ಉದಯ ಟಿವಿಯ ಹೊಸ ಧಾರಾವಾಹಿ “ಯಾರಿವಳು” ಆಗಸ್ಟ್ ೩೧ರಿಂದ ಸೊಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ

Published on

688 Views
Advertisement

ಉದಯ ವಾಹಿನಿಯ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ. ನಂದಿನಿ, ಮನಸಾರೆ, ಕಾವ್ಯಾಂಜಲಿ, ಆಕೃತಿ, ಕಸ್ತೂರಿ ನಿವಾಸದಂತಹ ಕೂತೂಹಲಕಾರಿ ಕಥೆಗಳನ್ನು ನೀಡಿದ ವಾಹಿನಿಯ ಹೆಗ್ಗಳಿಕೆ ಹೆಚ್ಚಿಸಲು‘ಯಾರಿವಳು’ ಹೆಸರಿನ ಹೊಸ ಧಾರಾವಾಹಿಯು ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ. ಯಾರಿವಳು ಆಗಷ್ಟ್‌ ೩೧ ರಿಂದ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ ೮ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
“ಬದಲಾಗ್ತಿದೆ ಸಮಯ ಬದಲಾಗ್ತಿದೆ ಉದಯ” ಟ್ಯಾಗ್ ಲೈನ್ ಗೆ ಅನುಗುಣವಾಗಿ ʼಯಾರಿವಳುʼ ಕಥೆಯು ಹಿಂದೆAದಿಗಿAತ ಹೊಸರೂಪದಲ್ಲಿ ಅದ್ದೂರಿಯಾಗಿ ಕಿರುತರೆಗೆ ಪಾದಾರ್ಪಣೆ ಆಗಲಿದೆ. ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಕಥೆ, ಚಿತ್ರಕಥೆ, ಮೇಕಿಂಗ್ ಹಾಗೂ ತಾರಾಬಳಗವನ್ನು ಕಥೆ ಒಳಗೊಂಡಿದೆ.

Advertisement

ಶ್ರೀಮಂತ ಮನೆತನಕ್ಕೆ ಸೇರಿದ ಶ್ರೇಷ್ಟ ಸ್ವಂತ ಅಪ್ಪ ಅಮ್ಮನ ಪ್ರೀತಿ ವಂಚಿತ ಮಗು. ಅಪ್ಪ ಪ್ರೀತಿ ತೋರದಿರಲು ಸ್ವಂತ ಮಗಳ ಹೆಸರಲ್ಲಿರುವ ಆಸ್ತಿ. ಇನ್ನು ಸ್ವಂತ ಅಮ್ಮನನ್ನು ಕಾಣೆಯಾಗಿಸಿ ಹೊಸ ಅಮ್ಮನನ್ನು ಇವಳೇ ನಿಮ್ಮಮ್ಮ ಎಂದು ನಂಬಿಸುತ್ತಿರುವ ಅಪ್ಪ. ಈ ಇಬ್ಬರ ಹಿಂಸೆಗೆ ಮೂಲೆ ಗುಂಪಾದವರಲ್ಲಿ ಶ್ರೇಷ್ಟಳ ಅಜ್ಜ ದೇವರಾಯ ಕೂಡ. ಶ್ರೇಷ್ಟಳ ಕಷ್ಟಕ್ಕೆ ಬೆನ್ನೆಲುಬಾಗಿ ಮಂಗಳಮುಖಿಯೊಬ್ಬಳು ಈ ಕಥೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವುದು ವಿಶೇಷ. ಈ ವಿಶೇಷ ಪಾತ್ರದ ಜೊತೆಗೆ ಪೋಷಕ ಪಾತ್ರಗಳಿಗೆ ತಂಡವು ಮಂಗಳಮುಖಿ ಸಮುದಾಯದ ಸದಸ್ಯರನ್ನೇ ಆಯ್ಕೆ ಮಾಡಿಕೊಂಡಿರುವುದು ಈ ಧಾರಾವಾಹಿಯ ಹೆಗ್ಗಳಿಕೆಯಾಗಿದೆ.

Advertisement

ಇದೆಲ್ಲ ಒಂದೆಡೆಯಾದ್ರೆ ಮತ್ತೊಂದೆಡೆ ನಮ್ಮ ಕಥಾನಾಯಕಿ ಮಾಯಾ, ಆಂಜನೇಯನ ಪರಮ ಭಕ್ತೆ. ಏಲ್ಲ ಕೆಲಸದಲ್ಲೂ ಭಜರಂಗಿಯನ್ನು ನೆನಯುವ ಇವಳು ಭಂಡ ಧೈರ್ಯದಿಂದ ಮುನ್ನುಗ್ಗುವ ಸ್ವಭಾವದವಳು. ಇವಳು ಮತ್ತು ಮಗು ಶ್ರೇಷ್ಟಳ ಸ್ವಂತ ಅಮ್ಮ ಅಹಲ್ಯ ನೋಡಲು ಒಂದೇ ತರ ಇದ್ದು, ಇವರಿಬ್ಬರಿಗಿರುವ ಅವಿನಾಭಾವ ಸಂಬAಧವನ್ನು ಕಥೆಯಲ್ಲಿ ಹೆಣೆಯಲಾಗಿದೆ. ಅಹಲ್ಯ ತರ ಇರುವ ಮಾಯಾ ಯಾರು? ಮಾಯಾ ಹಿಂದಿನ ಕಥೆಯೇನು? ಯಾರಿವಳು ಎಂಬ ಶೀರ್ಷಿಕೆಗೆ ಉತ್ತರ ಈ ಕಥೆಯಲ್ಲಡಗಿದೆ.

Advertisement

ಬಾಹುಬಲಿ ಸರಣಿ ಚಿತ್ರಗಳನ್ನು ಹಾಗೂ ಬಾಲಿವುಡ್ ಕ್ಷೇತ್ರದಲ್ಲಿ ಜನಪ್ರಿಯ ಹೈ ಬಜೆಟ್ ಧಾರಾವಾಹಿಗಳನ್ನು ಕೊಟ್ಟ ನಿರ್ಮಾಣ ಸಂಸ್ಥೆ ಅರ್ಕಾ ಮೀಡಿಯಾ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು ದರ್ಶಿತ್ ಭಟ್ ನಿರ್ದೇಶಿಸುತ್ತಿದ್ದಾರೆ. ಮಂಡ್ಯ ಮಂಜು ಅವರ ಛಾಯಾಗ್ರಹಣವಿದೆ. ಕಥಾನಾಯಕಿಯಾಗಿ ಬ್ಯೂಟಿಫುಲ್ ಮನಸುಗಳು, ಕಮರೊಟ್ಟು ಚೆಕ್‌ಪೋಸ್ಟ್, ವೆನಿಲ್ಲಾ, ಕಟ್ಟುಕಥೆ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ ಸ್ವಾತಿ ಕೊಂಡೆ ಮಾಯಾ ಪಾತ್ರವನ್ನು, ಕಥಾ ನಾಯಕ ನಿಖಿಲ್ ಪಾತ್ರವನ್ನು ನಂದಿನಿ ಧಾರಾವಾಹಿ ಖ್ಯಾತಿಯ ಆರವ್ ಸೂರ್ಯ ನಿರ್ವಹಿಸುತ್ತಿದ್ದು ಶ್ರೇಷ್ಟ ಪಾತ್ರವನ್ನು ಜಂಟಲ್‌ ಮ್ಯಾನ್‌ ಸಿನೇಮಾ ಖ್ಯಾತಿಯ ಬಾಲ ನಟಿ ಆರಾಧ್ಯ ನಿರ್ವಹಿಸುತ್ತಿದ್ದಾರೆ. ಕಥೆಯ ಖಳ ಪಾತ್ರಗಳನ್ನು ಅಂಬರೀಶ್ ಸಾರಂಗಿ ಹಾಗೂ ಶರ್ಮಿತಾ ನಿರ್ವಹಿಸುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ಹಿರಿಯಕಲಾವಿದ ಅಶೋಕ ಹೆಗಡೆ, ಬಾಲರಾಜ್, ವಾಣಿಶ್ರೀ, ದೀಪಾ ಪಾರ್ವತಿ, ನಾಗರಾಜ್ ಭಟ್, ಮಂಗಳಮುಖಿ ಪಾತ್ರಧಾರಿಗಳಾಗಿ ಸನಾ ಸುಮನ್ ಹಾಗೂ ಲೋಹಿತ್ ಪಟೇಲ್ ಇದ್ದಾರೆ.
ಇದೇ ಆಗಸ್ಟ್ ೩೧ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೮ಕ್ಕೆ ಉದಯ ಟಿವಿಯಲ್ಲಿ “ಯಾರಿವಳು” ಪ್ರಾರಂಭವಾಗಲಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com