ಕಳೆದ ತೆರೆಕಂಡು ಪ್ರೇಕ್ಷಕರ ಹಾಗೂ ಪತ್ರಿಕೆಗಳ ಪ್ರಶಂಸೆ ಪಡೆದ
ಅಟೆಂಮ್ಟ್ ಟು ಮರ್ಡರ್ ಚಿತ್ರವನ್ನು ನಿರ್ಮಾಣ ಮಾಡಿದ್ದ
YES VEE ಪ್ರೋಡಕ್ಷನ್ಸ್ ಬ್ಯಾನರ್ ನ ಎಸ್.ವಿ.ನಾರಯಣ್
ಅವರು ದಯಾಳ್ ಪದ್ಮನಾಭನ್ ಅವರ ನಿರ್ದೇಶನದಲ್ಲಿ 2ನೇ ಚಿತ್ರವನ್ನು
ಪ್ರಾರಂಭಿಸಿದ್ದಾರೆ. ಚಿತ್ರಕ್ಕೆ ರಂಗನಾಯಕಿ ಎಂಬ ಶೀರ್ಷಿಕೆಯನ್ನು ಇಡಲಾಗಿದೆ.
ಇತ್ತೀಚೆಗೆ ದಯಾಳ್ ಅವರು ಕಾದಂಬರಿ ಆಧಾರಿತ ಹಾಗೂ ಸಸ್ಪೆನ್ಸ್ ಚಿತ್ರಗಳ
ಮೂಲಕ ಪ್ರೇಕ್ಷಕರನ್ನು ರಂಜಿಸಿ ಮೆಚ್ಚಿಸುತ್ತಿದ್ದು ಅದೇ ಸಾಲಿಗೆ ರಂಗನಾಯಕಿ
ಚಿತ್ರವು ಸಹ ಸೇರಿಕೊಳ್ಳಲಿದೆ. ಇತ್ತೀಚೆಗಷ್ಟೆ ರಂಗನಾಯಕಿ ಹೆಸರಿನ ಕಿರು ಕಾದಂಬರಿಯನ್ನು ಬಿಡುಗಡೆ ಮಾಡಿದ್ದ ದಯಾಳ್ ಅವರು ಅದೇ ಕಥೆಯನ್ನು
ಸಿನಿಮಾ ಸಿನಿಮಾ ಮಾಡುತ್ತಿದ್ದಾರೆ.

ಶ್ರೀನಿ ಅದಿತಿ ಪ್ರಭುದೇವ್ ಜೋಡಿಯಾಗಿ
ಕಾಣಿಸಿಕೊಳ್ಳುತ್ತಿರುವ ರಂಗನಾಯಕಿ ಚಿತ್ರವನ್ನು ಎಸ್.ಪಿ.ನಾರಯಣ್ ಅವರು
ನಿರ್ಮಾಣ ಮಾಡಲಿದ್ದಾರೆ. ಈ ಹಿಂದಿನ ದಯಾಳ್ ಅವರ ಸಿನಿಮಾಗಳಲ್ಲಿ ಕೆಲಸ
ಮಾಡಿದ್ದ ತಂತ್ರಜ್ಞರೇ ಈ ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ. ನವೀನ್ ಕೃಷ್ಣ ಅವರ
ಸಂಭಾಷಣೆ ಅವಿನಾಶ್ ಶೆಟ್ಟಿ ಅವರ ಸಹ ನಿರ್ಮಾಣ ಮಣಿಕಾಂತ್ ಕದ್ರಿ ಅವರ ಸಂಗೀತ ರಾಕೇಶ್ ಅವರ ಛಾಯಗ್ರಹಣ ಈ ಚಿತ್ರಕ್ಕಿರಲಿದೆ.
ಈ ತಿಂಗಳ 26 ಶುಕ್ರವಾರದಂದು ರಂಗನಾಯಕಿ
ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಲಿದೆ.









