flixOye
Buzz

ಜುಲೈ 12 ರಿಂದ ತೆರೆಗೆ ಬರಲಿದೆ ಯಾನ

ಕನ್ನಡ ಚಿತ್ರರಂಗದ ತಾರ ದಂಪತಿಗಳಾದ ಜೈಜಗದೀಶ್ ಹಾಗೂ ವಿಜಯ್ ಲಕ್ಷ್ಮೀ ಅವರ ಮೂವರ ಹೆಣ್ಮಕ್ಕಳು ಏಕಕಾಲದಲ್ಲಿ
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಯಾನ ಚಿತ್ರವು ಜುಲೈ 12ರಿಂದ ತೆರೆಗೆ ಬರಲಿದೆ.

ಸೆನ್ಸಾರ್ ಮುಗಿಸಿರುವ ಈ ಚಿತ್ರವು ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ.ಈ ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್‌ ಅವರೇ ನಿರ್ದೇಶನ ಮಾಡಿದ್ದು ತಮ್ಮ ಮೂವರು ಮಕ್ಕಳಾದ ವೈಭವಿ, ವೈನಿಧಿ, ವೈಸಿರಿ ಅವರನ್ನು ಸಿನಿಮಾ ಏಕಕಾಲದಲ್ಲಿ ಪರಿಚಯ ಮಾಡುತ್ತಿದ್ದಾರೆ.


ಈ ಚಿತ್ರಕ್ಕೆ “ಸಿಂಪಲ್‌’ ಸುನಿ ಅವರು ಸಂಭಾಷಣೆ ಬರೆದಿದ್ದಾರೆ. ಕರಂ ಚಾವ್ಲಾ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್‌ ಅವರ ಸಂಗೀತ ಸಂಯೋಜನೆ, ಜೆ.ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ ಬಿ.ಎಸ್.ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ. ವಿಜಯಲಕ್ಷ್ಮೀ ಸಿಂಗ್‌ ಮತ್ತು ಜೈಜಗದೀಶ್‌ ಅವರೊಂದಿಗೆ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಅವರು ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಸಂಬಂಧಿತ · Related