flixOye
Buzz

ಜುಲೈ 19 ರಿಂದ ಬಹುನಿರೀಕ್ಷೀತ ಸಿಂಗ ತೆರೆಗೆ

ಚಿರಂಜೀವಿ ಸರ್ಜಾ ನಾಯಕನಾಗಿ ಕಾಣಿಸಿಕೊಂಡಿರುವ ಸಿಂಗ ಚಿತ್ರವು ಜುಲೈ 19ರಿಂದ ತೆರೆಗೆ ಬರುತ್ತಿದೆ.‌ ಉದಯ್.ಕೆ‌.ಮೆಹ್ತಾ ಅವರು
ನಿರ್ಮಿಸಿರುವ ಈ ಚಿತ್ರವನ್ನು ವಿಜಯ್ ಕಿರಣ್ ಅವರು ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಚಿರು ಅವರಿಗೆ ಅದಿತಿ ಪ್ರಭುದೇವಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ಸೇರಿದಂತೆ ಬಹುದೊಡ್ಡ ತಾರಬಳಗವೇ ಚಿತ್ರದಲ್ಲಿ ನಟಿಸಿದ್ದಾರೆ.

Advertisement

ಸಂಬಂಧಿತ · Related