ರತ್ನನ್ ಪ್ರಪಂಚದಲ್ಲಿ ಗೌಡತಿಯಾದ ನಟಿ ತಾರಾ

Published on

377 Views
Advertisement

ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ. ನೂರಾರುಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಒಂದು ಭಿನ್ನ- ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದವರು ತಾರಾ. ಆದರೆ, ಈಗ ಇನ್ನೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅದುವೇ ಗಟ್ಟಿಗಿತ್ತಿ ಗೌಡತಿ ಪಾತ್ರ. ಹೌದು, ಅಂಥ ಒಂದು ವಿಶೇಷ ಪಾತ್ರವನ್ನು ಡಾಲಿ ಧನಂಜಯ್ ಅಭಿನಯದ ‘ರತ್ನನ್​ ಪ್ರಪಂಚ’ ಸಿನಿಮಾದಲ್ಲಿ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ನಿರ್ಮಾಣ ಮಾಡುತ್ತಿರುವ ‘ರತ್ನನ್​ ಪ್ರಪಂಚ’ ಸಿನಿಮಾವನ್ನು ‘ದಯವಿಟ್ಟು ಗಮನಿಸಿ’ ಸಿನಿಮಾ ಖ್ಯಾತಿಯ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅತೀ ವಿಶೇಷವಾದ ಪಾತ್ರದಲ್ಲಿ ಗೌಡತಿಯಾಗಿ ತೆರೆಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Advertisement

ಉತ್ತರ ಕರ್ನಾಟಕ ಮೂಲದ ಊರೊಂದರ ಗಟ್ಟಿಗಿತ್ತಿ ಗೌಡತಿಯಾಗಿ ಅವರನ್ನು ತೋರಿಸುತ್ತಿದ್ದಾರೆ ನಿರ್ದೇಶಕರು.
‘ಕಥೆಯ ಒಂದೆಳೆ ಹೇಳುತ್ತಿದ್ದಂತೆ, ನನಗೆ ಇಷ್ಟವಾಯ್ತು.ಆದರೆ ಜೊತೆಗೆ ಆಳಕು ಆಯ್ತು..ಅದರಲ್ಲೂ ನಾನು ಈ ರೀತಿಯ ಪಾತ್ರವನ್ನು ಇಲ್ಲಿಯವರೆಗೂ ಮಾಡಿಲ್ಲ. ಖಡಕ್​ ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡುವ ಹೆಣ್ಣುಮಗಳಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಹಿಳೆಯಾಗಿ ನನ್ನ ಪಾತ್ರ ಸಾಗಲಿದೆ. ನೆಗೆಟಿವ್​ ಶೇಡ್​ ಅಲ್ಲದ, ದೇವತೆಯಂತೆ ಬಿಂಬಿಸುವ ಪಾತ್ರ ಇದು. ಇಂಥ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ನನ್ನ ಧನ್ಯವಾದ’ ಎನ್ನುವ ತಾರಾ, ಉತ್ತರ ಕರ್ನಾಟಕ ಭಾಷೆ ಕಲಿಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇಡೀ ಸಿನಿಮಾದಲ್ಲಿ ತಾರಾ ಪಾತ್ರ ಮುಖ್ಯವಾಗಿರುವುದರಿಂದ ಬಹುಪಾಲು ಸಿನಿಮಾದಲ್ಲಿ ಅವರೂ ಕಾಣಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಸಂಭಾಷಣೆ ಒಪ್ಪಿಸಬೇಕಿರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಆ ಸೊಗಡನ್ನು ಉಚ್ಚರಿಸುವುದಕ್ಕೆ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

Advertisement

‘ಈವರೆಗೂ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರತಿ ಪಾತ್ರದಲ್ಲಿಯೂ ಕಲಿಯುವುದಕ್ಕೆ ಸಾಕಷ್ಟಿತ್ತು. ಇಷ್ಟು ವರ್ಷಗಳಾದರೂ ಈಗಲೂ ನನಗೆ ಕಲಿಯುವುದಕ್ಕೆ ಇಂಥ ಪಾತ್ರಗಳ ಮೂಲಕ ಅವಕಾಶ ಸಿಗುತ್ತಿದೆ. ಆ ರೀತಿಯ ಪಾತ್ರ ಹಿಡಿದು ಬರುವ ನಿರ್ದೇಶಕರಿಗೆ, ನೀವೇ ನಟಿಸಬೇಕು ಎನ್ನುವ ನಿರ್ಮಾಪಕರಿಗೆ ನನ್ನ ನಮನಗಳು’ ಎಂದೂ ಹೇಳುತ್ತಾರವರು.

ಇನ್ನು ಲಾಕ್​ಡೌನ್​ ಮುಗಿಯುತ್ತಿದ್ದಂತೆ ‘ಟಾಮ್​ ಆ್ಯಂಡ್​ ಜೆರ್ರಿ’ ಮತ್ತು ‘ಬಡವ ರಾಸ್ಕಲ್’ ಚಿತ್ರದ ಶೂಟಿಂಗ್​ ಮುಗಿಸಿರುವ ತಾರಾ, ನವೆಂಬರ್​ನಲ್ಲಿ ‘ರತ್ನನ್​ ಪ್ರಪಂಚ’ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಇದರ ಜತೆಗೆ ಹೊಸದಾಗಿ ಐದಾರು ಚಲನಚಿತ್ರಗಳನ್ನೂ ಒಪ್ಪುಕೊಂಡಿದ್ದಾರೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com