2017ರ ಕನ್ನಡ ಸಿನಿಮಾಗಳು ಸಂಖ್ಯೆಯಲಿ ದ್ವಿಶತಕ ಗೆದ್ದಿದ್ದು ಪ್ರಯೋಗಾತ್ಮಕ
2017ರ ಕನ್ನಡ ಸಿನಿಮಾಗಳು
ಸಂಖ್ಯೆಯಲಿ ದ್ವಿಶತಕ
ಗೆದ್ದಿದ್ದು ಪ್ರಯೋಗಾತ್ಮಕ
ಕನ್ನಡದಲ್ಲಿ ವರ್ಷದಿಂದ ವರ್ಷಕ್ಕೆ ನಿರ್ಮಾಣವಾಗುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಎಷ್ಟು ಚಿತ್ರಗಳು ನಿರ್ಮಾಪಕರಿಗೆ ಲಾಭ ತಂದುಕೊಡುತ್ತಿವೆ ಎನ್ನುವುದು ಮಾತ್ರ ಗೌಪ್ಯ. ಉದಾಹರಣೆಗೆ 2016ರಲ್ಲಿ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 180 ದಾಟಿತ್ತು ಅಷ್ಟೇ. ಆಗ ಅದೇ ಒಂದು ದಾಖಲೆ. ಆದರೆ 2017 ಅದನ್ನೂ ಮೀರಿಸುವಷ್ಟು, ಅಂದರೆ ಒಟ್ಟು ಇನ್ನೂರರ ಗಡಿ ತಲುಪುವಷ್ಟು ಚಿತ್ರಗಳು ತೆರೆ ಕಂಡಿವೆ. ಇವುಗಳಲ್ಲಿ ತುಳು ಚಿತ್ರಗಳನ್ನು ಕೂಡ ಸೇರಿಸಲಾಗಿವೆ.
ನಮ್ಮ ಕನ್ನಡ ಚಿತ್ರರಂಗಕ್ಕೆ 83 ವರ್ಷಗಳ ಇತಿಹಾಸವಿದೆ. ಆದರೆ ಯಾವ ವರ್ಷದಲ್ಲಿಯೂ ಇಷ್ಟೊಂದು ಚಿತ್ರಗಳು ಬಿಡುಗಡೆಯಾಗಿರುವ ಸಂದರ್ಭವಿಲ್ಲ. ಹಾಗಾಗಿ 2017, ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಗಷ್ಟೇ ಸೀಮಿತವಾಗಿಲ್ಲ, ಮಹತ್ವಪೂರ್ಣವೂ ಆಗಿದೆ. ಒಬ್ಬ ಸಿನಿಮಾ ವೀಕ್ಷಕನಾಗಿ ಒಂದು ಸಿನಿಮಾ ಹೇಗಿತ್ತು ಎಂದು ಹೇಳುವುದು ಕಷ್ಟವಲ್ಲ. ಆದರೆ ಈ ವರ್ಷದ ಒಟ್ಟು ಸಿನಿಮಾಗಳು ಹೇಗಿದ್ದವು ಎಂದು ವಿಶ್ಲೇಷಿಸುವುದು ಸುಲಭವಲ್ಲ. ಯಾಕೆಂದರೆ ಅಂಥದೊಂದು ವಿಶ್ಲೇಷಣೆಗೆ ನಮ್ಮೆದುರಿಗೆ ಆ ಚಿತ್ರಗಳು ಸಾಲಾಗಿ ಬರುವುದಿಲ್ಲ. ನಾವೇ ನೆನಪು ಮಾಡಿಕೊಳ್ಳಬೇಕು. ಅಂಥದೊಂದು ನೆನಪು ಅಧಿಕೃತ ದಾಖಲೆಯಾಗಿಯೂ ಉಳಿಯಬೇಕು ಎಂದಿದ್ದರೆ ನಾವು ಆರಂಭದಿಂದಲೇ ಆ ಕೆಲಸದಲ್ಲಿ ತೊಡಗಿರಬೇಕಾಗುತ್ತದೆ. ಆದರೂ ಒಂದಷ್ಟು ಚಿತ್ರಗಳು ಕಣ್ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಕಾರಣ, ಕೆಲವೊಂದು ಚಿತ್ರಗಳು ಬೆಂಗಳೂರಿನಲ್ಲಿಯೂ ಬಿಡುಗಡೆಗೊಳ್ಳುವುದಿಲ್ಲ! ನಿರ್ಮಾಪಕರ ಊರಿನ ಒಂದಷ್ಟು ಚಿತ್ರಮಂದಿರಗಳಲ್ಲಿ ತೆರೆಕಂಡು ಸುಮ್ಮನಾಗಿರುತ್ತವೆ. ಈ ಸಲ `ಶ್ರವಣಕುಮಾರ’ ಎಂಬ ಚಿತ್ರ ಚಳ್ಳಕೆರೆಯಲ್ಲಿ ಬಿಡುಗಡೆಯಾಗಿದೆ. `ಜಯಸೂರ್ಯ’ ಎಂಬ ಚಿತ್ರ ಬೆಳಗಾವಿಯಲ್ಲಿ, `ಅಸೂಚಭೂ’ ಕಡೂರಿನಲ್ಲಿ, `ಕಾವೇರಿ ತೀರದ ಚರಿತ್ರೆ’ ಪಿರಿಯಾಪಟ್ಟಣದಲ್ಲಿ ತೆರೆಕಂಡಿವೆ. ಹೀಗೆ ಬೇರೆ ಊರುಗಳಲ್ಲಿ ಬಿಡುಗಡೆಯಾಗಿ ಸುದ್ದಿಯಾಗದ ಚಿತ್ರಗಳ ಮಾಹಿತಿ ನಮಗೆ ಸಿಗುವ ಸಾಧ್ಯತೆಗಳಿಲ್ಲ. ಲೆಕ್ಕಕ್ಕೆ ಸಿಕ್ಕಿರುವ ಚಿತ್ರಗಳ ಪಟ್ಟಿಯನ್ನು ನೀಡುವ ಸಣ್ಣ ಪ್ರಯತ್ನ ಇದು. ಆದರೆ ಪಟ್ಟಿ ಪರಿಪೂರ್ಣವಾಗಬೇಕಾದರೆ ಅಂಥ ಚಿತ್ರಗಳು ಕೂಡ ಸೇರಿರಬೇಕು. ಅಂಥ ಪ್ರಯತ್ನವನ್ನು ನಮ್ಮ ಸೂಪರ್ ಸ್ಟಾರ್ ಮಾಡಿದೆ.
ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಫಾಲೊ ಮಾಡಿ ಶೇರ್ ಮಾಡಿ.
ಮೊದಲ ಹಂತವಾಗಿ, 2017ರಲ್ಲಿ ಬಿಡುಗಡೆಯಾದ ಒಟ್ಟು ಕನ್ನಡ ಮತ್ತು ತುಳು ಚಿತ್ರಗಳ ಪಟ್ಟಿ, ಅದರಲ್ಲಿ ಯಶಸ್ವಿಯಾದವು, ನಿರೀಕ್ಷೆ ಮೀರಿ ಗೆದ್ದ ಚಿತ್ರಗಳು ಮತ್ತು ಸೋತು ಹೋದವುಗಳು, ಸರಾಸರಿ ಯಶಸ್ವಿಯಾದವು, ಮಕ್ಕಳ ಚಿತ್ರಗಳು, ರೀಮೇಕ್ ಸಿನಿಮಾಗಳು ಎಂದೇ ಮೊದಲಾಗಿ ವಿಂಗಡಿಸಿ ಒಂದು ಪಟ್ಟಿಯನ್ನು ನೀಡಲು ಪ್ರಯತ್ನಿಸಿದ್ದೇವೆ.
ಜನವರಿ
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 13
ಶ್ರೀಕಂಠ, ಪುಷ್ಪಕ ವಿಮಾನ, ನೋ ಬಾಲ್, ಲೀ, ಅರಿವು, ಬಾದಾಮಿ ಹಲ್ವ, ಏನ್ ನಿನ್ ಪ್ರಾಬ್ಲಮ್ಮು, ಬ್ಯೂಟಿಫುಲ್ ಮನಸುಗಳು, ರಿಕ್ತ, ಸಾಲದ ಮಗು, ಮುನ್ಸೀಶ, ಅಲ್ಲಮ, ಮುಂಬೈ.
ಫೆಬ್ರವರಿ
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 15
ಚೌಕ, ಹಾಯ್, ಜಲ್ಸ, ರಶ್, ಸ್ಟೈಲ್ ರಾಜ, ಅಮರಾವತಿ, ಬಣ್ಣದ ನೆರಳು, ಮೇಲುಕೋಟೆ ಮಂಜ, ಸ್ಮೈಲ್ ಪ್ಲೀಸ್, ಏನೆಂದು ಹೆಸರಿಡಲಿ, ಮನ ಮಂಥನ, ಪ್ರೀತಿ ಪ್ರೇಮ, ಟಾನಿಕ್ ತಾಖತ್ತಿಗಾಗಿ, ಹೆಬ್ಬುಲಿ, ಶ್ರೀನಿವಾಸ ಕಲ್ಯಾಣ
ಮಾರ್ಚ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 17
ಎರಡನೇ ಸಲ, ಜಿಲೇಬಿ, ಕಾಲು ಕೇಜಿ ಪ್ರೀತಿ, ಬೆಂಗಳೂರು ಅಂಡರ್‍ವಲ್ರ್ಡ್, ಪ್ರತಿಮಾ, ರಿಯಲ್ ಪೆÇಲೀಸ್, ವರ್ಧನ, ರಣಚಂಡಿ, ಧ್ವನಿ, ಎರಡು ಕನಸು, ಕಲೆಬೆರಕೆ, ಶುದ್ಧಿ, ಊರ್ವಿ, ರಾಜಕುಮಾರ, ರೋಗ್, ಅಜರಾಮರ, ಮನಸು ಮಲ್ಲಿಗೆ
ಏಪ್ರಿಲ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 8
ರೂಪ, ಸೌಂದರ್ಯ ನಿಲಯ, ಚಕ್ರವರ್ತಿ, ಇಂಜಿನಿಯರ್ಸ್, ರಾಗ, ಪಾರ್ಟ್ 2, ಪೆÇರ್ಕಿ ಹುಚ್ಚ ವೆಂಕಟ್, ಯುದ್ಧ ಕಾಂಡ
ಮೇ
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 14
ಛಲಗಾರ, ಸಿಂಹ ಹಾಕಿದ ಹೆಜ್ಜೆ, ಹ್ಯಾಪಿ ನ್ಯೂ ಇಯರ್, ಮರಳಿ ಮನೆಗೆ, ಪೆÇೀಕಿರಿ ರಾಜ, ಲಿಫ್ಟ್ ಮ್ಯಾನ್, ಮಾಸ್ತಿಗುಡಿ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಬಣ್ಣ ಬಣ್ಣದ ಬದುಕು, ಕರಾಲಿ, ಪಟಾಕಿ, ಬಿಬಿ5, ಕೀಟ್ಲೆ ಕೃಷ್ಣ, ಟ್ಯಾಬ್
ಜೂನ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 17
ಈ ಕಲರವ, ಎಳೆಯರು ನಾವು ಗೆಳೆಯರು, ಲೈಫ್ 360, ಸರ್ಕಾರಿ ಕೆಲಸ ದೇವರ ಕೆಲಸ, ಜಿಂದಾ, ನೂರೊಂದು ನೆನಪು, ಯುಗಪುರುಷ, ಭಗವದ್ ಶ್ರೀ ರಾಮಾನುಜ, ಶಿವನವತಾರಿ ಶ್ರೀ ಸಿದ್ಧಲಿಂಗೇಶ್ವರ, ಚಿತ್ತ ಚಿಂಚಲ, ಸಿಲಿಕಾನ್ ಸಿಟಿ, ಟೈಗರ್, ಸ್ಟೂಡೆಂಟ್ಸ್, ಪಂಟ, ನಮ್ಮೂರ ಹೈಕ್ಳು, ನಾನೊಬ್ನೇ ಒಳ್ಳೇವ್ನು, ಆಕೆ, ಸಂಜೆಯಲ್ಲಿ ಅರಳಿದ ಹೂ
ಜುಲೈ
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 21
ಡೀಲ್, ಹೊಂಬಣ್ಣ, ಕಥಾ ವಿಚಿತ್ರ, ಕೋಲಾರ, ಒಂದು ಮೊಟ್ಟೆಯ ಕಥೆ, ದಂಡುಪಾಳ್ಯ 2, ಗ್ಯಾಪಲ್ಲೊಂದ್ ಸಿನಿಮಾ, ಹಳ್ಳಿ ಪಂಚಾಯ್ತಿ, ಹೊಸ ಅನುಭವ, ಪುಟಾಣಿ ಸಾರಿ, ದಾದಾ ಈಸ್ ಬ್ಯಾಕ್, ಧೈರ್ಯಂ, ಆಪರೇಷನ್ ಅಲಮೇಲಮ್ಮ, ಟಾಸ್, ಟ್ರಿಗರ್, ಮೀನಾಕ್ಷಿ, ಶ್ವೇತಾ, ಕಿರೀಟ, ವಿಸ್ಮಯ, ಆ ಎರಡು ವರ್ಷಗಳು, ಬರಗಾಲ, ಸ್ನೇಹಚಕ್ರ
ಆಗಸ್ಟ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 17
ರಾಜ್-ವಿಷ್ಣು, ಶ್ರವಣ ಕುಮಾರ, ಸ್ನೇಹಚಕ್ರ, ತಾತನ್ ತಿಥಿ ಮೊಮ್ಮಗನ್ ಪ್ರಸ್ಥ, ಇ1, ಜಾನಿ, ಮಾಸ್ ಲೀಡರ್, ಪರಚಂಡಿ, ಫಸ್ಟ್ ಲವ್, ಕಾಫಿ ತೋಟ, ಕಾದಲ್, ಮಾರಿಕೊಂಡವರು, ಪಾರು ಐ ಲವ್ ಯು, 5ಜಿ, ಕೃಷ್ಣ ಸನ್ ಆಫ್ ಸಿಎಂ, ಮಾರ್ಚ್ 22, ಸಾಹೇಬ
ಸೆಪ್ಟೆಂಬರ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 9
ಹ್ಯಾಪಿ ಜರ್ನಿ, ಮುಗುಳು ನಗೆ, ಅಯನ, ದರ್ಪಣ, ಹಳ್ಳಿ ಸೊಗಡು, ರಾಜ ಹಂಸ, ಭರ್ಜರಿ, ಕ್ರಾಕ್, ತಾರಕ್
ಅಕ್ಟೋಬರ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 17
ಏಪ್ರಿಲ್‍ನ ಹಿಮಬಿಂದು, ಹುಲಿರಾಯ, ಕಿಡಿ, ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ, ವೈರ, ಆಡು ಆಟ ಆಡು, ಗಾಯತ್ರಿ, ಕರಿಯ 2, ಕಟಕ, ಸಿತಾರ, ತಿಕ್ಲ, ದಯವಿಟ್ಟು ಗಮನಿಸಿ, ಸತ್ಯ ಹರಿಶ್ಚಂದ್ರ, ಢಮ್ಕಿ ಢಮಾರ್, ಮೋಜೋ, ಸರ್ವಸ್ವ, ಟೈಗರ್ ಗಲ್ಲಿ
ನವೆಂಬರ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 22
ಹಾಲು ತುಪ್ಪ, ಜಾಲಿ ಬಾರು ಪೆÇೀಲಿ ಗೆಳೆಯರು, ಒನ್ಸ್ ಮೋರ್ ಕೌರವ, ನಿಶ್ಯಬ್ಧ, ಬಿಕೋ, ಕಾಲೇಜ್ ಕುಮಾರ್, ನುಗ್ಗೇಕಾಯಿ, ಸೈಕೋ ಶಂಕ್ರ, ಜಯಸೂರ್ಯ, ರಾಜರು, ಸಂಯುಕ್ತ 2, ಅಸೂಚಭೂ, ನಂ. 9 ಹಿಲ್ಟನ್ ಹೌಸ್, ಕಾವೇರಿ ತೀರದ ಚರಿತ್ರೆ, ಕೆಂಪಿರ್ವೆ, ಮಹಾನುಭಾವರು, ನನ್ ಮಗಳೇ ಹೀರೋಯಿನ್, ಪಾನಿಪುರಿ, ಉಪೇಂದ್ರ ಮತ್ತೆ ಬಾ, ಅತಿರಥ, ಹನಿಹನಿ ಇಬ್ಬನಿ, ಮೋಂಬತ್ತಿ
ಡಿಸೆಂಬರ್
ಬಿಡುಗಡೆಯಾದ ಚಿತ್ರಗಳ ಸಂಖ್ಯೆ: 18
ಮಫ್ತಿ, ಅರ್ಧ ತಿಕ್ಲು ಪುಕ್ಲು, ಡ್ರೀಮ್ ಗರ್ಲ್, ಗೌಡ್ರು ಹೋಟೆಲ್, ಮಂತ್ರಂ, ನಮ್ಮೂರಲ್ಲಿ, ಸ್ಮಗ್ಲರ್, ಮಿಸ್ಟರ್ ಪರ್ಫೆಕ್ಟ್, ಅನ್ವೇಷಿ, ವುಮೆನ್ಸ್ ಡೇ, ಇಲ್ಲ, ಮೂಕ ಹಕ್ಕಿ, ಟೋರ ಟೋರ, ರೈಲ್ವೇ ಚಿಲ್ಡ್ರನ್ಸ್, ಬ್ಲೂ ಐಸ್, ಅಂಜನಿ ಪುತ್ರ, ಚಮಕ್, ಹಂಬಲ್ ಪೊಲಿಟೀಶಿಯನ್ ನೊಗ್ರಾಜ್
ತುಳು ಚಿತ್ರಗಳು
ಗುಡ್ಡೆದ ಭೂತ, ಮದಿಪು, ಚಾಪ್ಟರ್, ಏಸ, ಅರ್ಜುನ್ ವೆಡ್ಸ್ ಅಮೃತ, ಅರೆ ಮರ್ಲಿರ್, ಪತ್ತನಾಜೆ, ಅಂಬರ್ ಕ್ಯಾಟೆರರ್ಸ್, ನೇಮದ ಬೂಳ್ಯ, ತೊಟ್ಟಿ, ರಂಗ್ ರಂಗದ ದಿಬ್ಬಣ, ಕೋರಿರೊಟ್ಟಿ
ಯಶಸ್ವಿಯಾದ ಚಿತ್ರಗಳು: ಹೆಬ್ಬುಲಿ, ರಾಜಕುಮಾರ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ಒಂದು ಮೊಟ್ಟೆಯ ಕಥೆ, ಭರ್ಜರಿ, ಮಫ್ತಿ
ಸರಾಸರಿ ಗೆಲುವು: ಚೌಕ, ಮುಗುಳು ನಗೆ, ತಾರಕ್
ಉದ್ಯಮಕ್ಕೆ ಹೆಸರು ತಂದ ಚಿತ್ರಗಳು : ಬ್ಯೂಟಿಫುಲ್ ಮನಸುಗಳು, ಶುದ್ಧಿ, ಊರ್ವಿ, ಅಮರಾವತಿ, ಹೊಂಬಣ್ಣ, ಕಥಾ ವಿಚಿತ್ರ, ದಯವಿಟ್ಟು ಗಮನಿಸಿ, ಕೆಂಪಿರ್ವೆ, ಕಾಲೇಜ್ ಕುಮಾರ್
ನಿರೀಕ್ಷೆ ನಿರಾಶೆಯಾಗಿಸಿದ ಚಿತ್ರಗಳು:
ಶ್ರೀಕಂಠ, ಪುಷ್ಪಕ ವಿಮಾನ, ಅಲ್ಲಮ, ಎರಡನೇ ಸಲ, ರೋಗ್, ಚಕ್ರವರ್ತಿ, ರಾಗ, ಮಾಸ್ತಿಗುಡಿ, ಪಟಾಕಿ, ಆಪರೇಷನ್ ಅಲಮೇಲಮ್ಮ, ರಾಜ್-ವಿಷ್ಣು, ಮಾಸ್ ಲೀಡರ್, ಕಾಫಿ ತೋಟ, ಮಾರ್ಚ್ 22, ಸಾಹೇಬ, ಸತ್ಯ ಹರಿಶ್ಚಂದ್ರ, ಟೈಗರ್ ಗಲ್ಲಿ, ಉಪೇಂದ್ರ ಮತ್ತೆ ಬಾ
ಪ್ರಯೋಗಾತ್ಮಕ ಮತ್ತು ಕಲಾತ್ಮಕ ಸಿನಿಮಾಗಳು:
ಸಾಲದ ಮಗು, ಮುನ್ಸೀ, ಅಮರಾವತಿ, ಪ್ರತಿಮಾ, ಶುದ್ಧಿ, ಊರ್ವಿ, ಛಲಗಾರ, ಮರಳಿ ಮನೆಗೆ, ಮಾರಿಕೊಂಡವರು, ಏಪ್ರಿಲ್‍ನ ಹಿಮಬಿಂದು, ಕೆಂಪಿರ್ವೆ, ಹುಲಿರಾಯ, ಲಿಫ್ಟ್‍ಮ್ಯಾನ್, ಮೂಕ ಹಕ್ಕಿ, ರೈಲ್ವೇ ಚಿಲ್ಡ್ರನ್ಸ್
ಮಕ್ಕಳ ಸಿನಿಮಾ: ಪುಟಾಣಿ ಸಫಾರಿ, ಕೀಟ್ಲೆ ಕೃಷ್ಣ, ಎಳೆಯರು ನಾವು ಗೆಳೆಯರು, ಟ್ಯಾಬ್
ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಫಾಲೊ ಮಾಡಿ ಶೇರ್ ಮಾಡಿ.
ರೀಮೇಕ್ ಮತ್ತು ಮೂಲ ಚಿತ್ರಗಳ ಹೆಸರುಗಳು
ಪುಷ್ಪಕ ವಿಮಾನ -‘ಮಿರಾಕಲ್ ಇನ್ ಸೆಲ್ ನಂಬರ್ 7’ (ದಕ್ಷಿಣ ಕೊರಿಯನ್ ಚಿತ್ರದ ಸ್ಫೂರ್ತಿ)
ಮೇಲುಕೋಟೆ ಮಂಜ -‘ಎತ್ತನ್’ (ತಮಿಳು)
ಪ್ರೀತಿ ಪ್ರೇಮ -‘ಈ ರೋಜುಲು’ (ತೆಲುಗು)
ಮನಸ್ಸು ಮಲ್ಲಿಗೆ -‘ಸೈರಾಠ್’ (ಮರಾಠಿ),
ಪಟಾಕಿ -‘ಮೊಟ್ಟೆ ಸಿವ ಕೆಟ್ಟ ಸಿವ’ (ತಮಿಳು),
ನೂರೊಂದು ನೆನಪು -‘ದುನಿಯಾದಾರಿ’ (ಮರಾಠಿ),
ಸಿಲಿಕಾನ್ ಸಿಟಿ -‘ಮೆಟ್ರೋ’ (ತಮಿಳು),
ಪಂಟ ‘ರಾಜತಂತಿರಂ’ (ರಾಜ ತಂತಿರಂ),
ಆಕೆ ‘ಮಾಯ’ (ತಮಿಳು),
ಸತ್ಯ ಹರಿಶ್ಚಂದ್ರ ‘ಸಿಂಗ್ ವರ್ಸಸ್ ಕೌರ್’ (ಪಂಜಾಬಿ),
ರಾಜ್ ವಿಷ್ಣು ‘ರಜನಿ ಮುರುಗನ್’ (ತಮಿಳು),
ಕಿಡಿ ‘ಕಲಿ’ (ಮಲಯಾಳಂ),
ಆಡೂ ಆಟ ಆಡೂ ‘ತಿರುಟ್ಟಪಯಲೆ’ (ತಮಿಳು),
ನನ್ ಮಗಳೇ ಹೀರೋಯಿನ್ ‘ಉಪ್ಪು ಕರುವಾಡು’ (ತಮಿಳು),
ಗೌಡ್ರು ಹೋಟೆಲ್ ‘ಉಸ್ತಾದ್ ಹೋಟೆಲ್’ (ಮಲಯಾಳಂ),
ಉಪೇಂದ್ರ ಮತ್ತೆ ಬಾ ‘ಸೊಗ್ಗಾಡೆ ಚಿನ್ನಿ ನಾಯ್ನ’ (ತೆಲುಗು),
ಅತಿರಥ ‘ಕನಿತನ್’ (ತಮಿಳು)