24 glorious Years of “Udaya TV” and 4 Fictions shows completes milestones

Published on

355 Views

ಉದಯ ಟಿವಿ, ಕರ್ನಾಟಕದ ಪ್ರಮುಖ ಮನರಂಜನಾ ವಾಹಿನಿಗಳಲ್ಲಿ ಒಂದು. ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಕನ್ನಡಿಗರ ಮನ ರಂಜಿಸುತ್ತಿರುವ ಈ ವಾಹಿನಿ, ತನ್ನದೇ ಆದ ನೋಡುಗ ವರ್ಗವನ್ನು ಹೊಂದಿದ್ದು, ಅಪಾರ ಜನಪ್ರಿಯತೆ ಹೊಂದಿರುವ ಕಾರ್ಯಕ್ರಮಗಳನ್ನು ಕನ್ನಡಿಗರಿಗಾಗಿ ಪ್ರಸ್ತುತ ಪಡಿಸಿದೆ. ಮೊದಲಿಗೆ ಸಿನಿಮಾ ಮತ್ತು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳ ಮೂಲಕ ಜನಮಾನಸವನ್ನು ಮಂತ್ರಮುಗ್ಧವಾಗಿಸಿದ ಉದಯ, ಕನ್ನಡ ಮೊದಲ ಉಪಗ್ರಹ ವಾಹಿನಿಯೂ ಹೌದು. ಧಾರಾವಾಹಿಗಳನ್ನು ಕೂಡ ಪ್ರಸ್ತುತ ಪಡಿಸುವ ಮೂಲಕ, ಪ್ರತಿಯೊಬ್ಬ ಕನ್ನಡಿಗನ ಹೃದಯ ಪ್ರವೇಶಿಸಿದ ಉದಯ, ಅಂದಿನಿಂದ ಇಂದಿನವರೆಗೆ ನೂರಾರು ಧಾರಾವಾಹಿಗಳನ್ನು ನಾಡಿಗಾಗಿ ನೀಡಿದೆ.
ಸದಭಿರುಚಿಯ, ಉತ್ತಮ ಕಥೆಗಳುಳ್ಳ ಸಿನಿಮಾಗಳನ್ನು ಪ್ರಸಾರ ಮಾಡುವ ಮೂಲಕ ಉದಯ ವಾಹಿನಿ ಎಲ್ಲರ ಮನ ಗೆದ್ದದ್ದು ಒಂದು ಕಡೆಯಾದರೆ, ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ರಂಗುರಂಗಿನ ಇವೆಂಟ್ಸ್‍ಗಳು, ಚಲನಚಿತ್ರ ಸಂಬಂಧೀ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ವೀಕ್ಷಕರಿಗೆ ಹೊಸ ಅನುಭವವನ್ನು ಕೂಡ ಒದಗಿಸಿತು. ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು, ಉದಯ ವಾಹಿನಿಯಲ್ಲಿ ಕಾಣಿಸಿಕೊಂಡರು, ವಾಹಿನಿಗಾಗಿ ಧಾರಾವಾಹಿಗಳನ್ನು ನಿರ್ದೇಶಿಸಿದರು. ಅದೆಷ್ಟೋ ಕನ್ನಡದ ತಾರೆಗಳು ಮೊದಲಿಗೆ ಕಾಣಿಸಿಕೊಂಡದ್ದು ಉದಯ ವಾಹಿನಿಯಲ್ಲಿ ಎನ್ನುವುದು ಮುಖ್ಯ ವಿಚಾರ.
ಈಗಲೂ ಕೂಡ ತನ್ನ ಹಳೆಯ ಹೊಳಪನ್ನು ಕಳೆದುಕೊಳ್ಳದ ಉದಯ ವಾಹಿನಿ, ಉತ್ತಮವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ಧಾರಾವಾಹಿಗಳು, ಹೊಸ ಹೊಸ ಸಿನಿಮಾಗಳ ಪ್ರಸಾರದ ಮೂಲಕ ಎಲ್ಲ ವೀಕ್ಷಕರನ್ನು ತಲುಪುತ್ತಿದೆ. ಇಂತಹ ಉದಯ ವಾಹಿನಿ ಇದೀಗ ಇಪ್ಪತ್ತನಾಲ್ಕು ವರ್ಷಗಳನ್ನು ಕಳೆದು ಇಪ್ಪತೈದೇ ವರ್ಷಕ್ಕೆ ಕಾಲಿಟ್ಟಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ಉತ್ತಮ ಕಾರ್ಯಕ್ರಮಗಳ ಮೂಲಕ ಕನ್ನಡನಾಡಿನ ಮನ ಗೆಲ್ಲಲು ಹೊರಟಿದೆ.

300 ರ ಸಂಭ್ರಮದಲ್ಲಿ ಜೋ ಜೋ ಲಾಲಿ,..

ಬದಲಾಗ್ತಿರೋ ಅಭಿರುಚಿಗೆ ತಕ್ಕಂತೆ ಉದಯ ಟಿವಿ ಕನ್ನಡಿಗರಿಗೆ ವಿಭಿನ್ನ ಕಾರ್ಯಕ್ರಮಗಳನ್ನ ನೀಡುತ್ತಾ ಬರ್ತಿದೆ. ಧಾರಾವಾಹಿ ಕ್ಷೇತ್ರದಲ್ಲಿ ಹೊಸ ಹೊಸ ಕಥೆಗಳೊಂದಿಗೆ ಸಂಚಲನವನ್ನ ಮೂಡಿಸಿದೆ. ತಾಯಿ ಮಗುವಿನ ಬಾಂಧವ್ಯದ ಕಥೆಯನ್ನ ಆಧರಿಸಿ ಶುರುವಾದ ಧಾರಾವಾಹಿ ಜೋ ಜೋ ಲಾಲಿ. ಈ ಭಾವನಾತ್ಮಕ ಎಳೆ ಹೊಂದಿರೋ ಧಾರಾವಾಹಿಗೆ ಈಗ 300ರ ಸಂಭ್ರಮ.

ಒಂದು ಧಾರಾವಾಹಿ ಯಶಸ್ವಿಯಾಗೋಕೆ ಕಾರಣಗಳು ಹಲವಾರು , ಒಳ್ಳೆಯ ಕಥೆ , ಅಚ್ಚುಕಟ್ಟಾದ ನಿರ್ದೇ ಶನ ,ಸಂಭಾಷಣೆ, ಕೂತೂಹಲಕಾರಿ ತಿರುವುಗಳು , ಅಧ್ಬುತ ನಟನಾ ವರ್ಗ ಹೀಗೆ ಎಲ್ಲಾ ಹಂತದಲ್ಲೂ ಜೋ ಜೋ ಲಾಲಿ ವೀಕ್ಷಕರಿಗೆ ಮನೋರಂಜನೆ ನೀಡುತ್ತಾ ಬಂದಿದೆ. ಮುಗ್ಧೆ ರುಕ್ಮಿಣಿ , ಹೂವಿನಂಥ ಹುಡುಗಿ ರಾಧಾ , ಮುದ್ದು ಮನಸಿನ ಮಾಧವ , ನಿಶ್ಕಲ್ಮಶ ಹೃದಯದ ಪ್ರೀತಂ , ಎಲ್ಲವೂ ಧನಾತ್ಮಕ ಪ್ರಭಾವ ಬೀರುವ ಪಾತ್ರಗಳು , ಇವರೆಲ್ಲರ ಬದುಕಿನ ದಿಕ್ಕನೇ ಬದಲಾಯಿಸೋ ಸವಾಲುಗಳು ಜೋ ಜೋ ಲಾಲಿಯ ಮುಖ್ಯ ಅಂಶಗಳು.

ಪ್ರೀತಿಸಿದ ಹುಡಗನ್ನ ಹಾಗು ತಾಯಿಯನ್ನ ಕಾಪಾಡುವ ಸಲುವಾಗಿ ರಾಧಾ ಬಾಡಿಗೆ ತಾಯಿಯಾಗುತ್ತಾಳೆ, ತಾನು ಮಗೂನ ಹೆತ್ತು ಕೊಟ್ಟಿರುವುದು ರುಕ್ಮಿಣಿಗೆ ಅಂತ ಗೊತ್ತಾದ ಮೇಲೆ ಸಂತೋಷ ಪಡುತ್ತಾಳೆ. ರಾಧಾಳಿಗೆ ಮೋಸವಾಗಿ ಗರ್ಭಕೋಶ ಕಳೆದುಕೊಂಡಿದ್ದಾಳೆ ಎಂದು ನಂಬಿರುವ ರುಕ್ಮಿಣಿ ತನ್ನ ಮನೆಯಲ್ಲಿ ಇರಿಸಿಕೊಳ್ಳುತ್ತಾಳೆ . ಆಕಸ್ಮಿಕವಾಗಿ ಮಾಧವನಿಗೆ ರಾಧಾನೇ ಬಾಡಿಗೆ ತಾಯಿ ಅನ್ನೋ ಸತ್ಯ ಗೊತ್ತಾಗುತ್ತೆ , ಅವಳ ಬಗ್ಗೆ ಕನಿಕರ ಮೂಡಿ ಅವಳನ್ನ ಹೆಚ್ಚು ಕಾಳಜಿ ಮಾಡೋಕೆ ಶುರುವಾಡುತ್ತಾನೆ . ಇದೆಲ್ಲದರ ನಡುವೆ ಸೋಲಿನಿಂದ ಬೇಸತ್ತಿರೋ ಮಹೇಶ್ವರಿ ರುಕ್ಮಿಣಿ ಮಾಧವನ ದೂರ ಮಾಡೋಕೆ ರಾಧಾಳನ್ನೆ ಅಸ್ತ್ರ ಮಾಡಿಕೊಳ್ಳುತ್ತಾಳೆ. ರುಕ್ಮಿಣಿಗೆ ಸತ್ಯ ಗೊತ್ತಾದರೆ ರಾಧಾ ಮೇಲಿರೋ ಪ್ರೀತಿ ದ್ವೇಷವಾಗಿ ಬದಲಾಗುತ್ತಾ? ಮಹೇಶ್ವರಿ ಕುತ್ತಂತ್ರಗಳಿಂದ ಪ್ರೀತಿಯ ದಂಪತಿ ರುಕ್ಮಿಣಿ ಮಾಧವ ಬೇರೆಯಾಗುತ್ತಾರಾ? ರಾಧಾ ನೆನಪಲ್ಲೆ ಮಾನಸಿಕವಾಗಿ ಕುಗ್ಗುತ್ತಿರೊ ಪ್ರೀತಂ ಪಾಲಿಗೆ ಮತ್ತೆ ರಾಧಾ ಸಿಗುತ್ತಾಳಾ? ಇವೆಲ್ಲಾ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳು ಉತ್ತಿರಸಲಿವೆ.

ಜೋ ಜೋ ಲಾಲಿ ಸೋಮವಾರದಿಂದ ಶುಕ್ರವಾರ ಸಂಜೆ 6.30ಕ್ಕೆ ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

==========================================================

ಅವಳು-300

ಕಳೆದ ವರ್ಷ ಏಪ್ರಿಲ್ 24 ರಂದು ಉದಯ ಟಿವಿಯಲ್ಲಿ ಅವಳು ಧಾರಾವಾಹಿ ಮೊದಲ ಸಂಚಿಕೆಯೊಂದಿಗೆ ಆರಂಭಗೊಂಡು, ಈಗ 300ನೇ ಸಂಚಿಕೆಯತ್ತ ಸಾಗುತ್ತಿದೆ. ಅಕ್ಕ ತಂಗಿ ಅತ್ತೆಸೊಸೆಯಾಗೋ ಈ ವಿಶೇಷ ಕಥೆಯ ಮೂಲಕ ಜನರ ಮನಗೆದ್ದು, ಈಗ 300ರ ಸಂಭ್ರಮಕ್ಕೆ ಸಾಕ್ಷಿಯಾಗಿದೆ.

ಅಕ್ಕ ತಂಗಿ ಒಂದೇ ಮನೆಗೆ ಸೊಸೆಯಾಗಿ ಬಂದ ನಂತರ ಹಲವಾರು ಮನಸ್ತಾಪಗಳು ಅಕ್ಕನನ್ನೇ ತಂಗಿ ದ್ವೇಷಿಸುವಂತೆ ಮಾಡುತ್ತದೆ. ತಂದೆಗೆ ಆಕ್ಸಿಡೆಂಟ್ ಮಾಡಿಸಿ, ಇಡೀ ಆಸ್ತಿಯನ್ನ ತನ್ನ ಹೆಸರಿಗೆ ಬರೆಸಿ ಮಧು ಮತ್ತು ಮಾನಸಾಳನ್ನ ಸಿದ್ಧಾರ್ಥ ಬೀದಿಪಾಲು ಮಾಡುತ್ತಾನೆ. ಇದಕ್ಕೆ ಶ್ವೇತಾಳ ಸಾಥ್ ಸಹ ಸಿಗುವುದು. ಅಪಘಾತದಲ್ಲಿ ಪ್ರಜ್ಞಾಹೀನನಾಗಿರೋ ಗಂಡ ಹಾಗೂ ಇಡೀ ಆಸ್ತಿ ಕಳೆದುಕೊಂಡ ಮಾನಸಾ ಜೀವನದ ಸವಾಲುಗಳನ್ನ ಹೇಗೆ ಎದುರಿಸುತ್ತಾಳೆ? ಹಾಗೂ ಸತ್ತಿದೆ ಅಂತ ತಿಳಿದುಕೊಂಡಿರುವ ಅವಳ ಮಗು ಬದುಕಿದೆ ಅನ್ನೋ ಸತ್ಯ ಗೊತ್ತಾಗೋದು ಯಾವಾಗ ಎಂಬ ಕುತುಹಲ ಈ 300 ರ ಸಂಚಿಕೆಯ ಟ್ವಿಸ್ಟ್ ಆಗಿರುತ್ತದೆ.

ಧ್ರುವ್ ಮೀಡಿಯಾ ಕ್ರಾಫ್ಟ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಕುಲಕರ್ಣಿ ಅವರ ಸಾರಥ್ಯದಲ್ಲಿ ಮೂಡಿ ಬರ್ತಿರೋ ಈ ಧಾರಾವಾಹಿಗೆ ನಾಗಾರಾಜ್ ಉಪ್ಪುಂದ ಅವರ ಛಾಯಾಗ್ರಾಹಣ ಮತ್ತು ನಿರ್ದೇಶನವಿದೆ. ಹಾಗೂ ವಿನಯ್ ಕೃಷ್ಣಸ್ವಾಮಿ ಅವರ ಸಂಭಾಷಣೆ ಸೆಕ್ಕಿಳರ್ ಚೈನ್ನೈ ಅವರ ಚಿತ್ರಕಥೆಯೊಂದಿಗೆ ಅಜಯ್ ಬಿ ಅವರ ಸಂಕಲನ ಅವಳಿಗಿದೆ. ಉದಯ ಟಿವಿಯ 24ರ ಹಬ್ಬಕ್ಕೆ ಅವಳು 300ರ ಸಂಭ್ರಮವೂ ಮೆರುಗು ನೀಡಿದೆ.

ಅವಳು ಕಥೆಯಾದವಳು ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

=================================================================================

ಕಾವೇರಿ 250 ನೇ ಸಂಚಿಕೆ ಸಂಭ್ರಮ

ಯಾವ ಗಳಿಗೆಯಲ್ಲಿ ಕಾವೇರಿ ಎಂದು ಹೆಸರಿಟ್ಟರೋ ಅಂದಿನಿಂದ ಎದುರಾದ ಎಲ್ಲ ಕಷ್ಟಗಳನ್ನು ಕರಗಿಸುತ್ತಾ, ಪರಿಸ್ಥಿತಿಯನ್ನು ತಿಳಿಗೊಳಿಸುತ್ತಾ ಹರಿಯುತ್ತಿದ್ದಾಳೆ. ಎಲ್ಲರೂ ಮೆಚ್ಚುವಂತೆ, ಪ್ರೀತಿಸುವಂತೆ, ಆರಾಧಿಸುವಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡ ಕಾವೇರಿ ತನ್ನೆಲ್ಲ ನೋವನ್ನು ನುಂಗಿ ಖುಷಿ ಹಂಚುವವಳು. ಈಕೆ ಇವತ್ತು ಎಲ್ಲರಿಗೂ ಪರಿಚಿತ. 250 ದಿನಗಳ ಕಾಲ ಕನ್ನಡಿಗರ ಮನೆ ಮನಕ್ಕೆ ತಲುಪಿದಮೇಲೆ ಅಷ್ಟೂ ಆಗದಿದ್ದರೆ ಹೇಗೆ?
ಹೌದು, ಕನ್ನಡದ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕಾವೇರಿ” ಧಾರಾವಾಹಿ 250 ಸಂಚಿಕೆಗಳನ್ನು ಪೂರೈಸಿ ಮುನ್ನೂರರತ್ತ ಮುನ್ನುಗ್ಗುತ್ತಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದ ಧಾರಾವಾಹಿ ಇದು. ಡಿ2 ಮೀಡಿಯಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಒಂದೆಡೆ ಕಾವೇರಿ ಎಂಬ ನಿಸ್ವಾರ್ಥ ಮನೋಭಾವದ ಹೆಣ್ಮಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳೆ. ತನ್ನನ್ನು ಪ್ರೀತಿಸುತ್ತಿದ್ದ ಮಿಥುನನನ್ನು ತಂಗಿ ಹಾಸಿನಿಗೆ ಬಿಟ್ಟುಕೊಡುತ್ತಾಳೆ. ಅವರ ಬದುಕನ್ನು ಸರಿ ಮಾಡುತ್ತಾಳೆ. ಸ್ನೇಹಿತ ಸಂತೋಷ್ ಮನೆಯಲ್ಲಿ ಉಳಿದುಕೊಳ್ಳುವ ಕಾವೇರಿ ಅಲ್ಲಿನ ಮಕ್ಕಳಿಗೆ ತಾಯಿಯಾಗಿ ನಟಿಸುತ್ತಾ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣವಾಗುತ್ತಾಳೆ. ಇನ್ನೊಂದೆಡೆ ಕಾವೇರಿ ಬಗ್ಗೆ ಮೊದಲಿಂದಲೂ ಪ್ರೀತಿಯನ್ನಿಟ್ಟುಕೊಂಡಿದ್ದ ಸಂತೋಷ್ ಅವಳಿಗೆ ತನ್ನ ಪ್ರೀತಿ ಹೇಳಿಕೊಳ್ಳುವ ಪ್ರಯತ್ನ ಮಾಡುತ್ತಾನಾದರೂ, ಪರಿಶುದ್ಧ ಸ್ನೇಹ ಹಾಳಾದೀತೆಂಬ ಆತಂಕ ಅವನನ್ನು ತಡೆಯುತ್ತದೆ. ಆದರೆ ಸಂತೋಷ್ ಮನೆಯಲ್ಲಿ ಆತನ ಮದುವೆ ಪ್ರಸ್ತಾಪ ಬಂದಾಗ ವಿಧಿಯಿಲ್ಲದೇ ಅವಳಿಗೆ ಪ್ರೀತಿಯ ವಿಚಾರವನ್ನು ಹೇಳಬೇಕಾಗುತ್ತದೆ. ಅಷ್ಟರಲ್ಲಾಗಲೇ ವಸುಂಧರಾ ಅಮೂಲ್ಯಾಳನ್ನು ನೋಡಿ, ಆಕೆಯೇ ತನ್ನ ಸೊಸೆ ಅಂತ ನಿರ್ಧರಿಸುತ್ತಾಳೆ. ಸಂತೋಷ್‍ನನ್ನು ಈ ಮದುವೆಗೆ ಒಪ್ಪಿಸುವಂತೆ ಕಾವೇರಿಗೆ ಹೇಳುತ್ತಾಳೆ. ಆ ಮಾತನ್ನು ಉಳಿಸಿಕೊಳ್ಳಲು ಸಂತೋಷ್‍ನ ಪ್ರೀತಿಯನ್ನೂ ತ್ಯಾಗ ಮಾಡುವ ಸಂದರ್ಭ ಕಾವೇರಿಗೆ ಎದುರಾಗುತ್ತದೆ. ಸಂತೋಷ್ ತಂದೆ ಹೂಡುವ ಸಂಚಿನ ಭಾಗವಾಗಿಯೇ ಈ ಎಲ್ಲ ಘಟನೆಗೆಳು ನಡೆಯುತ್ತಿದ್ದು, ಕಾವೇರಿ ಸಂತೋಷ್ ಹೇಗೆ ಒಂದಾಗುತ್ತಾರೆ ಎಂಬುದೇ ಮುಂದಿನ ಕಥೆ.

ಉತ್ತಮ ಚಿತ್ರಕಥೆ, ಸಂಭಾಷಣೆ ಧಾರಾವಾಹಿಯ ಮೆರಗನ್ನು ಹೆಚ್ಚಿಸಿದೆ. ಗುಣಮಟ್ಟದ ಚಿತ್ರೀಕರಣ, ಸಂಕಲನ ಹಾಗೂ ಸಂಗೀತ ಈ ಧಾರಾವಾಹಿಯ ಇನ್ನೊಂದು ಹೈಲೈಟ್.ಡಿ 2 ಮೀಡಿಯಾದ ಆರ್ ವಿಜಯ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದು, ಶ್ರೀನಿವಾಸ ಶಿಡ್ಲಘಟ್ಟ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಭಿಲಾಷ್ ಗೌಡ ಸಂಭಾಷಣೆ ಬರೆಯುತ್ತಿದ್ದಾರೆ. ವಿನು, ದರ್ಶನ್ ಸಂಕಲನ ಮಾಡುತ್ತಿದ್ದಾರೆ. ವಿಕ್ರಂ, ಶೋಭಾ ಶೆಟ್ಟಿ ನಾಯಕ ನಾಯಕಿ ಪಾತ್ರ ನಿರ್ವಹಿಸುತ್ತಿದ್ದರೆ, ಸುರೇಶ್ ರೈ, ಅಶ್ವಿನಿ ಗೌಡ, ಶ್ರೀಕಾಂತ್ ಹೆಬ್ಳೀಕರ್ ಮುಖ್ಯ ತಾರಾಗಣದಲ್ಲಿದ್ದಾರೆ.

ಕಾವೇರಿ ಧಾರಾವಾಹಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.

==========================================================================================

ಬ್ರಹ್ಮಾಸ್ತ್ರ -100

ಎರಡು ರಾಜ್ಯಗಳು, ದ್ವೇಷ ಕ್ರೌರ್ಯದ ನಡುವೆ ಮೂಡುವ ಪ್ರೇಮ ಕಥೆಯೇ ಬ್ರಹ್ಮಾಸ್ತ್ರ. ಕಿರುತೆರೆಯಲ್ಲೇ ವಿಭಿನ್ನ ಶೈಲಿಯೊಂದಿಗೆ ರವಿ ಗರಣಿ ಅವರ ನಿರ್ಮಾಣದಲ್ಲಿ ಬರುತ್ತಿರೋ ಈ ಧಾರಾವಾಹಿ 100ನೇ ಸಂಚಿಕೆಯತ್ತ ಸಾಗುತ್ತಿದೆ.
ತೆಲುಗು ಹುಡುಗಿ ಶಿವರಂಜಿನಿ ಮತ್ತು ಕನ್ನಡದ ಹುಡುಗ ಸಂತು ನಡುವಿನ ಪ್ರೇಮಕ್ಕೆ ನಾಯಕಿಯ ಮನೆಯವರ ವಿರೋಧವಿರುತ್ತದೆ. ಇದರ ನಡುವೆಯೂ ಮೂಗನ ರೀತಿ ನಟಿಸುತ್ತಾ ಮನೆಯವರೆಲ್ಲರ ಮನಗೆದ್ದು, ಶಿವರಂಜಿನಿಯನ್ನ ಪಡೆಯಬೇಕೆಂದಿರುತ್ತಾನೆ. ಆದರೆ ನಾಯಕಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗುತ್ತದೆ. ಇದನ್ನ ತಪ್ಪಿಸಲು ಸಂತು ಇರುವುದಿಲ್ಲ. ಮುಂದೇನೂ ಅನ್ನೋದು ಈ ನೂರರ ಸಂಚಿಕೆಯ ಕುತೂಹಲ.
ಶ್ರೀಕಾಂತ್ ಅವರ ಸಂಭಾಷಣೆಯೊಂದಿಗೆ ಮಂಜುನಾಥ್ ಸುರೇಂದ್ರ ಅವರ ಸಂಕಲನದಲ್ಲಿ ತಿಲಕ್ ಅವರ ನಿರ್ದೇಶನದಲ್ಲಿ ಬ್ರಹ್ಮಾಸ್ತ್ರ ಕನ್ನಡಿಗರ ಮನೆಮಾತಾಗಿದೆ.

ಬ್ರಹ್ಮಾಸ್ತ್ರ ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

Sorry, no posts matched your criteria.

More Buzz

Trailers 5 months ago

Rudra Garuda Purana Official Teaser Starring Rishi, Priyanka

Trailers 5 months ago

Pepe Kannada Movie Trailer Starring Vinay Rajkumar

BuzzKollywood Buzz 5 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 5 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 5 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 5 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 5 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 5 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 5 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 6 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 6 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

BuzzShort Films 6 months ago

Kanjoos Kubera Short Film Official Video: ಕಂಜ್ಯೂಸ್ ಕುಬೇರ ಕನ್ನಡ ಕಿರುಚಿತ್ರ ನೋಡಿ.

Copyright ©2025 . All Rights Reserved. privacy | terms Whatsapp: 9538193653 Email: hello@flixoye.com