‘ಪ್ರೀಮಿಯರ್ ಪದ್ಮಿನಿ’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಕೊನೆಯವರೆಗೂ ಸಾಕಷ್ಟು ಕುತೂಹಲ ವನ್ನು ಕಾಯ್ದಿರಿಸಿಕೊಳ್ಳುತ್ತದೆ. ಸರಳವಾಗಿ ಮೂಡಿ ಬಂದಂತಹ ಚಿತ್ರ ‘ಪ್ರೀಮಿಯರ್ ಪದ್ಮಿನಿ’.

‘8ಎಂಎಂ’ ಸಿನಿಮಾದ ಬಳಿಕ ನಟ ಜಗ್ಗೇಶ್ ನಟಿಸಿರುವ ಚಿತ್ರ ‘ಪ್ರೀಮಿಯರ್ ಪದ್ಮಿನಿ’ ಈ ಚಿತ್ರದಲ್ಲಿ ಜಗ್ಗೇಶ್ ರವರನ್ನು ಹೊಸ ರೀತಿಯಲ್ಲಿ ನೋಡಬಹುದು. ಭಾವನಾತ್ಮಕ ಮನರಂಜನೆಯ ಮೂಲಕ ಪ್ರೇಕ್ಷಕರ ಮನಸ್ಸನ್ನು ಮುಟ್ಟುವ ಚಿತ್ರ ‘ಪ್ರೀಮಿಯರ್ ಪದ್ಮಿನಿ’.
‘ಜಗ್ಗೇಶ್ ಸರ್ ಬಗ್ಗೆ ಸಂತೋಷವಾಯಿತು. ನಮ್ಮೆಲ್ಲಾ ಹೃದಯಕ್ಕೆ ಹತ್ತಿರವಾದ ಪಾತ್ರ ಅವರದು. ಎಂಥಾ ಕಠಿಣವಾದ ಪಾತ್ರವನ್ನು ನಿರ್ವಹಿಸಬಲ್ಲ ಅದ್ಭುತ ನಟ. ಆಗ ಕಾಮಿಡಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಇಂಥದೊಂದು ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಅವರೊಳಗಿರುವ ಅರ್ಥಪೂರ್ಣ ಪಾತ್ರಗಳಿಗಾಗಿ ಇರುವ ಹಸಿವನ್ನು ಇದು ತೋರಿಸುತ್ತದೆ. ನಿಮ್ಮ ಮೌನ ಸಾವಿರ ಮಾತುಗಳನ್ನು ಹೇಳುತ್ತದೆ.

ಸಿನಿಮಾ ಕೊನೆಗೊಳ್ಳುವ ರೀತಿಯೂ ಇಷ್ಟವಾಯಿತು. ಚಿತ್ರದಲ್ಲಿ ನಾಟಕೀಯತೆ ಇಲ್ಲ. ನಾವು ಎಷ್ಟೇ ತಡೆಯಲು ಯತ್ನಿಸಿದರೂ ಕೊನೆಯ ಮಾತು ಕೇಳುತ್ತಿದ್ದಂತೆ ಕಣ್ಣ ಹನಿಯೊಂದು ಕೆನ್ನೆಗೆ ಇಳಿಯಿತು. ಪ್ರೀಮಿಯರ್ ಪದ್ಮಿನಿ ಯಲ್ಲಿ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಂಡಿದ್ದಾರೆ. ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ. ಚಿತ್ರ ನೋಡುತ್ತಿದ್ದಂತೆ ನಿರ್ದೇಶಕರ ಕ್ರಿಯೇಟಿವಿಟಿ ಎದ್ದು ಕಾಣುತ್ತದೆ. ಅರ್ಜುನ್ ಜನ್ಯ ಸಂಗೀತ ಸೂಪರ್ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಚಿತ್ರತಂಡಕ್ಕೆ ವಂದನೆಯನ್ನು ಸಲ್ಲಿಸಿದರು.
ಸಂಬಂಧಿತ · Related
Buzz
Karthi & Mohan Raja’s New Family Entertainer Announced
Buzz
SIIMA 2026: ಬೆಂಗಳೂರಲ್ಲಿ ಸೆ.12, 13ರಂದು ದಕ್ಷಿಣ ಭಾರತದ ಸಿನಿರಸಿಕರ ಹಬ್ಬ!
Buzz
ಭಾವಾಂತರ’ದ ‘ಮೊದಮೊದಲಿದು’ ಮೆಲೋಡಿ ಹಿಟ್: ಕಾರ್ತಿಕ್ ಶರ್ಮಾ ನಿರ್ದೇಶನ
Buzz
ಜನ ನಾಯಗನ್: ವಿಜಯ್ ಕೊನೆ ಸಿನಿಮಾ ₹250 ಕೋಟಿ ದಾಟಿತು!
Buzz
ಧನಂಜಯ್ ‘ಅಣ್ಣ ಫ್ರಮ್ ಮೆಕ್ಸಿಕೋ’ ಡಿಸೆಂಬರ್ 24ಕ್ಕೆ!
Buzz
DC Trailer: Lokesh Kanagaraj’s Intense Debut Drops
Buzz
Rishab Shetty X Spider-Man: Brand New Day Trailer Buzz
Buzz
8 Kannada Micro-Dramas to Binge Right Now on Kuku TV & Bullet
Buzz
Priyanka Upendra’s 50th Film ‘Detective Teekshna’ Arrives August 7
Buzz
Lo Naveena Now Streaming on Amazon Prime Video