ನಾವಿಬ್ಬರು ಬೆಸ್ಟ್ ಫ್ರೆಂಡ್ಸ್

Published on

642 Views
Advertisement

ಶೃತಿ ಮತ್ತು ರಶ್ಮಿ ಗೆಳತಿಯರು ಪ್ರೀತಿಗೋಸ್ಕರ ಮನಸ್ತಾಪ ಮಾಡಿಕೊಂಡಿದ್ದಾರೆ. ಒಬ್ಬಾಕೆ ಮಚ್ಚಿನಿಂದ ಆಕ್ರಮಣ ಮಾಡಿ ಕೊಲೆ ಆರೋಪದ ಮೇಲೆ ಜೈಲಿನಲ್ಲಿ ಬಂದಿಯಾಗಿದ್ದಾರೆ. ಇದು ನಡೆದಿದ್ದು 2012, ಹಾಸನದಲ್ಲಿ. ಇದನ್ನೆ ಆಧರಿಸಿದ ‘ಬೆಸ್ಟ್ ಫ್ರೆಂಡ್ಸ್’ ಸಿನಿಮಾವೊಂದು ಸೆನ್ಸಾರ್‍ನಿಂದ ಯುಎ ಪ್ರಮಾಣಪಡೆದುಕೊಂಡು ಜನರಿಗೆ ತೋರಿಸಲು ಸಜ್ಜಾಗಿದೆ. ನಿರ್ದೇಶಕ ಟೇ.ಶೀ.ವೆಂಕಟೇಶ್ ಇದರ ಬಗ್ಗೆ ಸಂಶೋಧನೆ ನಡೆಸಿ ಸಂಬಂದಪಟ್ಟವರು, ವಕೀಲರನ್ನು ಭೇಟಿ ಮಾಡಿ ಹಲವು ವಿಷಯಗಳನ್ನು ಕಲೆಹಾಕಿ ಕತ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಶೇಕಡ 50 ರಷ್ಟು ನೈಜ ಘಟನೆ ಇರಲಿದ್ದು, ಉಳಿದವು ಕಾಲ್ಪನಿಕವಾಗಿದೆಯಂತೆ. ಘರ್ಷಣೆ ನಡುವೆ ಕಾನೂನು ಮತ್ತು ಮಾನವ ಹಕ್ಕುಗಳು, ಇದು ತೀರ್ಪು ನೀಡಲಾಗದ ಪ್ರೇಮಕತೆ ಅಂತ ಪೋಸ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ. ನಿರ್ದೇಶಕರು ಹೇಳುವಂತೆ ಭಾವನೆಗಳು ತುಂಬಿದ ಪ್ರೇಮಕತೆಯಲ್ಲಿ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಹೆಣ್ಣು ಮತ್ತು ಹೆಣ್ಣು ಸಲಿಂಗ ಕಾಮಿಗಳಾಗಿ ಪ್ರೇಮ ವಿಚಾರ ಸಂಬಂದದಲ್ಲಿ ಒಬ್ಬಳೆ ಉಳಿಯಬೇಕೆಂದು ಅಪರಾಧ ಮಾಡುವುದು. ಸರಿಯಲ್ಲವೆಂದು ಸಂದೇಶದ ಮೂಲಕ ಹೇಳಲಾಗಿದೆಯಂತೆ.

Advertisement

ಸಲಿಂಗಕಾಮ ಮಾಡುವುದು ಕಾನೂನುಬಾಹಿರವೆಂದು ದೇಶದ 72 ಪ್ರದೇಶಗಳಲ್ಲಿ ಹೇಳಿದೆ. ಸರ್ವೋಚ್ಚ ನ್ಯಾಯಲಯವು ಸೆಕ್ಷನ್ 377 ಐಪಿಸಿ ಪ್ರಕಾರ ಇಂತಹ ಅಪರಾಧಿಗಳಿಗೆ ಜೀವಾವಧಿ ಶಿಕ್ಷಿ ವಿದಿಸಿರುತ್ತದೆ. ಸಲಿಂಗಕಾಮಿಗಳು, ಲೈಂಗಿಕ ಕಾರ್ಯಕರ್ತರನ್ನು ಸಮಾಜವು ಒಂದು ರೀತಿಯಲ್ಲಿ ನೋಡುತ್ತದೆ. ಪ್ರೇಮಕತೆಯಾಗಿ ಉಳಿಯಬೇಕು, ಕಾಮಕತೆಯಾಗಿ ಉಳಿಬಾರದು. ಈ ವರ್ಗದ ಜನರನ್ನು ದೋಷಿಸದೆ, ಸಾಮಾಜಿಕ ನ್ಯಾಯ ನೀಡಬೇಕು ಎಂಬುದರ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಚಿತ್ರದಲ್ಲಿ ನಟರು ಇರದೆ ಹೊಸ ನಟಿಮಣಿಯರು ಅಭಿನಯಿಸಿರುವುದು ವಿಶೇಷವಾಗಿದೆ. ಮುಖ್ಯ ಪಾತ್ರದಲ್ಲಿ ಮೇಘನಾ ಮತ್ತು ಚಿಕ್ಕಮಗಳೂರಿನ ದ್ರಾವ್ಯಶೆಟ್ಟಿ ಇವರೊಂದಿಗೆ ಆಶಾ, ಸುಮತಿಪಾಟೀಲ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಅಖಂಡ ಕರ್ನಾಟಕ ಚಲನ ಚಿತ್ರೋದ್ಯಮ ಪರಿಷತ್ ಮುಖಾಂತರ ಲಯನ್ ಎಸ್.ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಚಿತ್ರವು ಮುಂದಿನ ತಿಂಗಳು ಬಿಡುಗಡೆದಯಾಗುವ ಸಾದ್ಯತೆ ಇದೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com