4 ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ರಾಜ್…!!!

Published on

427 Views

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದಲ್ಲಿ ನಟ. ಚಿರು ಅಕಾಲಿಕ ಮರಣ ನೋವಿನ ಸಂಗತಿಯಾಗಿದೆ. ಪತ್ನಿ ಮೇಘನಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮಗುವಿನ ಮುಖವನ್ನು ನೋಡುವ ಮೊದಲೇ ಚಿರು ಚಿರನಿದ್ರೆ ಜಾರಿದ್ದಾರೆ.
ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ 10ವರ್ಷದಿಂದ ಪ್ರೀತಿಸುತ್ತಿದ್ದು, 2018 ರಂದು ವಿವಾಹವಾಗಿದ್ದಾರೆ. ಇತ್ತೀಚಿಗೆ ಅಷ್ಟೇ ಸಹೋದರ ಧ್ರುವ ಸರ್ಜಾ ಮದುವೆಯಾಗಿತ್ತು. ಅವರ ಕುಟುಂಬಕ್ಕೀಗ ಬರಸಿಡಿಲೇ ಬಡಿದಂತಾಗಿದೆ


ಎರಡು ವರ್ಷಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಮೇಘನಾ – ಚಿರು ಪ್ರೀತಿಯ ಕುಡಿ ಮೇಘನಾ ಹೊಟ್ಟೆಯಲ್ಲಿ ಬೆಳೆಯುತ್ತಿದೆ.
ಮೇಘನಾರಾಜ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ತಂದೆಯಾಗುವ ಖುಷಿಯಲ್ಲಿದ್ದ ಚಿರು ಇಂದು ಕುಟುಂಬದೊಂದಿಗಿಲ್ಲ. ಪತಿಯ ಪಕ್ಕದಲ್ಲಿ ಕುಳಿತಿರುವ ಮೇಘನಾ ಅವರನ್ನು ನೋಡಿದ್ರೆ ಕರಳು ಕಿತ್ತು ಬರುವಂತಿದೆ.
ಇತ್ತೀಚಿಗಷ್ಟೇ ಪತ್ನಿ ನಟಿ ಮೇಘನಾ ಮುತ್ತಿಕ್ಕುವ ಪೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದ ಚಿರು ಪತ್ನಿಯ ಜೊತೆಗಿನ ಪ್ರೀತಿಯನ್ನು ಸಾಲುಗಳಲ್ಲಿ ಬರೆದಿದ್ದರು.
ಸ್ಯಾಂಡಲ್ ವುಡ್ ನಲ್ಲಿ ಬಹು ಎತ್ತರಕ್ಕೆ ಬೆಳೆಯುವ ಕನಸು ಕಂಡಿದ್ದ ಚಿರು ಸರ್ಜಾ ಸಾವನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com