ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ’ಸೀತಾಯಣ’ ಚಿತ್ರದ ಮೂಲಕ ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ನಾಯಕನಾಗಿ ಪರಿಚಯಗೊಂಡಿದ್ದರು. ಸಿನಿಮಾದ ತಲಾ ಒಂದೊಂದು ವಿಡಿಯೋ ಗೀತೆಯನ್ನು ಉಪೇಂದ್ರ ಮತ್ತು ರಶ್ಮಿಕಾಮಂದಣ್ಣ ಬಿಡುಗಡೆ ಮಾಡಿದರೆ, ಶಿವರಾಜ್‌ಕುಮಾರ್, ತೆಲುಗು ನಟ ರವಿತೇಜಾ ಟೀಸರ್‌ನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದರು. ಚಿತ್ರವು ಸದ್ಯದಲ್ಲೆ ತೆರೆಗೆ ಬರಲಿದೆ.

ಈಗ ಅಕ್ಷಿತ್‌ರವರು ’ಸಮಿತ್’ ಎನ್ನುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೋಮವಾರ ಹೈದರಬಾದ್‌ದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿದೆ. ಇದು ಸಹ ಕನ್ನಡ,ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವುದು ವಿಶೇಷ. ಅಲ್ಲದೆ ಮಲಯಾಳಂದಲ್ಲಿ ಡಬ್ ಆಗಲಿದೆ.

ಚಾಂದಿನಿ ಹಾಗೂ ಅನುವರ್ಣ ನಾಯಕಿಯರುಗಳಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ತಾರಗಣ ಆಯ್ಕೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಕೊನೆಗೊಳ್ಳಲಿದೆ. ಸತೀಶ್ ಮಲೆಂಪಾಟಿ ಕತೆ,ನಿರ್ದೇಶನ ಜೊತೆಗೆ ಅರುಣಾಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ. ಸತ್ಯ ಘಟನೆ ಆಧಾರಿತವಾಗಿದ್ದರಿಂದ ಸಿನಿಮಾದ ಥ್ರಿಲ್ಲಿಂಗ್ ಸಾರಾಂಶವನ್ನು ಗೌಪ್ಯವಾಗಿಡಲಾಗಿದೆ. ಯಾರಿಗಾದ್ರು ಸಾವು ಎರಡು ಸಂದರ್ಭದಲ್ಲಿ ಬರುತ್ತದೆಂದು ಪೋಸ್ಟರ್‌ನಲ್ಲಿ ಹೇಳಿದ್ದು ಕುತೂಹಲ ಹುಟ್ಟುಹಾಕಿದೆ. ಸಂಗೀತ ಬೀಮ್ಸ್ ಸಿಸಿರೋಲಿಯೋ, ಛಾಯಾಗ್ರಹಣ ಸತೀಶ್ ಮುತ್ಯಾಲ, ಸಂಕಲನ ಬಿ.ನಾಗೇಶ್ವರ ರೆಡ್ಡಿ, ಕಲೆ ನಾರಾಯಣರಾವ್ ಮುಪ್ಪಲ, ಪಬ್ಲಿಸಿಟಿ ಡಿಸೈನ್ ಪ್ರವೀಣ್‌ಯಾದವ್, ಪತ್ರಿಕಾ ಸಂಪರ್ಕ ಆರ್.ಚಂದ್ರಶೇಖರ್ ಅವರದಾಗಿದೆ. ಸುಮಾರು ಐವತ್ತು ದಿನಗಳ ಕಾಲ ಬೆಂಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಮೇ ತಿಂಗಳಲ್ಲಿ ಜನರಿಗೆ ತೋರಿಸಲು ತಂಡವು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.