ಅನಿರುಧ ನಟನೆಯ `ಅಭಯಹಸ್ತ’ ಚಿತ್ರದ ಚಿತ್ರೀಕರಣ ಪೂರ್ಣ

Published on

258 Views
Advertisement

ರಾಜೇಂದ್ರಸೂರಿ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಡಾ||ಪಿ.ಸತೀಶ್‍ಕುಮಾರ್ ಮೆಹ್ತ ಹಾಗೂ ನವೀನ್ ಪಿ.ಬಿ ಅವರು ನಿರ್ಮಿಸುತ್ತಿರುವ `ಅಭಯಹಸ್ತ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ನಟ ಅನಿರುದ್ಧ ವಾಹಿನಿಯೊಂದರ ನಿರೂಪಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಮೀಸೆ ಆಂಜನಪ್ಪ ಅವರು ಆಡಳಿತ ಪಕ್ಷದ ನಾಯಕನ ಪಾತ್ರದಲ್ಲಿ ಹಾಗೂ ನಾಗರಾಜಮೂರ್ತಿ ಅವರು ವಿರೋಧ ಪಕ್ಷದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಿನ ರಾಜಕೀಯದ ಬಗ್ಗೆ ಇವರಿಬ್ಬರ ನಡುವೆ ನಿರೂಪಕ ಚರ್ಚಿಸುವ ಸನ್ನಿವೇಶವನ್ನು ತ್ಯಾಗರಾಜನಗರದಲ್ಲಿ ಚಿತ್ರಿಸಿಕೊಳ್ಳುವುದರ ಮೂಲಕ ನಿರ್ದೇಶಕ ಪಿ.ಬಿ.ನವೀನ್ ಚಿತ್ರೀಕರಣ ಪೂರ್ಣಗೊಳ್ಳಿಸಿದ್ದಾರೆ.

Advertisement

ಅನಿರುದ್ಧ, ಮೀಸೆ ಆಂಜನಪ್ಪ, ನಾಗರಾಜಮೂರ್ತಿ, ಪೂಜಾ, ಖುಷಿ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಿರ್ದೇಶಕ ನವೀನ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಛಾಯಾಗ್ರಹಣ, ಸಂಕಲನದೊಂದಿಗೆ ಕಲಾ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಹಾಗೂ ಪ್ರವೀಣ್ ಸಂಗೀತ ನೀಡಿದ್ದಾರೆ. ಪದ್ಮಶ್ರೀ ಡಾ||ದೊಡ್ದರಂಗೇಗೌಡ, ಶಿವು, ನವೀನ್ ಅವರು ಬರೆದಿರುವ ಈ ಚಿತ್ರದ ಹಾಡುಗಳನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್, ನವೀನ್‍ಕೃಷ್ಣ ಹಾಗೂ ಮನೋಜವಂ ಹಾಡಿದ್ದಾರೆ. ಜಿ.ಕೆ.ಗೋವಿಂದರಾವ್, ಸಾಹಿತಿ ಚಂಪ, ಪದ್ಮಶ್ರೀ ಡಾ||ದೊಡ್ಡರಂಗೇಗೌಡ, ಹುಲಿಕಲ್ ನಟರಾಜ್, ಮಹೇಂದರ್ ಮನೋತ್, ಜೇಡ್ರಳ್ಳಿ ಕೃಷ್ಣಪ್ಪ, ಕಪಾಲಿ ಆನಂದ್ ಹಾಗೂ ವಾಟಾಳ್ ನಾಗರಾಜ್ ಅವರು ಅಭಿನಯಿಸಿರುವ ಈ ಚಿತ್ರದ ನಾಯಕರಾಗಿ `ಪಾರು ಐ ಲವ್ ಯು` ಖ್ಯಾತಿಯ ರಂಜನ್ ನಟಿಸಿದ್ದಾರೆ. ಅನಿರುದ್ಧ. ಮೀಸೆ ಆಂಜನಪ್ಪ, ನಾಗರಾಜಮೂರ್ತಿ, ಮಂಜು, ಮಂಡ್ಯ ಶ್ರೀಧರ್, ಸರು, ಖುಷಿ ಗೌಡ, ಪೂಜಾ, ಐಶ್ವರ್ಯ, ¥sóÀಕಿರಪ್ಪ ದೊಡ್ದಮನಿ(ಹಳ್ಳಿಮೆಷ್ಟ್ರು ಖ್ಯಾತಿ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com