ಮಿಡಲ್ ಕ್ಲಾಸ್ ಮೆಲೊಡೀಸ್ ಫುಲ್ ಮೂವಿ ಲೀಕ್ ಮಾಡಿದ ತಮಿಳು ರಾಕರ್ಸ್

Published on

472 Views
Advertisement

‘ಮಿಡಲ್ ಕ್ಲಾಸ್ ಮೆಲೊಡೀಸ್’ ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿದ್ದು, ಆನಂದ್ ದೇವರಕೊಂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಿಡಲ್ ಕ್ಲಾಸ್ ಮೆಲೊಡೀಸ್ ಚಿತ್ರವು ನವೆಂಬರ್ 20 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ಚಲನಚಿತ್ರ ಪ್ರೇಮಿಗಳು ಮತ್ತು ಎಲ್ಲೆಡೆಯಿಂದ ವಿಮರ್ಶಕರು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಇತ್ತೀಚಿನ ಅಪ್ ಡೇಟ್ಸ್ ಪ್ರಕಾರ, ಮಿಡಲ್ ಕ್ಲಾಸ್ ಮೆಲೊಡೀಸ್ ಪೈರಸಿಗೆ ಬಲಿಯಾಗಿದೆ. ಹೌದು, ಮಿಡಲ್ ಕ್ಲಾಸ್ ಮೆಲೊಡೀಸ್ ಎಚ್‌ಡಿ ಗುಣಮಟ್ಟದಲ್ಲಿ ತಮಿಳುರಾಕರ್ಸ್, ಟೆಲಿಗ್ರಾಮ್ ಮತ್ತು ಇತರ ಪೈರಸಿ ಆಧಾರಿತ ವೆಬ್‌ಸೈಟ್‌’ಗಳಲ್ಲಿ ಸೋರಿಕೆಯಾಗಿದೆ. ಇದೀಗ ಮಿಡಲ್ ಕ್ಲಾಸ್ ಮೆಲೊಡೀಸ್ ಚಿತ್ರವನ್ನು ತಮಿಳುರಾಕರ್ಸ್ ಸೋರಿಕೆ ಮಾಡಿರುವುದರಿಂದ ಅನೇಕರಿಗೆ ಶಾಕ್ ಆಗಿದ್ದು, ಆಶ್ಚರ್ಯವನ್ನುಂಟು ಮಾಡಿದೆ. ಚಲನಚಿತ್ರವು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. ಹಲವಾರು ದೂರುಗಳ ಹೊರತಾಗಿಯೂ, ನ್ಯಾಯಾಲಯ ಕಠಿಣ ಕ್ರಮ ತೆಗೆದುಕೊಂಡರೂ ಪೈರಸಿ ಭೀತಿಯ ವಿರುದ್ಧ ಹೋರಾಡಲು ಚಲನಚಿತ್ರ ನಿರ್ಮಾಪಕರು ವಿಫಲರಾಗಿದ್ದಾರೆ.

Advertisement

ವಿನೋದ್ ಅನಂತೋಜು ನಿರ್ದೇಶನದ ಮಿಡಲ್ ಕ್ಲಾಸ್ ಮೆಲೊಡೀಸ್ ಚಿತ್ರದಲ್ಲಿ ವರ್ಷಾ ಬೊಲ್ಲಮ್ಮ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ತಾರಗಣದಲ್ಲಿ ದಿವ್ಯಾ ಶ್ರೀಪಾದ, ಗೋಪರಾಜು ರಮಣ, ಚೈತನ್ಯ ಗರಿಕಿಪತಿ, ಸುರಭಿ ಪ್ರಭಾವತಿ, ಪ್ರೇಮ್ ಸಾಗರ್ ಮತ್ತು ಪ್ರಭಾವತಿ ವರ್ಮಾ ಕೂಡ ಇದ್ದಾರೆ. ಈ ಚಿತ್ರ 2020 ರ ಆರಂಭದಲ್ಲಿ ಬಿಡುಗಡೆಯಾಗಬೇಕಿತ್ತು, ಆದರೆ ಕೋವಿಡ್ 19 ಕಾರಣದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆದ ಕಾರಣ ಇದನ್ನು ಮುಂದೂಡಲಾಯಿತು. ಇದೀಗ ಅಮೆಜಾನ್ ಪ್ರೈಮ್’ನಲ್ಲಿ ಚಿತ್ರ ಬಿಡುಗಡೆಯಾದ ನಂತರ ಚಿತ್ರವು ಮೂಲೆ ಮೂಲೆಯಿಂದಲೂ ದೊಡ್ಡ ಮೆಚ್ಚುಗೆಯನ್ನು ಗಳಿಸುತ್ತಿದೆ.

ಮಿಡಲ್-ಕ್ಲಾಸ್ ಮೆಲೊಡೀಸ್ ಗುಂಟೂರಿನಲ್ಲಿ ನಡೆಯುವ ಕಥೆಯಾಗಿದೆ. ರಾಘವ (ಆನಂದ್ ದೇವರಕೊಂಡ) ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು. ರಾಘವನಿಗೆ ಹೋಟೆಲ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಆಸೆ. ಆದ್ದರಿಂದ ರಾಘವ ಗುಂಟೂರಿಗೆ ಹೋಗಿ ಅಲ್ಲಿ ತನ್ನ ಹೋಟೆಲ್ ಆರಂಭಿಸಲು ಬಯಸುತ್ತಾನೆ. ಆದರೆ ಅವನ ಬಳಿ ಹಣವಿಲ್ಲ. ಇದರ ನಡುವೆ ಸಂಧ್ಯಾ (ವರ್ಷಾ ಬೊಲ್ಲಮ್ಮ)ಳನ್ನು ಪ್ರೀತಿಸುತ್ತಾನೆ. ಕಷ್ಟಪಟ್ಟು ಹೋರಾಡಿದ ನಂತರ, ಅವನು ಹೇಗೋ ಗುಂಟೂರಿನಲ್ಲಿ ಹೋಟೆಲ್ ಆರಂಭಿಸುತ್ತಾನೆ. ಆದರೆ ಅವನ ವ್ಯವಹಾರವು ಕ್ಲಿಕ್ ಆಗದೆ ವಿಫಲವಾಗುತ್ತದೆ. ರಾಘವ ತನ್ನ ವ್ಯವಹಾರವನ್ನು ಹೇಗೆ ಯಶಸ್ವಿಗೊಳಿಸುತ್ತಾನೆ ಮತ್ತು ಸಂಧ್ಯಾಳನ್ನು ಹೇಗೆ ಮದುವೆಯಾಗುತ್ತಾನೆ ಎಂಬುದು ಉಳಿದ ಕಥೆಯಾಗಿದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com