ಐರಾ ಚಿತ್ರದ ಟೀಸರ್ ಬಿಡುಗಡೆ

Published on

552 Views
Advertisement

ಐರಾ ಎನ್ನುವುದು ಸಂಸ್ಕೃತ ಪದ, ಪ್ರಕೃತಿಯಲ್ಲಿ ಏನಾದರೂ ಒಂದು ಕ್ರಿಯೆ ನಡೆಯುವ ಮುನ್ನ ವಿಚಿತ್ರ ಶಬ್ದವೊಂದು ಕೇಳಿಬರುತ್ತದೆ. ಆ ಶಬ್ದವನ್ನೇ ಐರಾ ಎನ್ನುತ್ತೇವೆ. ಇದು ನಿರ್ದೇಶಕ ರಾಜ್ಉದಯ್ ಟೈಟಲ್ ಕುರಿತು ನೀಡಿರುವ ಮಾಹಿತಿ.
ಇತ್ತೀಚೆಗೆ ಇಂಥ ವಿಶೇಷ ಶೀರ್ಷಿಕೆ ಹೊಂದಿರುವ ಐರಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಿರ್ಮಾಪಕ ಜಾಕ್ ಮಂಜು, ನಟ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ಸುರೇಶ್ ಸುಬ್ರಮಣ್ಯ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವು ಹಾಗೂ ಮೀನಾಕ್ಷಿ ಈ ಚಿತ್ರದಲ್ಲಿ ತಾಯಿ, ಮಗನಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕೌಶಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ.

ಮಾಸ್ತಿಗುಡಿ ದುರಂತದಲ್ಲಿ ಮಡಿದ ಉದಯ್ ನನ್ನ ಸ್ವಂತ ಭಾಮೈದ, ಉದಯ್‌ಗಾಗೇ ಈ ಕಥೆ ರೆಡಿ ಮಾಡಿಕೊಂಡಿದ್ದೆ. ಐರಾ ನನ್ನ ಕನಸು, ಈ ಕಥೆಯನ್ನು ನೂರಾರು ನಿರ್ಮಾಪಕರ ಬಳಿ ತೆಗೆದುಕೊಂಡು ಹೋಗಿದ್ದೆ. ಕಥೆಯನ್ನು ಇಷ್ಟಪಟ್ಟರೂ, ಹೀರೋ ಹೆಸರು ಕೇಳಿದ ಕೂಡಲೇ ನೋಡೋಣ ಎನ್ನುತ್ತಿದ್ದರು. ಆದರೆ ಸುರೇಶ್ ಸುಬ್ರಮಣ್ಯ ಚಿತ್ರ ಅರ್ಧದಲ್ಲೇ ನಿಲ್ಲುವ ಸ್ಥಿತಿಯಲ್ಲಿದ್ದಾಗ ಮುಂದೆ ಬಂದರು, ಅನಾಥ ಹುಡುಗನೊಬ್ಬನ ಸುತ್ತ ನಡೆವ ಕಥೆಯಿದು, ಆತ ಏಕೆ ಹುಚ್ಚನಾದ, ಅದರ ಹಿನ್ನೆಲೆಯೇನು ಅನ್ನೋದೇ ಈ ಚಿತ್ರದ ಕಥೆ. ವಿಶೇಷವಾಗಿ ಮದರ್ ಸಂಟಿಮೆಟ್ ಸಾಂಗನ್ನು ಜೋಗಿಪ್ರೇಮ್ ಅವರು ಹಾಡುತ್ತಿದ್ದಾರೆ.

Advertisement

೧೫ ದಿನಗಳ ಕಾಲ ಬನಶಂಕರಿಯ ಸ್ಮಶಾನದಲ್ಲಿ ನಂತರ ಆಂದ್ರಹಳ್ಳಿ ದೇವಸ್ಥಾನವೊಂದರಲ್ಲಿ ಚಿತ್ರೀಕರಣ ನಡೆಸಿದ್ದು, ಸದ್ಯದಲ್ಲೇ ೨ನೇ ಹಂತದ ಶೂಟಿಂಗ್ ಆರಂಭಿಸುತ್ತಿದ್ದೇವೆ. ಪ್ರಕೃತಿಯಲ್ಲಿ ಏನಾದರೂ ಕ್ರಿಯೆ ಆಗಬೇಕಾದರೆ ಅದರ ಮುನ್ಸೂಚನೆ ಎಂಬಂತೆ ಒಂದು ಸೌಂಡ್ ಕೇಳಿಬರುತ್ತದೆ, ಅದೇ ಐರಾ ಎಂದು ವಿವರಿಸಿದರು.

ಸಸ್ಪೆನ್ಸ್ ಥ್ರಿಲ್ಲರ್ ಚಾರ್ಜ್ ಶೀಟ್ ಚಿತ್ರಕ್ಕೆ ಮುಹೂರ್ತ

Advertisement

ಚಿತ್ರದ ನಾಯಕ ಶಿವು ಮಾತನಾಡುತ್ತ ನಾನು ರಾಜ್‌ಉದಯ್ ಸೇರಿ ಐದು ವರ್ಷಗಳ ಕಾಲ ತಾಯಿ ಸೆಂಟಿಮೆಂಟ್ ಇರುವ ಈ ಕಥೆಯನ್ನು ರೆಡಿ ಮಾಡಿದೆವು. ಒಬ್ಬ ನಿರ್ಮಾಪಕರೂ ಸಿಗಲಿಲ್ಲ ಅಂತ ಇಬ್ಬರೂ ಬಹಳಸಾರಿ ಅತ್ತಿದ್ದೇವೆ. ಕೊನೆಗೆ ಸುರೇಶ್ ಸುಬ್ರಮಣ್ಯ ಅವರು ಸಿಕ್ಕರು. ಇದರಲ್ಲಿ ನನ್ನ ಪಾತ್ರಕ್ಕೆ ಹುಚ್ಚನ ಕ್ಯಾರೆಕ್ಟರ್ ಅಲ್ಲದೆ ಹಲವಾರು ಗೆಟಪ್‌ಗಳಿವೆ ಎಂದು ಹೇಳಿದರು.

Advertisement

ಮುಖ್ಯ ಅತಿಥಿಯಾಗಿದ್ದ ಜಾಕ್‌ಮಂಜು ಮಾತನಾಡಿ ಕನಸುಗಳನ್ನು ಹೊತ್ತ ತಂಡ ಇಲ್ಲಿದೆ, ಇವರೆಲ್ಲರ ಕನಸು ಈಡೇರಲಿ, ಎಲ್ಲರಿಗೂ ಒಳ್ಳೇ ಹೆಸರು ಬರಲಿ, ಟೀಸರ್ ಬಹಳ ಅದ್ಭುತವಾಗಿ ಬಂದಿದೆ, ಟೀಸರ್‌ನಲ್ಲಿ ಹಾಡಿನ ತುಣುಕನ್ನೂ ಸೇರಿಸಿರುವುದು ಒಳ್ಳೇ ಪ್ರಯತ್ನ, ಇವರೆಲ್ಲ ಮಾತಾಡುವಾಗ ನನ್ನ ಮೊದಲಚಿತ್ರ ಡೆಡ್ಲಿಸೋಮ ನೆನಪಾಯ್ತು ಎಂದರು, ನಟ ಮೋಹನ್ ಮಾತನಾಡಿ ಮೊದಲಹೆಜ್ಜೆ ಇಡೋದೇ ಕಷ್ಟ, ಈ ಹುಡುಗರು ಆಗಲೇ ಯಶಸ್ಸು ಗಳಿಸಿದ್ದಾರೆ.. ನಾನೊಬ್ಬ ನಿರ್ದೇಶಕನಾಗಿ ಗುರುತಿಸಿಕೊಳ್ಳಲು ೮ ವರ್ಷಗಳ ಕಾಲ ಕಾದಿದ್ದೆ ಎಂದು ತನ್ನ ಅನುಭವ ಹಂಚಿಕೊಂಡರು. ನಾಯಕನ ತಾಯಿ ಪಾತ್ರ ಮಾಡಿರುವ ಮೀನಾಕ್ಷಿ, ಮತ್ತೊಬ್ಬ ಪ್ರಮುಖ ಪಾತ್ರಧಾರಿ ಕಾರ್ತೀಕ್ ವರ್ಣೇಕರ್ ಚಿತ್ರದ ಕುರಿತಂತೆ ತಮ್ಮ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ ಮಾತನಾಡಿ ನಿಜವಾದ ಸ್ಮಶಾನದಲ್ಲಿ ಶೂಟ್ ಮಾಡಿದ್ದೇವೆ, ರಿಯಲ್ ಹೆಣದ ಜತೆಗೇ ನಾಯಕ ಶಿವು ಆಕ್ಟ್ ಮಾಡಿದ್ದಾರೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ ಚಿತ್ರದಲ್ಲಿ ೪ ಹಾಡುಗಳಿವೆ, ನನ್ನ ಸಹೋದರ ಚೇತನ್ ಸಾಹಿತ್ಯ ಬರೆದಿದ್ದಾರೆ ಎಂದರು.

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com