ಸೆನ್ಸಾರ್ ಮೆಚ್ಚಿದ ನಾನು ಮತ್ತು ಗುಂಡ ಜಾಕ್ ಮಂಜು ತೆಕ್ಕೆಗೆ..!!

Published on

367 Views
Advertisement

ಯುಟರ್ನ್, ಒಂದು ಮೊಟ್ಟೆಯ ಕಥೆ ವಿತರಕರಿಂದ ನಾನು ಮತ್ತು ಗುಂಡ ರಿಲೀಸ್..!!!
ನಾನು ಮತ್ತು ಗುಂಡ… ಸ್ಯಾಂಡಲ್ವುಡ್ ಅಂಗಳದಲ್ಲಿ ತುಂಬಾ ವರ್ಷಗಳ ನಂತ್ರ ತಯಾರಾಗಿರೋ ಸಾಕುಪ್ರಾಣಿ ಸಂಬಂಧವನ್ನ ಸಾರುವ ಸಂಪೂರ್ಣ ಸಿನಿಮಾ. ಫಸ್ಟ್ ಲುಕ್ ನಿಂದ, ಟೀಸರ್ ಗಳಿಂದ ವಿಶೇಷವಾಗಿ ಸದ್ದು ಸುದ್ದಿ ಮಾಡಿದ ಸಿನಿಮಾ. ಕಾಮಿಡಿ ಕಿಲಾಡಿಗಳು ಖ್ಯಾತಿ, ಸದ್ಯ ಚಿತ್ರರಂಗದಲ್ಲಿ ಸದ್ಯ ಬ್ಯುಸಿಯೆಸ್ಟ್ ಕಾಮಿಡಿ ನಟನಾಗಿ ಮಿಂಚ್ತಿರೋ ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು ಹಾಗೂ ಸಿಂಬಾ ಅನ್ನೋ ಶ್ವಾನ ಅಭಿನಯಿಸಿರೋ ಸಿನಿಮಾ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ಕಥಾವಸ್ತುವನ್ನೇ ಹೀರೋವನ್ನಾಸಿಕೊಂಡು ಶ್ವಾನವನ್ನೇ ಕಥಾ ಮುಖ್ಯ ಪಾತ್ರಧಾರಿಯನ್ನಾಗಿಕೊಂಡು ಮಾಡಿರೋ ಈ ಚಿತ್ರದ ಮೇಲೆ ಕನ್ನಡ ಚಿತ್ರರಂಗದಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಕೊಂಡಿದ್ದು, ಚಿತ್ರ ಮೇಲೆ ಭರವಸೆ ಹೆಚ್ಚಿಸಿದೆ.


ನಾನು ಮತ್ತು ಗುಂಡ ಚಿತ್ರ ಸದ್ಯ ರಿಲೀಸ್ ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯನ್ನೂ ಮುಗಿಸಿದ, ನಾನು ಮತ್ತು ಗುಂಡ ಚಿತ್ರವನ್ನ ನೋಡಿ, ಮೆಚ್ಚಿಕೊಂಡಿರೋ ಸೆನ್ಸಾರ್ ಮಂಡಳಿ ಚಿತ್ರಕ್ಕೆ U/A ಸರ್ಟಿಫಿಕೇಟ್ ಕೊಟ್ಟು ಇದು ಎಲ್ಲಾ ವರ್ಗದವರು ನೋಡುವಂತಹ ಸಿನಿಮಾ. ಭಾವನಾತ್ಮಕ ಸಂಬಂಧವಿರೋ ಅದ್ಭುತ ಚಿತ್ರವೆಂದು ಬಣ್ಣಿಸಿದೆ. ಅಂದ್ಹಾಗೆ ಸದಭಿರುಚಿಯ ಚಿತ್ರಗಳನ್ನ, ಅದ್ರಲ್ಲೂ ಅಪರೂಪದ ಪ್ರಯೋಗಗಳನ್ನ ಸದಾ ಬೆಂಬಲಿಸೋ, ಮತ್ತು ಅಂತಹ ಸಿನಿಮಾಗಳನ್ನ ವಿತರಿಸಿ ಸೈ ಎನ್ನಿಸಿಕೊಂಡಿರುವಂತ ಮೈಸೂರು ಟಾಕೀಸ್ನ ಜಾಕ್ ಮಂಜು ನಾನು ಮತ್ತು ಗುಂಡ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದು, ಚಿತ್ರವನ್ನ ವಿತರಣೆ ಮಾಡೋದಕ್ಕೆ ಮುಂದಾಗಿದ್ದಾರೆ.

Advertisement

Advertisement

ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ, ಹಲವು ವಿಶೇಷ್ಠ ಬಗೆ ಸಿನಿಮಾಗಳನ್ನ ವಿತರಿಸಿ ಸಕ್ಸಸ್ ಕೊಟ್ಟಿರೋ ಜಾಕ್ ಮಂಜು, 2020ರ ಆರಂಭದಲ್ಲೇ ನಾನು ಮತ್ತು ಗುಂಡ ಸಿನಿಮಾವನ್ನ ತೆಗೆದುಕೊಂಡಿದ್ದು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಸದ್ಯದಲ್ಲೇ ಚಿತ್ರದ ಇನ್ನಷ್ಟು ವಿಶೇಷ ವಿಚಾರಗಳನ್ನ ಹಂಚಿಕೊಳ್ಳೋ ಧಾವಂತದಲ್ಲಿದ್ದು, ಟ್ರೈಲರ್ ರಿಲೀಸ್ ಡೇಟ್ ನ ಅನೌನ್ಸ್ ಮಾಡೋ ಸನ್ನಾಹದಲ್ಲಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com