flixOye
Buzz

ಕನ್ನಡದಲ್ಲಿ ‌ರಿಮೇಕ್ ಆಗಲಿದೆ‌ ತೆಲುಗಿನ ‘ಎವರು’

ಕಳೆದ ವರ್ಷ ತೆಲುಗಿನಲ್ಲಿ ತೆರೆಕಂಡ ಸೂಪರ್‌ ಹಿಟ್ ಸಿನಿಮಾ ‘ಎವರು’. ಈಗ ಈ‌ ಸಿನಿಮಾವನ್ನು‌ ಕನ್ನಡದಲ್ಲಿ ರಿಮೇಕ್‌ ಮಾಡಲು‌ ಹೊರಟ್ಟಿದ್ದಾರೆ ನಿರ್ದೇಶಕ ಅಶೋಕ್ ಅಲ್ಲೆ ಎಂಬುವವರು. ‘ಎವರು’ ಇದು ಹಾಲಿವುಡ್ ನ ‘ದಿ ಇನ್ವಿಸಿಬಲ್ ಗೆಸ್ಟ್’ ಸಿನಿಮಾದ ರಿಮೇಕ್. ಅದನ್ನು ತೆಲುಗಿನ ನೆಟಿವಿಟಿಗೆ ತಕ್ಕಂತೆ, ಚಿತ್ರಕಥೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡು ತೆಲುಗಿನಲ್ಲಿ ಮಾಡಲಾಯಿತು.

ಈ ಚಿತ್ರ ಹಿಂದಿಯಲ್ಲಿ ‘ಬದ್ಲಾ’ ಹೆಸರಿನಲ್ಲಿ ಶಾರುಖ್‌ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣದಲ್ಲಿ, ಅಮಿತಾಬಚ್ಚನ್ ಹಾಗೂ ತಾಪ್ಸೀಪನು ಮುಖ್ಯಭೂಮಿಕೆಯಲ್ಲಿ‌ ಮೂಡಿಬಂದಿತ್ತು. ತೆಲುಗಿನ‌ ‘ಎವರು’ ಕ್ರೈಂ ಥ್ರಿಲ್ಲರ್ ‌ಕಥೆಯುಳ್ಳ ಈ‌ ಸಿನಿಮಾವನ್ನು ಅದ್ಭುತ ನಿರೂಪಣೆ ಮೂಲಕ ಅಚ್ಚುಕಟ್ಟಾಗಿ, ಕಡಿಮೆ ಬಜೆಟ್ ನಿರ್ಮಾಣದಲ್ಲಿ ತೆರೆ ಮೇಲೆ ನಿರ್ದೇಶಕ ಮಧು ಮೋಹನ್ ತಂದಿದ್ದರು.

ಇದು‌ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗಳಿಕೆ ಮಾಡಿತ್ತು. ಇದರಲ್ಲಿ ನಟ ಅದ್ವಿ ಶೇಷ್ ಮತ್ತು ರೆಜಿನಾ ಕಸ್ಸಂದ್ರ ನಟನೆ‌ ಸಿನಿಮಾದ ಪ್ಲಸ್ ಪಾಯಿಂಟ್‌ ಆಗಿತ್ತು. ಇದೀಗ‌ ಈ ಚಿತ್ರದ ಕನ್ನಡ ರಿಮೇಕ್ ನಲ್ಲಿ‌ ನಟ ದಿಗಂತ್‌ ಹಾಗೂ‌ ಹರಿಪ್ರಿಯ ನಟಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ಪ್ರಭು ಮುಂಡ್ಕೂರ್ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಆರಂಭದಲ್ಲೇ ‌ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಕೊರೋನಾದ ಸಮಸ್ಯೆಯಿಂದಾಗಿ ಚಿತ್ರೀಕರಣ ತಡವಾಯಿತು. ಚಿತ್ರೀಕರಣಕ್ಕೆ ಸಕಲ‌ ಸಿದ್ಧತೆಗಳನ್ನು ಮಾಡಿಕೊಂಡಿರುವ ಚಿತ್ರತಂಡ ಮುಂದಿನ‌ ವಾರದಿಂದ ಹೈದರಾಬಾದ್ ನಲ್ಲಿ ಸಿನಿಮಾ ಶೂಟಿಂಗ್ ಶುರು‌ ಮಾಡಲಿದೆ. ಮುಂಜಾಗ್ರತಾ ‌ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ನಡೆಸಲಿದೆಯಂತೆ ಚಿತ್ರತಂಡ.

ಸಂಬಂಧಿತ · Related