ಮೇ 1 ತೆರೆಗೆ ಅಪ್ಪಳಿಸಲಿದೆ ’99’

Published on

269 Views

ವಿಜಯ್ ಸೇತುಪತಿ, ತ್ರಿಶಾ ಅಭಿನಯಿಸಿದ್ದ ತಮಿಳಿನ ಸೂಪರ್ ಹಿಟ್ ಚಿತ್ರ ’96’ , ಈಗ ’99’ ಆಗಿ ಕನ್ನಡಕ್ಕೆ ರಿಮೇಕ್ ಆಗಿದೆ. ಗಣೇಶ್ ಹಾಗೂ ಭಾವನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪೋಸ್ಟರ್ ಹಾಗೂ ಹಾಡುಗಳಿಂದಲೇ ಎಲ್ಲರ ಗಮನ ಸೆಳೆದಿದೆ ’99’ ಚಿತ್ರ. ಚಿತ್ರದ ಹಾಡುಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಸದ್ಯ ಕಾರ್ಮಿಕರ ದಿನಾಚರಣೆ ಮೇ1 ರಂದು ತೆರೆಗೆ ಬರಲು ಸಿದ್ಧ ವಾಗಿದೆ ’99’ ಚಿತ್ರ.

ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ‌ ’99’. ಚಿತ್ರದಲ್ಲಿ ಗಣೇಶ್ ದೇವದಾಸ್ ರಂತೆ ಗಡ್ಡ ಬಿಟ್ಟು ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡರೆ, ಭಾವನಾ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ಮ್ಯೂಸಿಕಲ್ ಮೂಲಕ‌ ಕಮಾಲ್ ಮಾಡಿದ ಚಿತ್ರ ಕನ್ನಡದಲ್ಲಿ ಯಾವ ರೀತಿ ಕಮಾಲ್ ಮಾಡಲಿದೆ ಎಂದು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರೀಮೇಕ್ ಚಿತ್ರವಾದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾವನ್ನು ಮಾಡಿದ್ದಾರೆ ಪ್ರೀತಂಗುಬ್ಬಿ. ಚಿತ್ರ ಬಿಡುಗಡೆಯಾದ ಮೇಲೆ ಪ್ರೇಕ್ಷಕರು ಚಿತ್ರವನ್ನು ಯಾವ ರೀತಿಯಾಗಿ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಾದರೆ ಮೇ1 ರವರೆಗೆ ಕಾಯಲೇಬೇಕು. ನಟಿ ಭಾವನಾ ವಿಡಿಯೋ ಮೂಲಕ ‘ನನ್ನ ಮತ್ತೊಂದು ಸಿನಿಮಾ ’99’ ತೆರೆಗೆ ಬರಲಿದೆ. ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಅರಸಿ ಎಂದು ಮನವಿ ಮಾಡಿಕೊಂಡಿದ್ದಾರೆ‌’ ನಟಿ ಭಾವನಾ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com