ಸಿಹಿಕಹಿ ಚಂದ್ರು ಅವರ “ಬೊಂಬಾಟ್ ಭೋಜನ” ಕ್ಕೆ 150 ರ ಸಂಭ್ರಮ.
ಪುಸ್ತಕ ರೂಪದಲ್ಲಿ ಹೊರಬಂತು ಚಂದ್ರು ಅವರು ಮಾಡಿದ ಅಡುಗೆಗಳು.
ಸಿಹಿಕಹಿ ಚಂದ್ರು ಅವರ “ಬೊಂಬಾಟ್ ಭೋಜನ” ಕಾರ್ಯಕ್ರಮ ನೋಡದವರು, ಅದರ ಬಗ್ಗೆ ಕೇಳಿರದವರು ಬಹಳ ಕಡಿಮೆ. ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ ಈ ಅಡುಗೆ ಕಾರ್ಯಕ್ರಮ.
ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೂ ಮಧ್ಯಾಹ್ನ 12ರಿಂದ1 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
ಇದೇ 12 ನೇ ತಾರೀಖು ಈ ಕಾರ್ಯಕ್ರಮದ 150ನೇ ಸಂಚಿಕೆ ಪ್ರಸಾರವಾಗಲಿದೆ.
ಇದರ ಬಗ್ಗೆ ಮಾಹಿತಿ ನೀಡಲು ಸಿಹಿಕಹಿ ಚಂದ್ರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಇಲ್ಲಿಯವರೆಗೆ ಪ್ರಸಾವಾಗಿರುವ ತರತರದ ಅಡುಗೆಗಳನ್ನು ತಯಾರಿಸುವ ವಿಧಾನ ತಿಳಿಸುವ “ಬೊಂಬಾಟ್ ಭೋಜನ” ಪುಸ್ತಕ ಸಹ ಇದೇ ಸಂದರ್ಭದಲ್ಲಿ ಬಿಡುಗಡೆಯಾಯಿತು.
ಈ ಬಗ್ಗೆ ಮಾತನಾಡಿದ ಸಿಹಿಕಹಿ ಚಂದ್ರು ಅವರು, ನಾನು 2012 ರಲ್ಲಿ ಮೊದಲ ಬಾರಿಗೆ “ಬೊಂಬಾಟ್ ಭೋಜನ” ಕಾರ್ಯಕ್ರಮ ಆರಂಭ ಮಾಡಿದ್ದೆ. ಅದು ಎಷ್ಟು ಜನಪ್ರಿಯವಾಯಿತೆಂದರೆ, ‘ಜನ ನಾನೊಬ್ಬ ನಟ ಅನ್ನವುದನ್ನು ಮರೆತು ಅಡುಗೆ ಭಟ್ಟ ಅಂದು ಕೊಂಡು ಬಿಟ್ಟದ್ದರು.
ತುಂಬಾ ಜನಪ್ರಿಯವಾಗಿದಾಗಲೇ ನಾನು ಆ ಕಾರ್ಯಕ್ರಮ ನಿಲಿಸಿ, ನಂತರ ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡೆ. ಆದರೂ ನಾನು ಎಲ್ಲೇ ಹೋದರೂ ನನ್ನನ್ನು “ಬೊಂಬಾಟ್ ಭೋಜನ” ದ ಮೂಲಕವೆ ಗುರುತಿಸಿದ್ದು ಹೆಚ್ಚು.
ಇದರ ಬಗ್ಗೆ ಯೋಚಿಸಿದ ನಾನು ಕೆಲವು ದಿನಗಳಿಂದ ಸ್ಟಾರ್ ಸುವರ್ಣ ವಾಹಿನಿಗಾಗಿ ಈ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದ್ದೇನೆ. ಇದೇ ಏಪ್ರಿಲ್ 12ರಂದು ಇದರ 150ನೇ ಸಂಚಿಕೆ ಪ್ರಸಾರವಾಗಲಿದೆ. ಅಂದಿನ ವಿಶೇಷ ಸಂಚಿಕೆಗೆ ವಿಶೇಷ ಅತಿಥಿಯಾಗಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಆಗಮಿಸುತ್ತಿದ್ದಾರೆ.
“ಬೊಂಬಾಟ್ ಭೋಜನ” ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಿದ್ದು, ನಾನು ಅಡುಗೆ ಮಾಡುವುದಕ್ಕೆ ನಳಪಾಕ ಅಂತ ಹೆಸರಿಟ್ಟಿದ್ದೀನಿ. ಡಾ||ಗೌರಿ ಸುಬ್ರಹ್ಮಣ್ಯ ಅವರು ಆರೋಗ್ಯಕ್ಕೆ ಸಂಬಂಧಿಸಿದರ ಬಗ್ಗೆ ಮಾಹಿತಿ ನೀಡುತ್ತಾರೆ. ಟೈಂಪಾಸ್ ಎಂಬ ವಿಭಾಗದ ಮೂಲಕ ಎಂ.ಎಸ್.ನರಸಿಂಹಮೂರ್ತಿ ಅವರ ಮಾತುಗಳು ರಂಜಿಸುತ್ತವೆ ಎಂದು ವಿವರಣೆ ನೀಡಿದ್ದ ಚಂದ್ರು ಅವರು
“ಬೊಂಬಾಟ್ ಭೋಜನ” ದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಕೃಷ್ಣ ಗೀ ಮಾಲೀಕರಾದ ಅಶ್ವಥ್ ನಾರಾಯಣ ಗುಪ್ತ ಪುಸ್ತಕ ಬಿಡುಗಡೆ ಮಾಡಿ ಶುಭ ಕೋರಿದರು.
ಹಾಸ್ಯ ಲೇಖಕ ಎಂ.ಎಸ್.ನರಸಿಂಹಮೂರ್ತಿ, ಮುಕ್ತಿನಾಗ ಕ್ಷೇತ್ರದ ಮುಖ್ಯಸ್ಥರು ಹಾಗೂ ವೈದ್ಯೆ ಡಾ||ಗೌರಿ ಸುಬ್ರಹ್ಮಣ್ಯ ಮತ್ತು ಕಾರ್ಯಕ್ರಮದ ನಿರ್ಮಾಪಕಿ ಸಿಹಿಕಹಿ ಗೀತಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.