ನಿರ್ಮಾಪಕ ಜಯಣ್ಣರ ಚೊಚ್ಚಲ ಧಾರಾವಾಹಿ “ನಯನತಾರಾ” ಫೆಬ್ರವರಿ 8ರಿಂದ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ

Published on

534 Views
Advertisement

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ, ಸೇವಂತಿ, ಸುಂದರಿ ಹೀಗೆ ವಿಭಿನ್ನ ಕಥೆಗಳು ನೋಡುಗರ ಮೆಚ್ಚುಗೆ ಪಡೆದಿವೆ. ಈ ವರ್ಣರಂಜಿತ ಗುಚ್ಛಕ್ಕೆ ವಿನೂತನ ಸೇರ್ಪಡೆ ಹೊಸ ಧಾರಾವಾಹಿ ʻನಯನತಾರಾʼ.

ತನ್ನ ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಮುಗ್ದತೆಯ ಮೂಲಕ ಮನಗೆಲ್ಲುವ ಸರಳ ಹುಡುಗಿ ನಯನಾ ಮತ್ತು ಅತಿಯಾಸೆ, ಭ್ರಮೆ, ಸುಳ್ಳು, ವಿಶ್ವಾಸದ್ರೋಹದ ಮೂಲಕ ಬದುಕಲ್ಲಿ ಸೋಲುವ ತಾರಾ ಈ ಇಬ್ಬರು ಅಕ್ಕತಂಗಿಯರ ಕಥೆ ʻನಯನತಾರಾʼ. ಮನೆಗೆಲಸ ಮಾಡಿಕೊಂಡು ತಂಗಿ ತಾರಾಳನ್ನು ಓದಿಸುವ, ಅವಳ ಮದುವೆ ಮಾಡಿ ದಡ ಸೇರಿಸಲು ಪ್ರಯತ್ನಿಸುವ ನಯನಾ, ಎಂದೂ ತನ್ನ ಜೀವನದ ಬಗ್ಗೆ ಯೋಚಿಸುವವಳಲ್ಲ. ಆದರೆ ಸತ್ಯ, ಪ್ರಾಮಾಣಿಕತೆ ಇದ್ದಲ್ಲಿ ದೇವರೇ ದಾರಿ ತೋರುತ್ತಾನೆ ಎಂಬ ಮಾತಿನಂತೆ ಅವಳ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತ ಹೋಗುತ್ತದೆ. ಆದರೆ ಈ ಸತ್ಯ, ಪ್ರಾಮಾಣಿಕತೆಯ ದಾರಿ ಸುಲಭವಲ್ಲ. ಕಲ್ಲು, ಮುಳ್ಳುಗಳು, ಅಡೆತಡೆಗಳನ್ನು ದಾಟಿ ಮುನ್ನಡೆಯಬೇಕಾಗುತ್ತದೆ. ಇದೇ ʻನಯನತಾರಾʼ ಪರಿಕಲ್ಪನೆಯ ಹಿಂದಿನ ತತ್ವ.

Advertisement

ಖ್ಯಾತ ಚಲನಚಿತ್ರ ನಿರ್ಮಾಪಕರಾದ ಜಯಣ್ಣ ಅವರು ತಮ್ಮ ಜಯಣ್ಣ ಕಂಬೈನ್ಸ್‌ಮೂಲಕ ʻನಯನತಾರಾʼ ಧಾರಾವಾಹಿ ನಿರ್ಮಿಸುತ್ತಿದ್ದು, ಈ ಮೂಲಕ ಮೊಟ್ಟ ಮೊದಲ ಸಲ ಕಿರುತೆರೆ ನಿರ್ಮಾಣಕ್ಕೆ ಕಾಲಿಡುತ್ತಿದ್ದಾರೆ. ʻಚಿತ್ರ ನಿರ್ಮಾಣ ಒಂದು ಸಲಕ್ಕೆ ಮುಗಿದು ಹೋಗುವ ಪ್ರಕ್ರಿಯೆ. ಧಾರಾವಾಹಿ ನಿರ್ಮಾಣವೆಂದರೆ ದಿನವೂ ಮದುವೆ ಮಾಡಿದಂತೆ. ಇದು ಒಂದು ರೀತಿಯ ಸವಾಲಿನ ಕೆಲಸ. ಕನ್ನಡ ಕಿರುತೆರೆಗೆ ಉದಯ ಟಿವಿ ಮೂಲಕ ಕಾಲಿಡುತ್ತಿರುವುದು ಹೆಮ್ಮೆಯ ವಿಷಯ. ಉದಯ ಟಿವಿ ಯಾವತ್ತೂ ಚಿತ್ರ ನಿರ್ಮಾಪಕರನ್ನು ಬೆಂಬಲಿಸುತ್ತ ಬಂದಿದೆ. ನಿರೀಕ್ಷೆಗೆ ತಕ್ಕಹಾಗೆ ಈ ಧಾರಾವಾಹಿಯನ್ನು ಸಿನಿಮಾ ಗುಣಮಟ್ಟದಲ್ಲೇ ಕೊಡಬೇಕು ಅನ್ನೋದು ನಮ್ಮ ಗುರಿʼ ಎನ್ನುತ್ತಾರೆ ನಿರ್ಮಾಪಕ ಜಯಣ್ಣ.

Advertisement

ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ತಿಲಕ್ ʻನಯನತಾರಾʼ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ಚೈತ್ರಾ, ಅಶ್ವಿನಿ, ಧನುಷ್, ಸಂಧ್ಯಾ ವೆಂಕಟೇಶ್, ಮಹಾದೇವ, ಸೂರಜ್ ಮುಂತಾದವರಿದ್ದಾರೆ. ಛಾಯಾಗ್ರಹಣ ರಮೇಶ್ ಎಚ್.ಎಸ್, ಸಂಕಲನ ಕೌಶಿಕ್ ಗೌಡ ಬೇಲೂರು.
ʻನಯನತಾರಾʼ ಇದೇ ಫೆಬ್ರವರಿ 8 ರಿಂದ ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 9:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com