flixOye
Buzz

ದಿ ವಿಲನ್ ‘ ಟೀಸರ್ ರಿಲೀಸ್

ದಿ ವಿಲನ್ ‘ ಟೀಸರ್ ರಿಲೀಸ್
ಬಹುನಿರೀಕ್ಷಿತ ‘ ದಿ‌ ವಿಲನ್’ ಚಿತ್ರದ ಟೀಸರ್ ನ್ನು ನಗರದ ಜಿ.ಟಿ ಮಾಲ್ ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರು ಬಿಡುಗಡೆ ಮಾಡಿದ್ದಾರೆ. ‘ ದಿ ವಿಲನ್’ ಚಿತ್ರದ 2 ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ಶಿವರಾಜ್ ಕುಮಾರ್ ಪಾತ್ರ ಪರಿಚಯದ ಒಂದು‌ ಟೀಸರ್ ಹಾಗೂ‌ ಸುದೀಪ್ ಪಾತ್ರ ಪರಿಚಯದ ಇನ್ನೊಂದು‌ ಇನ್ನೊಂದು ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ವೀಕ್ಷಣೆ ಗೆ ಒಂದು ಟಿಕೇಟ್ಗೆ 500ರೂ. ಪಡೆದಿರುವ ಪ್ರೇಮ್, ಟಿಕೇಟ್ನಿಂದ ಬಂದ ಹಣವನ್ನು ಆರ್ಥಿಕ ಸಂಕಷ್ಟದ ಲ್ಲಿ ಬಳಲುತ್ತಿರುವ ಕನ್ನಡದ ನಿರ್ದೇಶಕರಿಗೆ ವಿತರಿಸಿದ್ದಾರೆ. ಸಖತ್ ಕುತೂಹಲ ‌ಸೃಷ್ಟಿಸಿದ ‘ ದಿ ವಿಲನ್ ‘ ‘ ಆನೆ ಬಂತೊಂದಾನೆ’ ಅನ್ನುವ ಧ್ವನಿಯಲ್ಲಿ‌ ಕಿಚ್ಚ ಡೈಲಾಗ್ ಹೊಡೆದ್ರೆ, ಇನ್ನು ಶಿವರಾಜ್ ಕುಮಾರ್ ‘ ನಾನ್ ಸೈಲೆಂಟಾಗಿದ್ರೆ ರಾಮಾ, ವೈಲೆಂಟಾದ್ರೆ ರಾವಣ’ ಎಂಬುದಾಗಿ ಡೈಲಾಗ್ ಹೊಡೆದಿದ್ದಾರೆ. ‘ ದಿ ವಿಲನ್’ ಚಿತ್ರಕ್ಕೆ ಜೋಗಿ‌ ಪ್ರೇಮ್‌ ನಿರ್ದೇಶನವಿದ್ದು, ಕಿಚ್ಚ ಸುದೀಪ್ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ಮಿಥುನ್‌ ಚಕ್ರವರ್ತಿ, ಏಮಿಜಾಕ್ಸನ್ ಸೇರಿದಂತೆ ಅತೀ ದೊಡ್ಡ ತಾರಾ ಬಳಗವನ್ನು ಹೊಂದಿದೆ. ‘ ದಿ ವಿಲನ್’ ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಟೈಮೆಕ್ಸ್ ವಾಚ್ ಕಂಪೆನಿ‌ ಪ್ರಾಯೋಜತ್ವ ನೀಡಿದ್ದು , ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ , ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ರವರಿಗೆ ಟೈಮೆಕ್ಸ್ ಕಂಪೆನಿ‌ ಮಾಲಿಕರು ವಾಚ್ ಕಟ್ಟಿದರು. ಶೂಟಿಂಗ್ ನಿಮಿತ್ತ ಬೇರೆ ದೇಶಕ್ಕೆ ತೆರಳಿರುವ ಸುದೀಪ್ ಟ್ವಿಟ್ಟರ್ ಲೈವ್ ಮೂಲಕ ತಂಡಕ್ಕೆ ಶುಭ ಕೋರಿದ್ದಾರೆ.

Hatrick Hero Shivanna Teaser

Kichha Sudeep Teaser

ಸಂಬಂಧಿತ · Related