ತೆಲುಗಿನ ಸೂಪರ್ ಹಿಟ್ ಚಿತ್ರ ‘ಮಿಥುನಂ’ ಕನ್ನಡಕ್ಕೆ ಡಬ್…
ಗಾನ ಗಾರೂಡಿಗ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಪಂಚ ಭಾಷಾ ತಾರೆ ಲಕ್ಷ್ಮೀ ಅಭಿನಯದ ತೆಲುಗಿನ ಸೂಪರ್ ಹಿಟ್ ಚಿತ್ರ ‘ಮಿಥುನಂ’.
ಆನಂದ್ ಮುಯಿದ ರಾವು ನಿರ್ಮಿಸಿ, ತನಿಕೆಳ್ಳ ಭರಣಿ ನಿರ್ದೇಶಿಸಿದ್ದ ಈ ಚಿತ್ರ ಕನ್ನಡಕ್ಕೆ ಡಬ್ಬ್ ಆಗುತ್ತಿದೆ.
ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಅವರ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.

Advertisement
ಕನ್ನಡದಲ್ಲೂ ಆನಂದ ಮುಯಿದ ರಾವು ಅವರೆ ನಿರ್ಮಿಸುತ್ತಿದ್ದು, ಮಧುಸೂದನ್ ಹವಾಲ್ದಾರ್ ನೇತೃತ್ವವಿದೆ. ಕನ್ನಡದಲ್ಲಿ
ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ.
ಡಿಸೆಂಬರ್ ನಲ್ಲಿ ‘ಮಿಥುನಂ’ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Advertisement