ವಿಠಲ್ ಭಟ್ “ಹ್ಯಾಂಗೋವರ್”

Published on

547 Views
Advertisement

ನಿರ್ದೇಶಕ ವಿಠಲ್ ಭಟ್ ತನ್ನ ನಟನಾ ತರಬೇತಿ ಶಾಲೆಯಾದ “ಫಿಲಂ ಫ್ಯಾಕ್ಟರಿ”ಯಲ್ಲಿ ಹ್ಯಾಂಗೋವರ್ ಚಿತ್ರದ ನಾಯಕರಾದ ಭರತ್, ರಾಜ್ ಭನಾವತ್, ಚಿರಾಗ್ ಮತ್ತು ನಾಯಕಿಯರಾದ ನಂದಿನಿ ನಟರಾಜ್, ಸಹನ್ ಪೊನ್ನಮ್ಮ ಅಷ್ಟೇ ಅಲ್ಲದೇ ಪೋಷಕ ನಟರಾದ ಶಶಾಂಕ್, ರಂಜನ್, ದ್ರುಪದ್, ಸೋಹನ್ ಮತ್ತು ಪ್ರಿಯಾಂಕ ಎಲ್ಲರೂ ವಿಠಲ್ ಭಟ್ ಹತ್ತಿರ ನಟನಾ ತರಬೇತಿಯನ್ನು ಪಡೆದ ವಿಧ್ಯಾರ್ಥಿಗಳು.

ಮೈಸೂರಿನಲ್ಲಿರುವ ವಿಠಲ್ ಭಟ್‍ರವರ “ಫಿಲಂ ಫ್ಯಾಕ್ಟರಿ”ಯಲ್ಲಿ ನಟನಾ ತರಬೇತಿಯನ್ನು ಹೊಂದಿದ ವಿಧ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ಚಿತ್ರದ ಪಾತ್ರಕ್ಕೆ ಬೇಕಾದ ನಟನಾ ವರ್ಕ್‍ಶಾಪ್ ಮಾಡಿ, ನಿರ್ಮಾಪಕರಾದ ರಾಕೇಶ್ ಡಿ ಅವರಿಗೆ ಕಥೆಯನ್ನು ಒಪ್ಪಿಸಿ, ಇಡೀ ಹ್ಯಾಂಗೋವರನ್ನು ಮೈಸೂರು, ಬೆಂಗಳೂರು ಮತ್ತು ಊಟಿಯಲ್ಲಿ ಚಿತ್ರೀಕರಿಸಿದ್ದಾರಂತೆ.

Advertisement

ಸುಮಾರು 36ದಿನಗಳಲ್ಲಿ ತಯಾರಾದ ಹ್ಯಾಂಗೋವರ್ ಚಿತ್ರಕ್ಕೆ ಅಚ್ಚುಕಟ್ಟಾದ ಸಂಭಾಷಣೆಯನ್ನು ಒದಗಿಸಿದ್ದಾರೆ ಗಣೇಶ್ ರಾಣಿಬೆನ್ನೂರು, ಕಥೆಯ ಸನ್ನಿವೇಷಕ್ಕೆ ತಕ್ಕಂತೆ ಎರಡು ಸುಮಧುರವಾದ ಸಂಗೀತವನ್ನು ಒದಗಿಸಿಕೊಟ್ಟಿದ್ದಾರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮತ್ತು ಅಷ್ಟೇ ಸುಂದರವಾಗಿ ಛಾಯಾಗ್ರಹಣವನ್ನು ಮಾಡಿದ್ದಾರೆ ಯೋಗಿ. ಕಿರಣ್ ಕುಮಾರ್ ಚಿತ್ರದ ಸಂಕಲನಗಾರ.

Advertisement

ಹ್ಯಾಂಗೋವರ್ ಮೂವರು ಯುವಕರ ಕಥೆ.. ಜಾಲಿ, ಮೋಜು-ಮಸ್ತಿ ಮಾಡುತ್ತಾ ಸಂತೋಷದಿಂದ ಇರುವ ಇವರ ಜೀವನದಲ್ಲಿ ನಡೆಯುವ ಒಂದು ಸನ್ನಿವೇಷ ಇವರ ಜೀವನ ಶೈಲಿಯನ್ನೇ ಬದಲಾಯಿಸುವಷ್ಟು ದೊಡ್ಡ ಸಮಸ್ಯೆಯಾಗಿ ಬಲಾಗುತ್ತದೆ. ಇದರಿಂದ ಪಾರಾಗುವ ಪ್ರತಿಯೊಂದು ಸನ್ನಿವೇಷವೂ ಚಿತ್ರ ನೋಡುವ ವಿಕ್ಷಕರಿಗೆ ವಿಶೇಷ ಅನುಭೂತಿಯನ್ನು ನೀಡುತ್ತದೆ. ಹ್ಯಾಂಗೋವರ್ ಒಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆ..

Advertisement

ವಿಶೇಷವಾದ ಹಾಡೊಂದಕ್ಕೆ ನೀತು ಅವರ ಹೆಜ್ಜೆ, ಕಲೈರವರ ನೃತ್ಯ ಸಂಯೋಜನೆ ಚಿತ್ರದ ಹೈಲೆಟ್ಟಾಗಿ ನಿಲ್ಲುತ್ತದೆ ಮತ್ತು ಚಿತ್ರದ ರಿವರ್ಸ್ ಸ್ಕ್ರೀನ್ ಪ್ಲೇ ಮತ್ತೊಂದು ಹೈಲೆಟ್.
ಸಧ್ಯದಲ್ಲೇ ಹಾಡುಗಳನ್ನು ಪ್ರೇಕ್ಷಕರಿಗೆ ಕೇಳಿಸಲು ಎಲ್ಲಾ ತಯಾರಿಯನ್ನು ನಡೆಸುತ್ತಿದೆ ಚಿತ್ರತಂಡ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com