18 ರಿಂದ 25 ಚಿತ್ರಕ್ಕೆ ಡಬ್ಬಿಂಗ್ ಮುಕ್ತಾಯ

Published on

435 Views

ಲಕ್ಷ್ಮಿಪ್ರಿಯ ಪ್ರೊಡಕ್ಷನ್ ಲಾಂಛನದಲ್ಲಿ ತುಮಲಪಲ್ಲಿ ರಾಮಸತ್ಯನಾರಾಯಣ ನಿರ್ಮಿಸುತ್ತಿರುವ 18 ರಿಂದ 25 ಚಿತ್ರಕ್ಕೆ ಇತ್ತೀಚೆಗೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿತು. 18 ರಿಂದ 25ರ ಹರೆಯದ ಹೃದಯಗಳ ಮಿಡಿತದ ಎಳೆಯನ್ನಿಟ್ಟುಕೊಂಡು ಕಾಮಿಡಿ ವಿತ್ ಲವ್ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಥಮ ಪ್ರತಿ ಸದ್ಯದಲ್ಲೇ ಹೊರಬರಲಿದೆ.

ಸ್ಮೈಲ್ ಶ್ರೀನು ಕಥೆ – ಚಿತ್ರಕಥೆ ಸಂಭಾóಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ ಕೆ. ನಾಯ್ಡು ಛಾಯಾಗ್ರಹಣ, ಡಿ. ಮಲ್ಲಿ ಸಂಕಲನ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವೈಲೆನ್ಸ್ ವೇಲು ಸಾಹಸ, ಚಿರಂಜೀವಿ ಎನ್. ನೃತ್ಯ ನಿರ್ದೇಶನವಿದೆ. ಅಭಿರಾಮ್, ರಿಷಿತೇಜ, ಅಖಿಲಾ, ವಿದ್ಯಾಶ್ರೀ, ಫಾರುಕ್ ಖಾನ್, ಸುಮನ್, ನಾಗಿನೀಡು, ರವಿರಾಮ್ ಕುಮಾರ್, ರಾಕ್ ಲೈನ್ ಸುಧಾಕರ್, ಮಿಮಿಕ್ರಿ ಗೋಪಿ, ಸೌಮ್ಯ, ಕಾವ್ಯ, ಮುಂತಾದವರ ತಾರಾಬಳಗವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com