ಹಾರರ್ ಥ್ರಿಲ್ಲರ್ ಕಪಾಲ ಈವಾರ ತೆರೆಗೆ

Published on

579 Views

ವಿನಯ್ ವಿದುನಂದನ್ ಅವರ ನಿರ್ದೇಶನದ, ಕುತೂಹಲಕರ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಕಪಾಲ ಚಿತ್ರವು ಇದೇ ಶುಕ್ರವಾರ ರಾಜ್ಯಾದ್ಯಂತ ಸುಮಾರು 70 ರಿಂದ 80 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಿತು.‌ ಅಭಿಮನ್ಯು ಪ್ರಜ್ವಲ್, ಪ್ರತೀಕ್ಷಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಅನಿವಾಸಿ ಕನ್ನಡಿಗರಾದ ಸೌಮ್ಯ ಕೆ. ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ ಹೊಸ ತಂಡವನ್ನು ಕಟ್ಟಿಕೊಂಡು ಮಾಡಿದ ಚಿತ್ರವಿದು. ಟ್ರೇಲರ್ ಗೆ ಒಳ್ಳೆ ರೆಸ್ಪಾನ್ಸ್‌ ಬರುತ್ತಿದೆ. ಎಲ್ಲರ ಶ್ರಮದಿಂದ ಚಿತ್ರ ಉತ್ತಮವಾಗಿ ಬಂದಿದ್ದು, ಇದೇ ಶುಕ್ರವಾರ ರಿಲೀಸ್ ಮಾಡುತ್ತಿದ್ದೇವೆ ಎಂದರು. ನಂತರ ಮಾತನಾಡಿದ ನಿರಗದೇಶಕ ವಿನಯ್ ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ೭೦ ವರ್ಷ, ೧೦ ವರ್ಷದ ಹಿಂದೆ ನಡೆದ‌‌‌ ಕಥೆಯೊಂದು ಈಗಿನ ಒಬ್ಬರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಹಾರರ್ ಹಿನ್ನೆಲೆಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ‌. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ‌ ಹಾರರ್ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು


‌ಮತ್ತೊಬ್ಬ ನಟಿ ಯಮುನಾ ಶ್ರೀನಿಧಿ ಮಾತನಾಡುತ್ತ ನನ್ನದು ಒಂದು ವಿಭಿನ್ನವಾದ ತಾಯಿಯ ಪಾತ್ರ. ಈ ತಂಡದ ಶ್ರಮ ತುಂಬಾ ಇದೆ ಎಂದರು.
‌‌ ನಾಯಕಿ ಪ್ರತೀಕ್ಷಾ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ೩ ಕಾಲಘಟ್ಟದಲ್ಲಿ ನಡೆಯುವ ಕಥೆ, ಒಬ್ಬ ನಿರೂಪಕಿಯಾದ ನಾನು ಚಿತ್ರದಲ್ಲೂ ಸಹ ನಿರೂಪಕಿಯ ಪಾತ್ರ ಮಾಡಿದ್ದೇನೆ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತ ತುಂಬಾ ಚಿನ್ನಾಗಿ ಬಂದಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ನಿರ್ದೇಶಕ ಗಿರೀರಾಜ್ ಮಾತನಾಡಿ ಚಿತ್ರದ ಕಂಟೆಂಟ್ ಬಗ್ಗೆ ಮೆಚ್ಚಿಕೊಂಡರು.

ಮಂಗಳೂರಿನಿಂದ ಆಫ್ರಿಕಾದತ್ತ “ಬಾನ ದಾರಿಯಲ್ಲಿ”

ನಾಯಕ ಅಭಿಮನ್ಯು ಪ್ರಜ್ವಲ್ ಮಾತನಾಡಿ, ಇದು ಬರೀ ಹಾರರ್ ಕಥೆಯಲ್ಲ, ಒಂದು ಒಳ್ಳೆಯ ಲವ್ ಸ್ಟೋರಿ ಕೂಡ ಚಿತ್ರದಲ್ಲಿದೆ. ಸಂಪೂರ್ಣ ಮನರಂಜನೆ ನೀಡುವ ಚಿತ್ರ. ಪ್ರೇಕ್ಷಕರಿಗೆ ಕೊಟ್ಟ ಹಣಕ್ಲೆ ಮೊಸ ಆಗಲ್ಲ ನಾನು ಟಿವಿ ಛಾಯಾಗ್ರಹಕನ‌ ಪಾತ್ರ ಮಾಡಿದ್ದು ಮೂರು ಅಂಶಗಳ ಮೇಲೆ ನಡೆಯೋ ಕಥೆಯಿದು ಅದು ಈಗಿನ‌ ಕಾಲದ ಯುವಕನಿಗೆ ಹೇಗೆ ಪರಿಣಾಮ ಬೀರಿತೆಂಬುದನ್ನು ಹೇಳಿದ್ದಾರೆ ಎಂದರು.
‌ ‌ ‌ವಿಜಯ್ ಸಿನಿಮಾಸ್ ಪರವಾಗಿ ಬಂದಿದ್ದ ವಿಜಯ್ ಮಾತನಾಡಿ ಈ ಚಿತ್ರವನ್ನು ಭಾರತ ಅಲ್ಲದೆ ವಿದೇಶದಲ್ಲೂ ಸಹ ರಿಲೀಸ್ ಮಾಡುತ್ತಿದ್ದೇವೆ. ವಾರದ ನಂತರ ಯು ಎಸ್ ಸೇರಿದಂತೆ ವಿದೇಶದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು

More Buzz

Buzz 4 days ago

Swastik Productions celebrates the iconic success of Shrimad Ramayan and the grand launch of Veer Hanuman

Trailers 10 months ago

Rudra Garuda Purana Official Teaser Starring Rishi, Priyanka

Trailers 10 months ago

Pepe Kannada Movie Trailer Starring Vinay Rajkumar

BuzzKollywood Buzz 10 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 10 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 10 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 10 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 10 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 10 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 10 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 10 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 10 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

Copyright ©2025 . All Rights Reserved. privacy | terms Whatsapp: 9538193653 Email: hello@flixoye.com