ಟೀಸರ್ ಮೂಲಕ‌ ಸದ್ದು ಮಾಡುತ್ತಿದೆ GL0PIXS ಅರ್ಪಿಸುವ “ಯದ್ಭಾವಂ ತದ್ಭವತಿ”.

Published on

603 Views
Advertisement

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗಾಗಲೇ 54 ಪ್ರಶಸ್ತಿಗಳು ಬಂದಿದೆ.
ಬ್ರಹ್ಮ ಸಿನಿಮಾ ಹಾಲಿಕ್ ಡಿಜಿಟಲ್ ಸ್ಟುಡಿಯೋಸ್ ಹಾಗೂ ಬಿ.ಸಿ.ಡಿ ಸ್ಟುಡಿಯೋಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ, GlOPIXS ಅರ್ಪಿಸುವ “ಯದ್ಭಾವಂ ತದ್ಭವತಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಟೀಸರ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಅಡವಿ ಶೇಷ್ ‘ಹಿಟ್ -2’ ಡಿಸೆಂಬರ್ 2ಕ್ಕೆ ಬಿಡುಗಡೆ- ಶೈಲೇಶ್ ಕೊಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ

“ಯದ್ಭಾವಂ ತದ್ಭವತಿ” ಅಂದರೆ ನಾವು ಜಗತ್ತನ್ನು ಯಾವ ರೀತಿ ನೋಡುತ್ತೇವೊ, ಜಗತ್ತು ನಮ್ಮನ್ನು ಅದೇ ರೀತಿ ನೋಡುತ್ತದೆ ಎಂದು. ಈ ಹಿಂದೆ ಹಾಲಿವುಡ್ ಚಿತ್ರವೊಂದನ್ನು ನೋಡಿದ್ದೆ. ಆಗ ಈ ರೀತಿಯ ಕಾನ್ಸೆಪ್ಟ್ ನ ಚಿತ್ರ ಮಾಡಬೇಕೆಂದು ಕೊಂಡೆ. ಚಿತ್ರದಲ್ಲಿ‌ ನಾನೊಬ್ಬನೆ ನಟ. ಆದರೆ ಮೂರು ಪಾತ್ರ. ಮೂರು ಬೇರೆ ಬೇರೆ ರೀತಿಯ ಪಾತ್ರ. ನಿರ್ದೇಶನವನ್ನೂ ನಾನೇ ಮಾಡಿದ್ದೇನೆ. ಇನ್ನೂ ಖುಷಿಯ ವಿಚಾರವೆಂದರೆ ನಮ್ಮ ಚಿತ್ರ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ 54 ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಚನ್ನಪಟ್ಟಣದ ಬಳಿ ಇಪ್ಪತ್ತಕ್ಕೂ ಅಧಿಕ ದಿನಗಳ ಚಿತ್ರೀಕರಣ ಮಾಡಿದ್ದೇವೆ. ಈ ಹಿಂದೆ “ಹವಾಲ” ಎಂಬ ಚಿತ್ರ ನಿರ್ದೇಶನ ಮಾಡಿದ್ದ ನನಗೆ, ಇದು ಎರಡನೇ ಚಿತ್ರ. ಹದಿನೆಂಟು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆ ನಟನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ನಿರ್ದೇಶಕ – ನಟ ಅಮಿತ್ ರಾವ್, ಟೀಸರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಗಣ್ಯರಿಗೆ ಧನ್ಯವಾದ ತಿಳಿಸಿದರು.

Advertisement

ನಿರ್ಮಾಪಕ ಮಂಜುನಾಥ್ ಎಂ ದೈವಜ್ಞ, ಕಾಸ್ಟ್ಯೂಮ್ ಡಿಸೈನರ್ ರಶ್ಮಿ ಅನೂಪ್ ರಾವ್, ಸಂಗೀತ ನಿರ್ದೇಶಕ ರಾಕಿಸೋನು ಹಾಗೂ ಸುಪ್ರೀತ್ (ಡಿ ಐ – ವಿ ಎಫ್.ಎಕ್ಸ್) ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು.

Advertisement

ಸಾಹಸ ಸಿಂಹ ವಿಷ್ಣುವರ್ಧನ್ ರವರ ಅದ್ದೂರಿಯಾದ ನೂತನ ‘ವಲ್ಮಿಕ’ ಮನೆಯ ಗೃಹಪ್ರವೇಶ”
ನಟ, ನಿರ್ದೇಶಕ ಹಾಗೂ ಸಂಕಲನಕಾರ ನಾಗೇಂದ್ರ ಅರಸ್, ನಿರ್ಮಾಪಕ ನಿತ್ಯಾನಂದ ಪ್ರಭು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗ ಈಗ ವಿಶ್ವದಾದ್ಯಂತ ಹೆಸರುವಾಸಿ. ಇಂತಹ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನವಿರುವ ಹಾಗೂ ಕನ್ನಡ ಚಿತ್ರಗಳು ಎಲ್ಲಾ ಕಡೆ ತಲುಪಬೇಕೆಂಬ ಸದ್ದುದ್ದೇಶ ಹೊಂದಿರುವ GL0PIXS ಎಂಬ ದೊಡ್ಡ ಸಂಸ್ಥೆ ಈ ಚಿತ್ರವನ್ನು ನೋಡಿ, ಮೆಚ್ಚಿ ಬಿಡುಗಡೆ ಮಾಡಲು ಮುಂದಾಗಿದೆ‌.

More Buzz

Trailers 5 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 5 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com