ಚಿರು ಗೆ ನಾಯಕಿಯಾಗಿ ‘ಕಾನ್ಸ್ ಟೇಬಲ್ ಸರೋಜಾ’

Published on

689 Views
Advertisement

ಚಿರು ಗೆ ನಾಯಕಿಯಾಗಿ ‘ಕಾನ್ಸ್ ಟೇಬಲ್ ಸರೋಜಾ’

‘ ಕಾನ್ಸ್ ಟೇಬಲ್ ಸರೋಜಾ’ ಹೆಸರು ಕೇಳಿದ ತಕ್ಷಣ ನೆನಪಾಗುವುದು ‘ಟಗರು’ ಸಿನಿಮಾ. ಹೌದು! ಇತ್ತೀಚಿಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಟಗರು’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ‘ಕಾನ್ಸ್ ಟೇಬಲ್ ಸರೋಜಾ’ ಪಾತ್ರ ಸಣ್ಣದಾದರೂ ಆ ಪಾತ್ರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು. ‘ಕಾನ್ಸ್ ಟೇಬಲ್ ಸರೋಜಾ’ ರವರ ನಿಜವಾದ ಹೆಸರು‌ ತ್ರಿವೇಣಿ ರಾವ್. ಕಿರಾತಕ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ತ್ರಿವೇಣಿ ನಂತರ ಇತ್ತೀಚೆಗೆ ಬಿಡುಗಡೆಯಾದ ಚಕ್ರವರ್ತಿ ಚಿತ್ರದಲ್ಲಿ‌ ಸೃಜನ್ ಲೋಕೇಶ್ ಹೆಂಡ್ತಿ ಪಾತ್ರದಲ್ಲಿ ‌ಕಾಣಿಸಿಕೊಂಡಿದ್ದಾರೆ. ‘ ಟಗರು’ ಸಿನಿಮಾದ ‌ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದ ತ್ರಿವೇಣಿ ಗೆ ಚಿರಂಜೀವಿ ಸರ್ಜ ನಾಯಕನಾಗಿ ಅಭಿನಯಿಸುತ್ತಿರುವ ‘ರಾಜ ಮಾರ್ತಾಂಡ’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಬಂದಿದ್ದು, ಟೈಸನ್ ಸಿನಿಮಾವನ್ನು ‌ ನಿರ್ದೇಶನ ಮಾಡಿದ ರಾಮ್ ನಾರಾಯಣ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಕಾನ್ಸ್ ಟೇಬಲ್ ಸರೋಜಾ’ ನನ್ನು ಅವರ ಅಭಿಮಾನಿಗಳಿಗೆ ನಾಯಕಿಯಾಗಿ ನೋಡುವ ಅವಕಾಶ ಸಿಕ್ಕಿದಂತಾಯಿತು. ತ್ರಿವೇಣಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಟಾಲಿವುಡ್ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

Advertisement

ಪೂರಿ ಜಗನ್ನಾಥ್ ರವರ ‘ಮೆಹಬೂಬ್’ ಚಿತ್ರದಲ್ಲಿ ಮಿಲಿಟರಿ ಆಫೀಸರ್ ಆಗಿ ಹಾಗೂ ಇನ್ನೊಂದು ಚಿತ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೇ ಇನ್ನು ಕೆಲವರಿಗೆ ತಿಳಿಯದ ವಿಷಯಗಳೆಂದರೆ ತ್ರಿವೇಣಿ ಯವರು ರಾಜ್ ಮೌಳಿ ನಿರ್ದೇಶನದ ‘ ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ ( ರಮ್ಯಕೃಷ್ಣ) ರವರ ಜೊತೆ ಮಹಿಳೆ ಸೇನಾಧಿಪತಿಯಾಗಿ ಕಾಣಿಸಿಕೊಂಡಿರುವ ತ್ರಿವೇಣಿ ಬಾಹುಬಲಿ ಮತ್ತು ಭಾಗಮತಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಗೆ ಡೂಪ್ ಮಾಡಿದ್ದಾರೆ. ಈ ವಿಷಯವನ್ನು ಒಂದು‌ ಖಾಸಗಿ ವಾಹಿನಿ‌ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Advertisement

More Buzz

Buzz 7 days ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 1 week ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 1 week ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 1 week ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 1 week ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 1 week ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 1 week ago

Massa Massa Lyrical Video Drops: Ram Charan & Janhvi Ignite Screens for Peddi

Short Films 1 week ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 1 week ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 1 week ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 1 week ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 1 week ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com