ಹೇಗೆ ಮನರಂಜಿಸಲಿದೆ ಎಂದು ಕಾದುನೋಡಬೇಕು.