ಸಾಂಸ್ಕ್ರತಿಕ ನಾಡಿನಲ್ಲಿ ವೆನಿಲ್ಲಾ ಫ್ಲೆವರ್

Published on

781 Views
Advertisement

ಚಿತ್ರರಂಗದ ಕಾರ್ಯಕ್ರಮಗಳು ಸಿನಿಕಾನ್ ಸಿಟಿಯಲ್ಲಿ ನಡೆಯುವುದು ಸಹಜ. ಅಪರೂಪಕ್ಕೆ ಎನ್ನುವಂತೆ ‘ವೆನಿಲ್ಲಾ’ ಚಿತ್ರದ ಧ್ವನಿಸಾಂದ್ರಿಕೆಯು ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿತು. ದರ್ಶನ್‍ಗೆ ಮೈಸೂರು ಪ್ರಿಯವಾಗಿದ್ದರಿಂದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಿರ್ದೇಶಕ ಜಯತೀರ್ಥ ಮಾತನಾಡಲು ಶುರು ಮಾಡಿದಾಗ ಜೈಕಾರ ಕೇಳಿಬಂತು. ಇದಕ್ಕೆ ಅವರು ಇದನ್ನು ಕರೆಸಿಕೊಳ್ಳಲು ಅವರಿಗೆ ಮಾತ್ರ ಸಾಧ್ಯ, ನೀವುಗಳು ಏನಿದ್ದರೂ ಪ್ರೀತಿ ಕೊಡಿ. ಬ್ಯೂಟಿಫುಲ್ ಮನಸುಗಳು ಆಡಿಯೋ ಸಿಡಿಯನ್ನು ದರ್ಶನ್ ಅವರು ಬಿಡುಗಡೆ ಮಾಡಿದ್ದು ಹಿಟ್ ಆಗಿತ್ತು. ಇದು ಸಹ ಅದೇ ಸಾಲಿಗೆ ಸೇರುವುದೆಂಬ ನಂಬಿಕೆ ಇದೆ. ಅವಿನಾಶ್ ಅವರು ಮಂಡ್ಯ ರಮೇಶ್ ಶಾಲೆಯಲ್ಲಿ ತರಭೇತಿ ಪಡೆದುಕೊಂಡು ಚೆನ್ನಾಗಿ ನಟಿಸಿದ್ದಾರೆ. ಮಗನ ಆಸೆಗೆ ಅಪ್ಪ ನಿರ್ಮಾಣ ಮಾಡಿರುವುದು ಸಂತಸದ ವಿಷಯ. ಮರ್ಡರ್ ಮಿಸ್ಟ್ರೀ ಕತೆಯಾಗಿದೆ. ಐದು ಹಾಡುಗಳಲ್ಲಿ ಜಯಂತ್‍ಕಾಯ್ಕಣಿ, ಪತ್ರಕರ್ತ ಮದನ್‍ಬೆಳ್ಳಿಸಾಲು ಉಳಿದಂತೆ ಮೂರು ಹಾಡುಗಳಿಗೆ ಸ್ಪರ್ಧೆಯಲ್ಲಿ ವಿಜೇತರಾದವರ ಸಾಹಿತ್ಯವನ್ನು ಬಳಸಲಾಗಿದೆ ಎಂದರು.

Advertisement

ಮಂಡ್ಯ ರಮೇಶ್ ರಂಗಸಂತ ಇದ್ದಂತೆ. ಅವರ ಗರಡಿಯಿಂದ ಪಳಗಿದವರಿಗೆ ಭವಿಷ್ಯ ಇದೆ. ಭಾರತೀಯ ಚಿತ್ರರಂಗದಲ್ಲಿ ನಾಯಕ, ಅದರಲ್ಲೂ ಸಂಪೂರ್ಣ ಖಳನಾಯಕನಾಗಿ ಅಭಿನಯಿಸಿದ್ದು ಇಬ್ಬರು ಅಂತ ಹೇಳಬಹುದು. ಡಾ.ರಾಜ್‍ಕುಮಾರ್ ಅವರ ಭಕ್ತಪ್ರಹ್ಲಾದ, ದರ್ಶನ್ ನಟಿಸಿರುವ ಕುರುಕ್ಷೇತ್ರ. ಅವರ ಸಂಸ್ಥೆಯಿಂದ ಜೊತೆ ಜೊತೆಯಲಿ ನಾಯಕನಾಗಿ ಅಭಿನಯಿಸಲು ಕರೆ ಬಂದಿತ್ತು. ಆಗ ಸಿಲ್ಲಿ ಲಲ್ಲಿ ಧಾರವಾಹಿಯ ನಿರ್ಮಾಪಕರು ಅವಕಾಶ ನೀಡಿದೆ ಇದ್ದ ಕಾರಣ ತಪ್ಪಿಹೋಯಿತು. ಈಗಲೂ ಪಶ್ಚತ್ತಾಪವಾಗುತ್ತಿದೆ ಎಂದು ಹೇಳಿದ್ದು ಇನ್ಸೆಪೆಕ್ಟರ್ ಪಾತ್ರ ಮಾಡಿರುವ ರವಿಶಂಕರ್‍ಗೌಡ.

ನಿರ್ದೇಶಕರು ಪ್ರಾರಂಭದಲ್ಲಿ ಎರಡು ಸಾಕು ಅಂತ ಐದು ಹಾಡುಗಳಿಗೆ ಕೆಲಸ ಕೊಡುತ್ತಾರೆ ಎನ್ನುವುದು ಬಿ.ಜೆ.ಭರತ್ ಮಾತು. ಈ ತಂಡದಲ್ಲಿ ನಾನು ನಟಿಸದೆ ಇದ್ದರೂ, ಸಂಪೂರ್ಣ ರಂಗಭೂಮಿ ತಂಡದವರು ಸಿದ್ದಪಡಿಸಿದ ಚಿತ್ರವಾಗಿದ್ದರಿಂದ ಇಂದು ಭಾಗಿಯಾಗಿರುವುದು ಖುಷಿ ನೀಡಿದೆ. ನೀನಾಸಂ ತಂಡದಲ್ಲಿ ಪಳಗಿದ ದರ್ಶನ್ ಇಂದು ಎತ್ತರಕ್ಕೆ ಹೋಗಿದ್ದಾರೆ. ಆದರೂ ಅದೇ ನಯ ವಿನಯ ಕಾಣುತ್ತದೆ. ಹಾಲು ವ್ಯಾಪಾರ, ಲೈಟ್‍ಮ್ಯಾನ್ ಹೀಗೆ ಸಾಮಾನ್ಯ ಹುಡುಗನಾಗಿ ಇಂದು ಅಸಾಮಾನ್ಯರಾಗಿ ಬೆಳೆದಿದ್ದ್ದರೂ ಮನಸ್ಸು ಮಗು ತರಹ. ಅದು ಅವನ ದೊಡ್ಡ ಗುಣ. ತಾನು ಬೆಳೆದಂತೆ ಇತರರು ಬೆಳಯಬೇಕು ಎಂದು ಬಯಸುವ ಕೆಲವೇ ನಾಯಕರುಗಳಲ್ಲಿ ಇವರು ಸೇರಿಕೊಂಡಿದ್ದಾರೆ. ತಂಡಕ್ಕೆ ಶುಭವಾಗಲಿ ಎನ್ನುತ್ತಾರೆ ಮಂಡ್ಯರಮೇಶ್.

Advertisement

ಅಪ್ಪನ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಇರುವದರಿಂದಲೇ ನಾಯಕನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ನಿರ್ದೇಶಕರ ಹಿಂದಿನ ಸಿನಿಮಾ ನೋಡಿರಲಿಲ್ಲ. ಅವರೊಂದಿಗೆ ಐದು ನಿಮಿಷ ಚರ್ಚೆ ಮಾಡಿದಾಗ ಇವರೇ ಸೂಕ್ತ ಅಂತ ನಿರ್ಧರಿಸಲಾಯಿತು. ದರ್ಶನ್ ಸರ್ ಗುಣಗಳಲ್ಲಿ ಶೇಕಡ 5 ರಷ್ಟು ಕಲಿತುಕೊಳ್ಳುತ್ತೇನೆ ಎಂದು ‘ಆವರಿಸು’ ಗೀತೆಯ ಸಾಲನ್ನು ಹಾಡಿದರು ಅವಿನಾಶ್. ತುಮಕೂರಿನ ಸ್ವಾತಿ ಮಾತನಾಡಿ ನಿರ್ದೇಶಕರ ಹಿಂದಿನ ಚಿತ್ರದಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. ಇದರಲ್ಲಿ ನಾಯಕಿ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದರು.

Advertisement

ನಾನು ಮೊದಲು ಬಣ್ಣ ಹಚ್ಚುವಂತೆ ಮಾಡಿದ್ದು ಮಂಡ್ಯಾ ರಮೇಶ್. ಅವರಿಂದ ಸಾಕಷ್ಟು ಕಲಿತಿರುವೆ. ಪ್ರಾರಂಭದಲ್ಲಿ ಎಲಕ್ಟ್ರಿಕ್ ಕೆಲಸ ಮಾಡುವಾಗ ನನ್ನೊಂದಿಗೆ ಕಿರಣ್‍ಹಂಪಾಪುರ ಇದ್ದರು. ಈ ಚಿತ್ರಕ್ಕೆ ಅವರು ಛಾಯಗ್ರಾಹಕರಾಗಿ ಇರುವುದು ಸಂತೋಷ ಆಗಿದೆ. ಡ್ಯಾನ್ಸ್, ಫೈಟ್ ಬರುವುದು ಕೇವಲ ಅರ್ಧ ಗಂಟೆ. ಉಳಿದ ಎರಡು ಗಂಟೆ ಅಭಿನಯ. ಮೊದಲು ಅದನ್ನು ಕಲಿಯಬೇಕು. 50 ಚಿತ್ರಗಳಲ್ಲಿ ನಟಿಸಿದ್ದರೂ 51ನೇ ಚಿತ್ರಕ್ಕೆ ನಾನು ಹೊಸಬ. ಆ ತರಹ ಅಂದುಕೊಂಡು ಶುರು ಮಾಡುತ್ತೇನೆಂದು ಎಂದು ದರ್ಶನ್ ಅವರು ಹೇಳುವಾಗ ಜೈಕಾರ, ಶಿಳ್ಳೆಗಳು ಕೇಳಿಬಂತು. ನಿರ್ಮಾಪಕ ಜಯರಾಂ ಮಾತನಾಡಲಿಲ್ಲ. ಚಿತ್ರವು ಮಾರ್ಚ್‍ನಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com