ವಸಿಷ್ಠನ ಮಂಜರನ್ ಫಸ್ಟ್ ಲುಕ್ ಗೆ ಫಿದಾ ಆದ ಸಿನಿಪ್ರಿಯರು

Published on

303 Views

ತಮ್ಮ ವಿಶಿಷ್ಟ ಕಂಠದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರಾಗಿರುವ
ನಟ ವಸಿಷ್ಠ ಎನ್. ಸಿಂಹ ಅವರು ಮಂಜರನ್ ಎಂಬ ಹೊಸ ಚಿತ್ರದಲ್ಲಿ
ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ‌. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್
ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ
ಮಡಮಕ್ಕಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿನಯ್ ಪ್ರೀತಮ್
ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಭೂಗತ ಲೋಕದ
ಹಿನ್ನೆಲೆಯ ಕಥೆ ಈ ಚಿತ್ರದಲ್ಲಿ ಇರಲಿದೆಯಂತೆ. ‘ಮಫ್ತಿ’ ಖ್ಯಾತಿಯ
ಛಾಯಾಗ್ರಾಹಕ ನವೀನ್ ಕುಮಾರ್ ‘ಮಂಜರನ್’ ಚಿತ್ರಕ್ಕೆ ಛಾಯಗ್ರಾಹಕ
ರಾಗಿದ್ದಾರೆ‌ ರವಿ ಬಸ್ರೂರು ಸಹೋದರ ಸಚಿನ್ ಬಸ್ರೂರು ಅವರು ಈ ಚಿತ್ರಕ್ಕೆ
ಸಂಗೀತ ಸಂಯೋಜನೆ ಮಾಡಲಿದ್ದಾರೆ‌. ಈ ಚಿತ್ರದ ಚಿತ್ರೀಕರಣ ಉಡುಪಿ,
ಕಾರವಾರ, ದುಬೈ ಕಡೆಗಳಲ್ಲಿ ನಡೆಸಲಿದೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com