69 ನೇ ಶೋಭಾ ಸೌತ್ ಇಂಡಿಯನ್ ಫಿಲಂಫೇರ್ ಅವಾರ್ಡ್ಸ್‌ಗೆ ನಾಮಿನೇಷನ್ ಅಂತಿಮ – ಕನ್ನಡದಲ್ಲಿ ಆಯ್ಕೆಯಾಗಿದ್ದು ಈ ಚಿತ್ರಗಳು
ದಕ್ಷಿಣ ಭಾರತದ ಚಿತ್ರತಂಡಗಳನ್ನು ಬೆಸೆಯುವ ಅತ್ಯಂತ ಪ್ರತಿಷ್ಠಿತ ಸೌತ್ ಇಂಡಿಯನ್ ಫಿಲಂಫೇರ್ ಪ್ರಶಸ್ತಿ ಸಮಾರಂಭದ 2024 ರ ಆಚರಣೆಗೆ ವೇದಿಕೆ ಸಿದ್ಧಗೊಂಡಿದೆ. ಈಗಾಗಲೇ ಆಯಾ ಭಾಷೆಗಳ ಚಿತ್ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ/ನಟಿ, ಅತ್ಯುತ್ತಮ ಪೋಷಕ ನಟ/ನಟಿ ಹೀಗೆ ವಿವಿಧ ರೋಲ್‌ಗಳಿಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಕನ್ನಡ, ತೆಲುಗು, ಮಳಯಾಳಂ ಹಾಗೂ ತಮಿಳು ಚಿತ್ರರಂಗದ ಅತ್ಯುತ್ತಮ ಆಯ್ಕೆಗಳಿಗೆ ಆಯಾ ಭಾಷಾವಾರು ಪ್ರತ್ಯೇಕ ಪ್ರಶಸ್ತಿ ಲಭಿಸಲಿದೆ.
#FilmfareFlashback: We’re not over #Nayanthara‘s winning moment from the #FilmfareAwardsSouth.❤️
Get ready for the 69th SOBHA Filmfare Awards South 2024 with Kamar Film Factory.#69thSobhaFilmfareAwardsSouth2024 pic.twitter.com/FS75Var7zG
— Filmfare (@filmfare) July 18, 2024
ಈ ಪ್ರಕ್ರಿಯೆಯಲ್ಲಿ ಕನ್ನಡದ ಚಿತ್ರಗಳು ಹಾಗೂ ಪಾತ್ರವರ್ಗಗಳ ನಾಮಿನೇಷನ್ ಪ್ರಕ್ರಿಯೆಯೂ ಮುಗಿದಿದ್ದು, ಪ್ರಶಸ್ತಿ ರೇಸ್‌ನಲ್ಲಿರುವ ಅತ್ಯುತ್ತಮ ಚಿತ್ರಗಳು ಹಾಗೂ ನಟ/ಪೋಷಕ ನಟ/ಹಾಡುಗಳ ವಿವರ ಇಲ್ಲಿದೆ.
ನಾಮಿನೇಶನ್ ಹಂತದಲ್ಲಿ ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಾಸಂತ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಬಹುಪಾಲು ಪಡೆದಿದ್ದು, ಎಲ್ಲಾ ವಿಭಾಗಗಳಲ್ಲೂ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಇನ್ನುಳಿದಂತೆ ಕೌಸಲ್ಯಾ ಸುಪ್ರಜಾ ರಾಮ, ಸ್ವಾತಿ ಮುತ್ತಿನ ಮಳೆಹನಿಯೇ, ಕಾಟೇರ ಚಿತ್ರಗಳಿದ್ದು, ಮನ್ಸೋರೆ ನಿರ್ದೇಶನದ ಕಲಾತ್ಮಕ, ಸಾಮಾಜಿಕ ಸಂದೇಶವುಳ್ಳ ಚಿತ್ರ 19.20.21 ಕೂಡ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಿರುವುದು ವಿಶೇಷ.
ನಾಮಿನೇಷನ್ ವಿವರ ಈ ಕೆಳಗಿನಂತಿದೆ.
ಕನ್ನಡದ ಅತ್ಯುತ್ತಮ ಚಿತ್ರಗಳು:
– 19.20.21
– ಡೇರ್‌ಡೆವಿಲ್ ಮುಸ್ತಫಾ
– ಕಾಟೇರ
– ಕೌಸಲ್ಯಾ ಸುಪ್ರಜಾ ರಾಮ
– ಸಪ್ತ ಸಾಗರದಾಚೆ ಎಲ್ಲೋ
– ಸ್ವಾತಿ ಮುತ್ತಿನ ಮಳೆಹನಿಯೇ
ಅತ್ಯುತ್ತಮ ನಿರ್ದೇಶಕರು:
– ಹೇಮಂತ್ ಎಂ.ರಾವ್ (ಸಪ್ತ ಸಾಗರದಾಚೆ ಎಲ್ಲೋ)
– ಮನ್ಸೋರೆ (19.20.21)
– ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ)
– ರಾಜ್ ಬಿ.ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)
– ಶಶಾಂಕ್ ಸೋಘಲ್ (ಡೇರ್‌ಡೆವಿಲ್ ಮುಸ್ತಫಾ)
– ತರುಣ್ ಸುಧೀರ್ (ಕಾಟೇರ)
ಅತ್ಯುತ್ತಮ ನಾಯಕ ನಟ:
– ದರ್ಶನ್ (ಕಾಟೇರ)
– ನಾಗಭೂಷಣ (ಟಗರು ಪಲ್ಯ)
– ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ)
– ರಾಜ್ ಬಿ.ಶೆಟ್ಟಿ (ಸ್ವಾತಿ ಮುತ್ತಿನ ಮಳೆಹನಿಯೇ)
– ಶಿಶಿರ್ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)
– ಶಿವರಾಜ್‌ಕುಮಾರ್ (ಘೋಸ್ಟ್)
ಅತ್ಯುತ್ತಮ ನಾಯಕಿ ನಟಿ:
– ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ)
– ಅಮೃತಾ ಪ್ರೇಮ್ (ಟಗರು ಪಲ್ಯ)
– ಮಿಲನಾ ನಾಗರಾಜ್ (ಕೌಸಲ್ಯಾ ಸುಪ್ರಜಾ ರಾಮ)
– ರುಕ್ಮಿಣಿ ವಾಸಂತ್ (ಸಪ್ತ ಸಾಗರದಾಚೆ ಎಲ್ಲೋ)
– ಸಿಂಧೂ ಶ್ರೀನಿವಾಸಮೂರ್ತಿ (ಆಚಾರ್ & ಕಂ.)
– ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆಹನಿಯೇ)
Here are the nominations for Best Actor In A Leading Role (Female) category at the 69th SOBHA Filmfare Awards South 2024 With Kamar Film Factory.#69thFilmfareAwardsSouth2024 pic.twitter.com/6n4m1ubolD
— Filmfare (@filmfare) July 17, 2024
ಅತ್ಯುತ್ತಮ ಪೋಷಕ ನಟ:
– ನಾಗಭೂಷಣ್ (ಕೌಸಲ್ಯಾ ಸುಪ್ರಜಾ ರಾಮ)
– ಪೂರ್ಣಚಂದ್ರ (ಡೇರ್‌ಡೆವಿಲ್ ಮುಸ್ತಫಾ)
– ರಾಜೇಶ್ ನಟರಂಗ (19.20.21)
– ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ)
– ರಂಗಾಯಣ ರಘು (ಟಗರು ಪಲ್ಯ)
ಅತ್ಯುತ್ತಮ ಪೋಷಕ ನಟಿ:
– ಗುಂಜಾಲಮ್ಮ (ಪಿಂಕಿ ಎಲ್ಲಿ)
– ಎಂ.ಡಿ.ಪಲ್ಲವಿ (19.20.21)
– ಶ್ರುತಿ (ಕಾಟೇರ)
– ಸುಧಾ ಬೆಳವಾಡಿ (ಕೌಸಲ್ಯಾ ಸುಪ್ರಜಾ ರಾಮ)
– ತಾರಾ (ಟಗರು ಪಲ್ಯ)
ಅತ್ಯುತ್ತಮ ಮ್ಯೂಸಿಕ್ ಆಲ್ಬಮ್:
– ಕಾಟೇರ (ವಿ.ಹರಿಕೃಷ್ಣ)
– ಕೌಸಲ್ಯಾ ಸುಪ್ರಜಾ ರಾಮ (ಅರ್ಜುನ್ ಜನ್ಯ)
– ಸಪ್ತ ಸಾಗರದಾಚೆ ಎಲ್ಲೋ (ಚರಣ್ ರಾಜ್)
– ಸ್ವಾತಿ ಮುತ್ತಿನ ಮಳೆಹನಿಯೇ (ಮಿಥುನ್ ಮುಕುಂದನ್)
– ಟಗರು ಪಲ್ಯ (ವಾಸುಕಿ ವೈಭವ್)
ಅತ್ಯುತ್ತಮ ಸಾಹಿತ್ಯ:
– ಆರ್.ಲಕ್ಷ್ಮಣ್ ರಾವ್ (ಯಾವ ಚುಂಬಕ – ಚೌಕಾಬಾರ)
– ಡಾಲಿ ಧನಂಜಯ (ಸಮಾಜ ಅನ್ನೋದು ದೊಡ್ದು ಕಣ – ಟಗರು ಪಲ್ಯ)
– ಧನಂಜಯ್ ರಂಜನ್ (ನದಿಯೇ ಓ ನದಿಯೇ – ಸಪ್ತ ಸಾಗರದಾಚೆ ಎಲ್ಲೋ)
– ಜಯಂತ್ ಕಾಯ್ಕಿಣಿ (ಪ್ರೀತಿಸುವೆ ಪ್ರೀತಿಸುವೆ – ಕೌಸಲ್ಯಾ ಸುಪ್ರಜಾ ರಾಮ)
– ಪ್ರಥ್ವಿ (ಮೆಲ್ಲಗೆ – ಸ್ವಾತಿ ಮುತ್ತಿನ ಮಳೆಹನಿಯೇ)
ಅತ್ಯುತ್ತಮ ಹಿನ್ನೆಲೆ ಗಾಯಕ:
– ಕಪಿಲ್ ಕಪಿಲನ್ (ನದಿಯೇ ಓ ನದಿಯೇ – ಸಪ್ತ ಸಾಗರದಾಚೆ ಎಲ್ಲೋ)
– ರವೀಂದ್ರ ಸೋರಗಾವಿ (ನೋಡಲಾಗದೇ ದೇವ – ವಿರಾಟಪುರ ವಿರಾಗಿ)
– ಸೋನು ನಿಗಮ್ (ಗೊಂಬೆ ಗೊಂಬೆ – ಕ್ರಾಂತಿ)
– ವಾಸುಕಿ ವೈಭವ್ (ನೊಂದ್ಕೋಬ್ಯಾಡ್ವೆ – ಟಗರು ಪಲ್ಯ)
– ವಿಜಯ್ ಪ್ರಕಾಶ್ (ಪುಣ್ಯಾತ್ಮ – ಕಾಟೇರ)
ಅತ್ಯುತ್ತಮ ಹಿನ್ನೆಲೆ ಗಾಯಕಿ:
– ಮಾಧುರಿ ಶೇಷಾದ್ರಿ (ಮೆಲ್ಲಗೆ – ಸ್ವಾತಿ ಮುತ್ತಿನ ಮಳೆಹನಿಯೇ)
– ಮಂಗ್ಲಿ (ಪಸಂದಾಗವ್ನೆ – ಕಾಟೇರ)
– ಪ್ರಥ್ವಿ ಭಟ್ (ಪ್ರೀತಿಸುವೆ ಪ್ರೀತಿಸುವೆ – ಕೌಸಲ್ಯಾ ಸುಪ್ರಜಾ ರಾಮ)
– ಸಂಗೀತಾ ಕಟ್ಟಿ (ಕಾಯೋ ಶಿವ ಕಾಪಾಡೋ ಶಿವ – ಪೆಂಟಾಗನ್)
– ಶ್ರೀಲಕ್ಷ್ಮೀ ಬೆಳ್ಮಣ್ಣು (ಕಡಲನು ಕಾಣ ಹೊರಟಿರೋ – ಸಪ್ತ ಸಾಗರದಾಚೆ ಎಲ್ಲೋ)
ಇಷ್ಟೇ ಅಲ್ಲದೇ, ಮಳಯಾಳಂ, ತಮಿಳು, ತೆಲುಗು ಭಾಷೆಗಳಲ್ಲೂ ನಾಮಿನೇಷನ್ ನಡೆದಿದ್ದು, ಹಲವು ದಿಗ್ಗಜ ನಟರು ಹಾಗೂ ಇನ್ನು ಕೆಲವು ಹೊಸ ಪರಿಚಯಗಳು ಕೂಡ ಪ್ರಶಸ್ತಿಗೆ ನಾಮಿನೇಟ್ ಆಗಿವೆ.
Here are the nominations for Best Actor In A Leading Role (Male) category at the 69th SOBHA Filmfare Awards South 2024 With Kamar Film Factory.#69thSobhaFilmfareAwardsSouth2024 pic.twitter.com/rAHhulyNd3
— Filmfare (@filmfare) July 17, 2024
ಇನ್ನು ಈ ಸೌತ್ ಇಂಡಿಯಾ ಫಿಲಂಫೇರ್ ಫೆಸ್ಟಿವಲ್ – 2024 ಹೈದರಾಬಾದ್‌ನಲ್ಲಿ ಆಗಸ್ಟ್ 03, 2024 ಕ್ಕೆ ನಡೆಯಲಿದ್ದು, ಅಂತಿಮವಾಗಿ ಆಯ್ಕೆಯಾದ ಚಿತ್ರಗಳು ಹಾಗೂ ನಟ/ನಿರ್ದೇಶಕರು, ಹಾಡುಗಾರರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.