ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಹೊಸ ಸಿನಿಮಾ ಪೋಸ್ಟರ್.

Published on

438 Views

ಒಂದು ಸಿನಿಮಾ ಮೂಲಕ ತಾನೊಬ್ಬ ಅದ್ಭುತ ನಟಿ ಎಂದು ಸಿನಿಮಾ ರಂಗವು ತನ್ನ ಕಡೆ ತಿರುಗಿ ನೋಡುವಂತೆ ಮಾಡಿ, ರಾಷ್ಟ್ರ ಪ್ರಶಸ್ತಿಯನ್ನು ಪಡೆದ ನಟಿ ಎಂದರೆ ಅದು ಕೀರ್ತಿ ಸುರೇಶ್ ಅವರು. ಮಹಾನಟಿ ಎನ್ನುವ ಹಿರಿಯ ನಟಿ ಸಾವಿತ್ರಿ ಅವರ ಬಯೋಪಿಕ್ ನಲ್ಲಿ ನಟಿಸಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ನಟಿ ಕೀರ್ತಿ ಸುರೇಶ್ ಎಂದು ಕೂಡಾ ಹೇಳಿದರೂ ತಪ್ಪಾಗಲಾರದು. ಕೀರ್ತಿ ಅವರ ಕೀರ್ತಿ ಹೆಚ್ಚಿದ ಹಾಗೇ ಆಕೆಯ ಅಭಿಮಾನಿಗಳ ಬಳಗ ಕೂಡಾ ಬಹಳ ದೊಡ್ಡದಾಗಿದೆ.‌ ಗ್ಲಾಮರ್ ಗೇ ಆಗಲೀ, ನಟನೆಗೆ ಆಗಲೀ ಎಲ್ಲದಕ್ಕೂ ಕೂಡಾ ಸರಿ ಹೊಂದುವ ನಟಿ ಇವರು.

ಕೀರ್ತಿ ಸುರೇಶ್ ಅವರು ಯಾವುದೇ ಸಿನಿಮಾ ಒಪ್ಪಬೇಕಾದರೂ ತಮ್ಮ ಪಾತ್ರದ ಆಯ್ಕೆಯ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಕೂಡಾ ವಿಶೇಷ. ಈಗ ಕೀರ್ತಿ ಅವರ ಹೊಸ ಸಿನಿಮಾದ ಪೋಸ್ಟರ್ ಒಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ಕೀರ್ತಿ ಸುರೇಶ್ ಅವರ ಈ ಹೊಸ ಸಿನಿಮಾದ ಪೋಸ್ಟರ್ ವೈರಲ್ ಆಗಿದ್ದು, ನಟಿ ಕೂಡಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡಾ ಫೋಟೋಗಳನ್ನು ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಕೀರ್ತಿ ಅವರ ಡಿ ಗ್ಲಾಮರಸ್ ಲುಕ್ ನೋಡಿ ಥ್ರಿಲ್ ಆಗಿದ್ದಾರೆ.

ಮೇಕಪ್ ಇಲ್ಲದೇ ಇರುವ ಕೀರ್ತಿ ಅವರ ಸಿನಿಮಾದ ಪೋಸ್ಟರ್ ನೋಡಿ ಅವರ ಅಭಿಮಾನಿಗಳು ಅಚ್ಚರಿ ಯನ್ನು ವ್ಯಕ್ತಪಡಿಸಿದ್ದಾರೆ. ಕಾಲಿವುಡ್ ನಲ್ಲಿ ಬರುತ್ತಿರುವ ಈ ಹೊಸ ಸಿನಿಮಾದ ಹೆಸರು ಸಾನಿ ಕಾಯಿದಂ ಎಂದಿದ್ದು, ಕೀರ್ತಿ ಅವರ ಹೊಸ ಲುಕ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ ಹಾಗೂ ಅಚ್ಚರಿಯನ್ನು ಮೂಡಿಸುವಂತಿದೆ. ಈ ಹೊಸ ಸಿನಿಮಾದ ಪೋಸ್ಟರ್ ಅನ್ನು ನಟ ಧನುಶ್ ಅವರು ಬಿಡುಗಡೆ ಮಾಡಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

ಅರುಣ್ ಮಾದೇಶ್ವರನ್ ನಿರ್ದೇಶನದ ಈ ಸಿನಿಮಾ ಕ್ರೈ” ಮ್ ಥ್ರಿ” ಲ್ಲರ್ ಸಿನಿಮಾ ಆಗಿದೆ. ನಿರ್ದೇಶಕ ಸೆಲ್ವ ರಾಘವನ್ ಅವರು ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷವಾಗಿದ್ದು, ಪೋಸ್ಟರ್ ನಲ್ಲಿ ಕೀರ್ತಿ ಸುರೇಶ್ ಜೊತೆ ಅವರು ಕೂಡಾ ಇದ್ದು ಅವರ ಗೆಟಪ್ ಕೂಡಾ ವಿಭಿನ್ನವಾಗಿದ್ದು, ಪೋಸ್ಟರ್ ಮೂಲಕವೇ ಈ ಸಿನಿಮಾ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com