flixOye
Buzz

ಗಡ್ಡಪ್ಪ ಅಭಿಯದ ಜರ್ಕ್ ಚಿತ್ರದ ಟ್ರೈಲರ್ ಬಿಡುಗಡೆ

ಮಯೂರ ಪ್ರೋಡಕ್ಷನ್ಸ್ ಅಂಡ್ ಟೀಮ್ ಬ್ಯಾನರ್ ಅಡಿಯಲ್ಲಿ
ಮಹಾಂತೇಶ್ ಮದಕರಿ ಎಂಬುವವರು ನಿರ್ದೇಶನ ಮಾಡಿರುವ
ಜರ್ಕ್ ಚಿತ್ರದ ಟ್ರೈಲರ್ ನೆನ್ನೆ ಬಿಡುಗಡೆಯಾಗಿದೆ. ತಿಥಿ ಚಿತ್ರದ ಮೂಲಕ
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ ಹಳ್ಳಿ ಸೊಗಡಿನ
ಕಲಾವಿದರಾದ ಗಡ್ಡಪ್ಪ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಮೂಲಕ ಕೃಷ್ಣ ರಾಜ್ ಎಂಬ ಯುವಪ್ರತಿಭೆ ನಾಯಕನಾಗಿ
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಮಹಾಂತೇಶ್ ಮದಕರಿ ಅವರೇ
ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇವರೊಂದಿಗೆ
ಥ್ರಿಲ್ಲರ್ ಮಂಜು, ಸಾಧು ಕೋಕಿಲ, ಬುಲೆಟ್ ಪ್ರಕಾಶ, ಮಜಾಟಾಕೀಸ್
ಪವನ್ ಸೇರಿದಂತೆ ಬಹುದೊಡ್ಡ ತಾರಗಣ ಚಿತ್ರದಲ್ಲಿದ್ದಾರೆ‌.

ಸಂಬಂಧಿತ · Related