ಈ ಓಟಿಟಿಯಲ್ಲಿ ಶೀಘ್ರವೇ ಬರಲಿದೆ Kalki 2898 AD – ಆದರೂ ಚಿತ್ರದ ಥಿಯೇಟರ್ ಅನುಭವವೇ ಬೇರೆ
ಡಾರ್ಲಿಂಗ್ ಪ್ರಭಾಸ್, ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್ ಮುಂತಾದ ಖ್ಯಾತ ನಟ ನಟಿಯರೇ ಅಭಿನಯಿಸಿರುವಂತಹ ಬಹುನಿರೀಕ್ಷಿತ ಚಿತ್ರ ಕಲ್ಕಿ 2898 AD ಬಿಡುಗಡೆಯಾಗಿದ್ದು, ಅಭಿಮಾನಿಗಳ ಅಪಾರ ನಿರೀಕ್ಷೆಯಂತೆಯೇ ಅಮೋಘ ಪ್ರದರ್ಶನ ಕಾಣುತ್ತಿದೆ.
The epic blockbuster #Kalki2898AD receives unanimous acclaim from the public on all popular platforms ❤️🔥
Experience the magic in cinemas now!#EpicBlockbusterKalki @SrBachchan @ikamalhaasan #Prabhas @deepikapadukone @nagashwin7 @DishPatani @Music_Santhosh @VyjayanthiFilms… pic.twitter.com/GjbP14I0OE
— Kalki 2898 AD (@Kalki2898AD) June 28, 2024
₹ 600 ಕೋಟಿ ಬಜೆಟ್‌ನೊಂದಿಗೆ ನಾಗ್ ಅಶ್ವಿನ್ ಅವರು ನಿರ್ದೇಶಿಸುತ್ತಿರುವ ಈ ಸೈ-ಫೈ ಮೂವೀಯ ಒಟಿಟಿಗೆ ಹಕ್ಕುಗಳು ಈಗಾಗಲೇ ಮಾರಾಟವಾಗಿದೆಯಂತೆ!
ಚಿತ್ರ ಯಶಸ್ವಿಯಾಗಿ ಥಿಯೇಟರ್ ಪ್ರದರ್ಶನ ಕಂಡ ನಂತರ, ಒಂದೆರಡು ತಿಂಗಳಲ್ಲಿ ಸಿನಿಪ್ರಿಯರ ನಿರೀಕ್ಷೆಗೆ ತಕ್ಕಂತೆಯೇ ಓಟಿಟಿಗಳಲ್ಲಿ ರಿಲೀಸ್ ಆಗುತ್ತದೆ. ಹಾಗೆಯೇ ಬಹುತೇಕ ಆಗಸ್ಟ್ ಅಥವಾ ಸೆಪ್ಟೆಂಬರ್ ಅಂತ್ಯದೊಳಗೆ ಕಲ್ಕಿ ಓಟಿಟಿಗೆ ಬರಲಿದೆ ಎನ್ನಲಾಗಿದೆ.
ಹಿಂದೂ ಪುರಾಣಗಳನ್ನು ಆಧರಿಸಿದ ಕಲ್ಕಿ 2898 AD, ಇದರಲ್ಲಿ ಅಗಸ್ತ್ಯ ಋಷಿಯ ಕಲ್ಕಿ ಪುರಾಣ ಮತ್ತು ವೇದ ವ್ಯಾಸರ ಮಹಾಭಾರತ ಅಂಶಗಳನ್ನು ಒಳಗೊಂಡು, ವೈಜ್ಞಾನಿಕ ಕಲ್ಪನೆಯಲ್ಲಿ ಮೂಡಿಬಂದಿದೆ. ಈ ಚಿತ್ರದ ಒಟಿಟಿ ಹಕ್ಕುಗಳನ್ನು ಈಗಾಗಲೇ ಎರಡು ದಿಗ್ಗಜ ಆನ್‌ಲೈನ್ ಓಟಿಟಿ ಪ್ಲಾಟ್‌ಫಾರಂಗಳಿಗೆ ಚಿತ್ರತಂಡ ಹಂಚಿದ್ದು, ಬಹುಕೋಟಿ ವೆಚ್ಚಕ್ಕೆ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳು ಮಾರಾಟವಾಗಿವೆ.
After watching the movie #Kalki28989AD twice
There is one thing to say
Amitabh Bachchan is the soul of this movie
If this movie is successful and the power of the movie works and is strong
It’s just because of @SrBachchan
Amit ji’s performance is beyond imagination
I missed… pic.twitter.com/Z6iKovOPTi— Moses Sapir (@MosesSapir) June 28, 2024
ಯೆಸ್. ಭಾಷೆಗಳ ಆಧಾರದಲ್ಲಿ ಚಿತ್ರದ ಹಕ್ಕುಗಳನ್ನು ವಿತರಿಸಿರುವ ಚಿತ್ರತಂಡ, ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್‌ಗೆ ಹಾಗೂ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಗೆ ಮಾರಾಟ ಮಾಡಿದೆ ಎನ್ನಲಾಗಿದೆ. ಕೇವಲ ಹಿಂದಿ ಆವೃತ್ತಿಯನ್ನು ಬರೋಬ್ಬರಿ ₹175 ಕೋಟಿಗೆ ನೆಟ್‌ಫ್ಲಿಕ್ಸ್ ಖರೀದಿಸಿದರೆ, ಅಮೆಜಾನ್ ಮಲ್ಟಿ ಲಾಂಗ್ವೇಜ್ ಆವೃತ್ತಿಯನ್ನು ₹ 200 ಕೋಟಿ ಗೆ ಖರೀದಿಸಿದೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಚಿತ್ರತಂಡ ಅಥವಾ ಒಟಿಟಿ ಪ್ಲಾಟ್‌ಫಾರಂಗಳು ಈ ಬಗ್ಗೆ ಹೇಳಿಕೆ ನೀಡಿಲ್ಲ.
ಕಲ್ಕಿ 2898 AD ಸಿನಿಮಾ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಅವರನ್ನಷ್ಟೇ ಅಲ್ಲದೇ, ದಿಶಾ ಪಟಾನಿ, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ದಿಗ್ಗಜ ಡೈರೆಕ್ಟರ್ ರಾಜಮೌಳಿ ಹಾಗೂ ಮೃಣಾಲ್ ಠಾಕೂರ್ ಮುಂತಾದ ಖ್ಯಾತ ನಟನಟಿಯರೂ ವಿಭಿನ್ನ ಅತಿಥಿ ಪಾತ್ರಗಳಲ್ಲಿ ಚಿತ್ರದಲ್ಲಿ ಕಮಾಲ್ ಮಾಡಿದ್ದಾರೆ.
ಕೇವಲ ಹಿಂದಿ ಆವೃತ್ತಿಯಲ್ಲಿ ಮಾತ್ರ ಕಲ್ಕಿ 2898 AD ಕಮಾಲ್ ಮಾಡ್ತಿರೋದಲ್ಲ. ಬದಲಾಗಿ, ಎಲ್ಲಾ ಭಾಷೆಯ ಆವೃತ್ತಿಗಳಲ್ಲೂ ಚಿತ್ರ ದಾಖಲೆಗಳನ್ನು ಧೂಳೀಪಟಗೊಳಿಸುವ ಮಟ್ಟಿಗೆ ಮೊದಲ ದಿನವೇ ಪ್ರದರ್ಶನ ಕಂಡಿದ್ದು, ಪ್ರೀಮಿಯರ್ ಶೋಗಳ ಟಿಕೆಟ್ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟವಾಗಿದೆ ಎನ್ನುವ ಸುದ್ದಿ ಕೇಳಿಬಂದಿದೆ.
After watching the movie #Kalki28989AD twice
There is one thing to say
Amitabh Bachchan is the soul of this movie
If this movie is successful and the power of the movie works and is strong
It’s just because of @SrBachchan
Amit ji’s performance is beyond imagination
I missed… pic.twitter.com/Z6iKovOPTi— Moses Sapir (@MosesSapir) June 28, 2024
ಇನ್ನು, ರಿಲೀಸ್‌ಗೆ ಮುನ್ನವೇ ಚಿತ್ರ ಬರೋಬ್ಬರಿ ₹37 ಕೋಟಿ ಹಣ ಬಾಚಿದೆ. ರಿಲೀಸ್ ಆದ ಮೊದಲ ದಿನವೇ ₹200 ಕೋಟಿಯ ಸಮೀಪದ ಲಾಭ ಗಳಿಸಿದೆ. ವರ್ಲ್ಡ್‌ವೈಡ್ ಚಿತ್ರಮಂದಿರಗಳಲ್ಲಿ ಈಗಾಗಲೇ ಜಾಗತಿಕ ಸಿನಿಪ್ರಿಯರಲ್ಲಿ ಕ್ರೇಜ಼್ ಹೆಚ್ಚಿಸಿದೆ.
𝐋𝐞𝐭’𝐬 𝐂𝐞𝐥𝐞𝐛𝐫𝐚𝐭𝐞 𝐂𝐢𝐧𝐞𝐦𝐚…❤️🔥#Kalki2898AD #EpicBlockbusterKalki @SrBachchan @ikamalhaasan #Prabhas @deepikapadukone @nagashwin7 @DishPatani @Music_Santhosh @VyjayanthiFilms @Kalki2898AD @saregamaglobal @saregamasouth pic.twitter.com/Xqn7atEWNF
— Vyjayanthi Movies (@VyjayanthiFilms) June 28, 2024
ಬರೋಬ್ಬರಿ ₹600 ಕೋಟಿ ಬಜೆಟ್‌ನೊಂದಿಗೆ ನಿರ್ಮಾಣವಾದ ಈ ಚಿತ್ರವನ್ನು ಸಿ ಅಸ್ವಾನಿ ದತ್ ಅವರು ವೈಜಯಂತಿ ಮೂವೀಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಹಾಗೂ ಜೋರ್ಡ್ಜ಼ೆ ಸ್ಟೋಜಿಲ್ಕೋವಿಕ್ ಛಾಯಾಗ್ರಾಹಣ ಹೊಂದಿರುವ ಈ ಚಿತ್ರ, ಒಂದು ಸಾವಿರ ಕೋಟಿಗೂ ಮಿಕ್ಕಿ ಕಲೆಕ್ಷನ್ ಮಾಡೋದು ಖಂಡಿತಾ ಎನ್ನುವ ಅಭಿಪ್ರಾಯ ಕೇಳಿಬರುತ್ತಿರುವುದಂತೂ ಸತ್ಯ.