ಬಾಲಿವುಡ್ ಅಂಗಳದಲ್ಲಿ ಮದುವೆ ಸುದ್ದಿ
ಕೊಹ್ಲಿ ಅನುಷ್ಕಾ ಮದುವೆ ನಂತರ ಬಾಲಿವುಡ್ ಅಂಗಳದಲ್ಲಿ ಮದುವೆ ಸುದ್ದಿಯೇ ಹರಿದಾಡುತ್ತಿದೆ. ಸದ್ಯದಲ್ಲೇ ಫೇಮಸ್ ಕಪಲ್ಸ್ ಸಪ್ತಪದಿ ತುಳಿಯಲಿದ್ದಾರೆ. ಬಾಲಿವುಡ್ ನಲ್ಲಿ ಮದುವೆ ಟ್ರೆಂಡ್ ಶುರುವಾಗಿದೆ. ಪ್ರಣಯ ಪಕ್ಷಿಯಂತೆ ಹಾರುತ್ತಿದ್ದ ದೀಪಿಕಾ – ರಣವೀರ್ ಸಿಂಗ್ ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದೆ. ಬಿಟೌನ್ ನ ಕ್ಯೂಟ್ ಕಪಲ್ ರಣವೀರ್ ಸಿಂಗ್ ,ದೀಪಿಕಾ ಮದುವೆ ಬಗ್ಗೆ ಬಾಲಿವುಡ್ ನಲ್ಲಿ ಗುಸು ಗುಸು ಕೇಳಿ ಬರ್ತಿದೆ. ಈಗಾಗಲೇ ಎರಡು ಕುಟುಂಬದವರಲ್ಲೂ ಮಾತುಕತೆ ನಡೆದಿದು, ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡ ದೀಪಿಕಾ ಬೆಂಗಳೂರಿನಲ್ಲಿ ಚಿನ್ನಾಭರಣಗಳನ್ನು ಖರೀದಿಸಿದ್ದಾರೆ.
ಹಾಗೇ ನಟ ಅನಿಲ್ ಕಫೂರ್ ಮಗಳು ಸೋನಂ ಕಫೂರ್ ತನ್ನ ಬಹುದಿನದ ಗೆಳೆಯ ಬಿಸಿನೆಸ್ ಮ್ಯಾನ್ ಆನಂದ್ ಅಹುಜಾನ್ ಜೊತೆ ಹಸೆಮಣೆ ಏರಲಿದ್ದಾರೆ. ಮೇ 11ರಂದು ಸ್ವಿಜರ್ಲ್ಯಾಂಡ್ ನ ಜಿನೀವಾ ದಲ್ಲಿ ಮದುವೆ ನಡೆಸಲು ಕುಟುಂಬದವರು ನಿಶ್ಚಿಯಿಸಿದ್ದಾರೆ.









