ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕ್ಷಮಾ”

Published on

406 Views
Advertisement

ಉದಯ ಟಿವಿ ಹೊಸ ಹೊಸ ಕಥೆಗಳ ಮುಖಾಂತರ ವೀಕ್ಷಕರ ಮನಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಈಗ ಮಹಿಳಾ ಪ್ರಧಾನ ಕಥೆಯೊಂದನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾಳೆ. ಮನೆಯನ್ನು ಸೌಹಾರ್ದಯುತವಾಗಿ ನಡೆಸುವುದರಿಂದ ಹಿಡಿದು ಕಾರ್ಯಕ್ಷೇತ್ರದಲ್ಲೂ ಅಗ್ರಸ್ಥಾನವನ್ನು ಸಾಧಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆ. ಹಾಗಾಗೀನೇ ಹೆಣ್ಣನ್ನು ಕ್ಷಮೆಗೆ ಮತ್ತೊಂದು ಹೆಸರು ಎನ್ನುತ್ತಾರೆ. ಭೂಮಿಗೆ ಮತ್ತೊಂದು ರೂಪ ಎನ್ನುತ್ತಾರೆ. ಇಂತಹ ಭೂಮಿತೂಕದ ಹೆಣ್ಣಿನ ಕಥೆ “ಕ್ಷಮಾ” ಉದಯ ಟಿವಿಯಲ್ಲಿ ಮಾರ್ಚ್ 4ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಶುರುವಾಗಲಿದೆ.

Advertisement

ಮಧ್ಯಮ ವಯಸ್ಸಿನ ಹೆಣ್ಣೊಬ್ಬಳ ಹೋರಾಟ, ಪ್ರಾಮಾಣಿಕವಾಗಿ ಸಂಸಾರ ನಡೆಸುವ ಕಷ್ಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಭವಿಸುವ ಪರಿಪಾಟಲುಗಳು ಕಥೆಯ ಜೀವಾಳ. ಕ್ಷಮಾ ಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟು ಹೋದಾಗ ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತ ವೀರಮಹಿಳೆ. ತನ್ನ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡುವಲ್ಲಿ ಸಫಲಳಾಗುತ್ತಾಳಾ? ಸಮಾಜ ಒಂಟಿ ಮಹಿಳೆಗೆ ಸೂರು ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಡÀತ್ತಾ? ಇಂತಹ ಸೂಕ್ಷ್ಮ ಎಳೆಯೊಂದಿಗೆ ಸಾಗುವ ಕಥೆ ಕ್ಷಮಾ.

Advertisement

ಧಾರಾವಾಹಿರಂಗದಲ್ಲಿ ಹತ್ತಾರು ಸೂಪರ್‍ಹಿಟ್ ಧಾರಾವಾಹಿ ಕೊಟ್ಟಿರುವ ಭಾರತೀಶ್ ನಿರ್ದೇಶನ ಮತ್ತು ಮೀಡಿಯಾ ಹೌಸ್ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಮುಖ್ಯಭೂಮಿಕೆಯಲ್ಲಿ ಕ್ಷಮಾ ಪಾತ್ರಧಾರಿಯಾಗಿ ಶ್ವೇತಾ ರಾವ್ ಮಾಡುತ್ತಿದ್ದು ಇತರ ತಾರಾಗಣದಲ್ಲಿ ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರು ಇದ್ದಾರೆ.
“ಕ್ಷಮಾ” ಮಾರ್ಚ್ 4 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com