ಬಾಲಿವುಡ್ ನಿಂದ ಬೇಡಿಗೆ ಗಿಟ್ಟಿಸಿಕೊಂಡ ಕನ್ನಡದ ‘ತ್ರಿಬಾಹು’
ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಕಮ್ಮಿ ಎನ್ನುವ ಕಾಲ ಹೋಯ್ತು ಎನಿಸುತ್ತೆ. ಯಾಕಂದ್ರೆ, ಈಗಿನ ಸಿನಿಮಾಗಳು ಆರಂಭದಲ್ಲೇ ಪರಭಾಷಿಗರ ಮೇಲೆ ಪ್ರಭಾವ ಬೀರುತ್ತಿದೆ. ಅದರಲ್ಲೂ ಹೊಸಬರ ಚಿತ್ರಗಳು ಬೇರೆ ಭಾಷಿಗರಿಂದ ಶಬ್ಬಾಶ್ ಎನಿಸಿಕೊಳ್ಳುವುದು ವಿಶೇಷವೇ ಸರಿ.ವಿಶ್ವ ಫಿಲಮ್ಸ್ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿರುವ ತ್ರಿಬಾಹು ಎಂಬ ಕುಸ್ತಿ ಪಂದ್ಯದ ಕಥೆಯಿರುವ ಚಿತ್ರವನ್ನು ವಿಶ್ವ ನಿರ್ದೇಶನ ಮಾಡಿದ್ದು, ಇದೀಗ ಬಾಲಿವುಡ್ ನಿಂದ ಬಾರೀ ಮೊತ್ತಕ್ಕೆ ಡಬ್ಬಿಂಗ್ ಆಫರ್ ಸಿಕ್ಕಿದೆಯಂತೆ. ಈ ಮೂಲಕ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ವಿಶ್ವ ‘ತ್ರಿಬಾಹು’ವಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.

Advertisement
Advertisement