flixOye
Buzz

ಇಂದು ಮೂರು ಚಿತ್ರ ಬಿಡುಗಡೆ

`ಅಮ್ಮ ಐ ಲವ್ ಯು’ ಕಟ್ಟುಕಥೆ, ಮೇಘ ಅಲಿಯಾಸ್ ಮ್ಯಾಗಿ.

ಅಮ್ಮ ಐ ಲವ್ ಯು’

ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಬಂಗಲೆ ಅವರು ನಿರ್ಮಿಸಿರುವ `ಅಮ್ಮ ಐ ಲವ್ ಯು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಾರ್ಕೆಸ್ ಕ್ಸೇವಿಯರ್ ಈ ಚಿತ್ರದ ಸಹ ನಿರ್ಮಾಪಕರು.
ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರಕ್ಕೆ ಸಸಿ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಡಾ||ವಿ.ನಾಗೇಂದ್ರಪ್ರಸಾದ್, ಕವಿರಾಜ್, ಗೌಸ್‍ಫಿûೀರ್ ಗೀತರಚನೆ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ವಿಶ್ವ ಸಂಕಲನ, ರವಿವರ್ಮ, ಗಣೇಶ್, ವಿಕ್ರಂ ಸಾಹಸ ನಿರ್ದೇಶನ ಹಾಗೂ ರಾಜು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ನಿಶ್ವಿಕ, ಪ್ರಕಾಶ್ ಬೆಳವಾಡಿ, ಸಿತಾರ, ಚಿಕ್ಕಣ್ಣ, ರವಿಕಾಳೆ ಬಿರಾದಾರ್, ತರಂಗ ವಿಶ್ವ, ಗಿರಿ ದ್ವಾರಕೀಶ್, ಅವಿನಾಶ್ ಮುಂತಾದವರಿದ್ದಾರೆ. ಭೀಮೇಶ್ ಬಾಬು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಈ ವಾರ ತೆರೆಗೆ `ಕಟ್ಟುಕಥೆ’

ಅನಘ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಸ್ವೀಟ್ಸ್ ಮಹದೇವ ಮೈಸೂರು ಅವರು ನಿರ್ಮಿಸಿರುವ `ಕಟ್ಟುಕಥೆ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎನ್.ಸವಿತ ಈ ಚಿತ್ರದ ಸಹ ನಿರ್ಮಾಪಕರು.
ರಾಜ್ ಪ್ರವೀಣ್ ನಿರ್ದೇಶನದ ಈ ಚಿತ್ರಕ್ಕೆ ವಿಕ್ರಂ ಸುಬ್ರಮಣ್ಯ ಸಂಗೀತ ನೀಡಿದ್ದಾರೆ. ಮನು ಬಿ.ಕೆ ಛಾಯಾಗ್ರಹಣ ಹಾಗೂ ಗುರುಮೂರ್ತಿ ಹೆಗ್ಗಡೆ ಅವರ ಸಂಕಲನವಿರುವ ಈ ಚಿತ್ರಕ್ಕೆ `ಟಗರು` ಚಿತ್ರದ ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಮಹೇಶ್ ಜೆ ನೆರ್‍ಕರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದ ಹಾಡುಗಳನ್ನು ರಾಜು ನಾಗನಗೌಡ ರಚಿಸಿದ್ದಾರೆ.

ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ, ಮಿತ್ರ, ಕೆಂಪೇಗೌಡ, ಬೃನಾಲಿ ಶೆಟ್ಟಿ, ರಿಹಾಂಸಿ ಗೌಡ, ಸೂರ್ಯ ಕುಂದಾಪುರ, ಮೋಹನ್ ಜುನೇಜ, ನಟನ ಪ್ರಶಾಂತ್, ರಜನಿಕಾಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

‘ಮೇಘಾ ಅಲಿಯಾಸ್ ಮ್ಯಾಗಿ’’ ಈ ವಾರ ಬಿಡುಗಡೆ

ವಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ವಿನಯ್ ಕುಮಾರ್ ನಿರ್ಮಿಸಿರುವ ‘’ಮೇಘಾ ಅಲಿಯಾಸ್ ಮ್ಯಾಗಿ’’ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶಾಲ್ ಪುಟ್ಟಣ್ಣ ಕಥೆ, ಚಿತ್ರಕಥೆ ರಚಿಸಿ, ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಜಿನೀಸ್ ಪೈಕಟ್ಟು ಹಾಗೂ ಜಯಪ್ರಕಾಶ್ ಛಾಯಾಗ್ರಹಣ, ಅತಿಶಯ ಜೈನ್ ಸಂಗೀತ, ಪರಮೇಶ್ ಸಂಭಾಷಣೆ, ವಿನಯ್ ಕುಮಾರ್ ಕೂರ್ಗು ಸಂಕಲನ, ವಿನು ಮನಸು ಹಿನ್ನೆಲೆ ಸಂಗೀತ, ರಘು ಎಸ್, ಸೈ ಅರುಣ್ ಕುಮಾರ್ ನೃತ್ಯ ನಿರ್ದೇಶನವಿದೆ. ಸುಕೃತ ವಾಗ್ಲೆ, ತೇಜ್ ಗೌಡ, ನೀತು ಬಾಲ, ಕಿರಣ್ ಕುಮಾರ್, ಮಂಜು ಪಾವಗಡ, ಅಶ್ವಿನ್ ಕುಮಾರ್, ಮಹೇಶ್ ಗೌಡ, ನಟರಾಜ್, ತನುಷ್ ತಾರಾಬಳಗದಲ್ಲಿದ್ದಾರೆ.

ಸಂಬಂಧಿತ · Related