ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್
ನಾಯಕನಾಗಿ ನಟಿಸಿರುವ “ಕಾಗೆಮೊಟ್ಟೆ” ಎಂಬ ಭಿನ್ನ ಶೀರ್ಷಿಕೆಯ
ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ.

ಚಿತ್ರದ ಹಾಡುಗಳು ಮತ್ತು ಟ್ರೈಲರ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿವೆ. ಬಿ.ಕೆ.ಚಂದ್ರಹಾಸ್ ಅವರು ನಿರ್ಮಿಸಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ನಾಯಕನಾಗಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿಳ್ಳ ಗೋವಿ ಕೃಷ್ಣನ್ ಕಥೆ ಎಂಬ ಅಡಿಬರಹವಿದ್ದು ಚಿತ್ರದ ಮೇಲೆ ಕುತೂಹಲ ಸೃಷ್ಟಿಸುವಂತಿದೆ. ಉಳಿದಂತೆ ಪಿ.ಎಲ್. ರವಿ ಅವರ ಛಾಯಾಗ್ರಹಣ, ಶ್ರೀವತ್ಸ ಅವರ ಸಂಗೀತ ಸಂಯೋಜನೆ, ವಿ.ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ,ಕೆ.ಎಂ.ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ಮತ್ತೊಂದು ವಿಶೇಷವೇನೆಂದರೆ ನವರಸ ನಾಯಕ ಜಗ್ಗೇಶ್ ಅವರು ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದಾರೆ. ಇವರ ಜೊತೆಗೆ ಉಳಿದ ಗೀತೆಗಳನ್ನು ಜಯಂತ್ ಕಾಯ್ಕಿಣಿ, ಕವಿರಾಜ್ ಅವರು ಬರೆದಿದ್ದಾರೆ.
ಚಿತ್ರವು ಹೊಸ ವರ್ಷದಲ್ಲಿ ತೆರೆಗೆ ಬರಲಿದೆ. ಸ್ಕೈಲೈನ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಂದ್ರಹಾಸ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸುಬ್ಬರಾಯುಡು ಅವರು ಸಹ ನಿರ್ಮಾಪಕರಾಗಿದ್ದಾರೆ.
ಸಂಬಂಧಿತ · Related
Buzz
Paraak Teaser Out: Sriimurali’s Next Drops!
Buzz
Bhoorame Teaser: Emotional Kannada Music Video Drops
Buzz
Shivanna’s Upcoming Films: Bail, M16 JJ Roy, DAD, Survivor & More
Buzz
Shiva Rajkumar’s ‘A For Anand’ Glimpse Released
Buzz
ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ
Buzz
Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!
Buzz
ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!
Buzz
ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!
Buzz
ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!
Buzz
Drishyam 3 Kannada Trailer Drops: Mohanlal & Jeethu Joseph Return!