ಚಾಮುಂಡೇಶ್ವರಿ ಸನ್ನಿಧಿಯಲ್ಲಿ `ಅಮೋಘ್’ ಚಿತ್ರ ಆರಂಭ

Published on

444 Views
Advertisement

ಚಾಮುಂಡೇಶ್ವರಿ ಸನ್ನಿಧಿಯಲ್ಲಿ `ಅಮೋಘ್’ ಚಿತ್ರ ಆರಂಭ

ಬೆಳಗಾವಿ ಸಿಂಹದಮರಿ ಡಾ.ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದವರಾದ ಮಲ್ಲೇಶ.ಬ.ಪೂಜಾರಿ ಮತ್ತು ಶೇಖರ.ನಾ.ಕಾಲೇರಿ ಇವರುಗಳು ವೃತ್ತಿಯಲ್ಲಿ ತರಕಾರಿ ಬೆಳೆಯುವವರು. ಚಿಕ್ಕಂದಿನಿಂದಲೂ ಶಿವರಾಜ್‍ಕುಮಾರ್ ಚಿತ್ರಗಳನ್ನು ನೋಡುತ್ತಲೆ ಅವರ ಕಟ್ಟಾ ಅಭಿಮಾನಿಯಾಗಿ, ಇಂದು ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

Advertisement

ಪ್ರೊಡಕ್ಷನ್ ನಂ.1 ಎಂಬ ಶೀರ್ಷಿಕೆಯಲ್ಲಿ ಆರಂಭವಾದ ಈ ಚಿತ್ರಕ್ಕೆ `ಅಮೋಘ್` ಎಂದು ನಾಮಕರಣ ಮಾಡಲಾಗಿದೆ. ರಾಚೇನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಚಿತ್ರದ ಮಹೂರ್ತ ಸಮಾರಂಭಕ್ಕೆ ಸೆಂಚುರಿ ಸ್ಟಾರ್ ಡಾ.ಶಿವರಾಜ್‍ಕುಮಾರ್ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ತಂಡಕ್ಕೆ ಶುಭ ಹಾರೈಸಿದರು.

Advertisement

ಈ ಚಿತ್ರಕ್ಕೆ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶಕರಾಗಿ ಚಂದೂರ ಮಾರುತಿ ಪರಿಚಯವಾಗುತ್ತಿದ್ದಾರೆ. ಇವರು ಸತತ ಏಳು ವರ್ಷಗಳ ಕಾಲ ಬಿ.ಸುರೇಶ್ ಬಳಿ ಸಹಾಯಕರಾಗಿ ದುಡಿದ ಅನುಭವವಿದೆ. ಇಬ್ಬರು ಒಂದೇ ಊರಿನವರಾಗಿರುವುದು ವಿಶೇಷ. ಕತೆಯಲ್ಲಿ ಸೇವೆಯಲ್ಲಿರುವ ತಹಸೀಲ್ದಾರ್ ಮಗ ಡಿಗ್ರಿ ವ್ಯಾಸಂಗ ಮಾಡುತ್ತಿದ್ದು, ಒಂದು ದಿನ ಅಪ್ಪನ ದುಡ್ಡನ್ನು ಕಳ್ಳತನ ಮಾಡಿ ಪಲಾಯನ ಮಾಡುತ್ತಾನೆ. ಯಾವ ಕಾರಣ, ಉದ್ದೇಶಕ್ಕೆ ಹಣ ತೆಗೆದುಕೊಂಡು ಹೋದ ಎಂಬುದನ್ನು ಸಿನಿಮಾದಲ್ಲಿ ತಿಳಿಯಬೇಕಂತೆ. ಇದಕ್ಕೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿಕೊಂಡು ಒಳ್ಳೆ ಚಿತ್ರ ಮಾಡಲು ಯೋಜನೆ ಹಾಕಿಕೊಂಡಿದೆ.

Advertisement

ಮಗನ ಪಾತ್ರದಲ್ಲಿ ಅರುಣ್ ನಾಯಕನಾಗಿ ಎರಡನೆ ಚಿತ್ರ. ಬೆಂಗಳೂರಿನ ಚೈತ್ರ ನಾಯಕಿ. ಖಳನಾಯಕನಾಗಿ ಪ್ರಶಾಂತ್.ಜಿಕೆ. ಇವರೊಂದಿಗೆ ಮೈಕೋಮಂಜು, ಭವಾನಿಪ್ರಕಾಶ್, ಹರೀಶ್‍ನೀನಾಸಂ, ಮಾಲತಿಶ್ರೀಮೈಸೂರು ತಾರಬಳಗದಲ್ಲಿದ್ದಾರೆ. ಕಾರವಾರ, ಮೈಸೂರು, ಮಂಗಳೂರು, ಮಡಕೇರಿ, ಬೆಳಗಾಂ ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಸಿದ್ದತೆಗಳನ್ನು ಮಾಡಿಕೊಂಡಿದೆ. ಮಂಗಳೂರಿನ ಲಾಯ್ ವ್ಯಾಲೆಂಟನ್ ಸಂಗೀತದ ಐದು ಹಾಡುಗಳಿಗೆ ಡಾ..ನಾಗೇಂದ್ರಪ್ರಸಾದ್ ಮತ್ತು ಸತೀಶ್‍ಮಾಚೇನಹಳ್ಳಿ ಗೀತರಚನೆ ಮಾಡುತ್ತಿದ್ದಾರೆ. ಛಾಯಾಗ್ರಹಣ ಕೃಷ್ಣಮಂಡ್ಯಾ, ಸಂಕಲನ ಪ್ರಕಾಶ್ ಕಾರಿಂಜ್ ಅವರದಾಗಿದೆ.

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com