flixOye
Buzz

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಕಟೌಟ್ ದುಬೈನ ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿದೆ

ದುಬೈನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್‌ವುಡ್ ‌ಸುಲ್ತಾನ ಕಿಚ್ಚ‌ ಸುದೀಪ್ ತಮ್ಮ ಸಿನಿ‌ ಜರ್ನಿಯಲ್ಲಿ 25 ವರ್ಷಗಳನ್ನು ಪೂರೈಸಿದ ಸಂಭ್ರದಲ್ಲಿದ್ದಾರೆ. ಈ ಸಂಭ್ರಮಾಚರಣೆ ಇಂದು ದುಬೈನ ಬುರ್ಜ್ ಖಲೀಫಾದಲ್ಲಿ ನಡೆಯಲಿದ್ದು, ಹಾಗೂ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಜಗತ್ತಿನ ಎತ್ತರದ ಬುರ್ಜ್‌ ಖಲೀಫಾದ ಮೇಲೆ 2000 ಅಡಿ ಕಟೌಟ್ ರಾರಾಜಿಸಲಿದ್ದು, ಅದರ‌ ಜೊತೆಗೆ ವಿಕ್ರಾಂತ್ ರೋಣ ಸಿನಿಮಾದ 180 ಸೆಕೆಂಡ್ ಗಳ ಟೀಸರ್ ಹಾಗೂ ಲೋಗೋ ಬಿಡುಗಡೆ ಆಗಲಿದೆ.


ರಾತ್ರಿ 9 ಗಂಟೆಗೆ ಕಿಚ್ಚ ಕ್ರಿಯೇಷನ್ಸ್ ಯ್ಯೂಟ್ಯೂಬ್ ಚಾನೆಲ್ ನಿಂದ ಕಾರ್ಯಕ್ರಮ ಲೈವ್ ಪ್ರಸಾರವಾಗಲಿದೆ. ಈ ಬೆಳ್ಳಿಹಬ್ಬದ ಆಚರಣೆಯಲ್ಲಿ ಸುದೀಪ್ ಪತ್ನಿ ಪ್ರಿಯಾ‌ ಸುದೀಪ್, ಮಗಳು ಸಾನ್ವಿ ಭಾಗಿಯಾಗಲಿದ್ದಾರೆ. ಸುದೀಪ್ ಮೂರು ದಿನದ ಹಿಂದೆ ದುಬೈ ತಲುಪಿದ್ದಾರೆ. ಬುರ್ಜ್‌ ಖಲೀಫಾ ಕಟ್ಟಡವನ್ನು ಒಂದೂವರೆ ಕಿಲೋ ಮೀಟರ್ ದೂರದಿಂದ ಕಿಚ್ಚ‌ ಕ್ರಿಯೇಷನ್ಸ್ ಟೀಂ 6 ಕ್ಯಾಮೆರಾ ಯುನಿಟ್ ಗಳನ್ನು ಬಳಸಿ ಸುಂದರಕ್ಷಣಗಳನ್ನು ಸೆರೆಹಿಡಿಯಲಿದ್ದಾರೆ.

ಸಂಬಂಧಿತ · Related