flixOye
Buzz

ದರ್ಶನ್ ರವರ “ಡೆವಿಲ್” ಜೊತೆ ಧ್ರುವ ಸರ್ಜಾ ರವರ “ಕೆಡಿ” ಸ್ಟಾರ್ ಕ್ಲ್ಯಾಶ್

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಬಹಳಷ್ಟು ನಡೆಯುತ್ತಿದೆ.‌ ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಡೆವಿಲ್ ಚಿತ್ರದ ಜೊತೆ ಧ್ರುವ ಸರ್ಜಾ ರವರ ಕೆಡಿ ಚಿತ್ರ ಕ್ಲ್ಯಾಶ್ !! ಏನಿದು ಸ್ಟಾರ್ ಕ್ಲ್ಯಾಶ್?? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

 

Advertisement

ಚಾಲೆಂಜಿಗ್ ಸ್ಟಾರ್ ದರ್ಶನ್ ರವರ ಬಹು ನಿರೀಕ್ಷಿತ ‘ಡೆವಿಲ್ ದಿ ಹೀರೋ’ ಚಿತ್ರ ಫಸ್ಟ್ ಲುಕ್ ಟೀಸರ್ ಅನ್ನು ಚಿತ್ರತಂಡ ಫೆಬ್ರವರಿ 15ನೇ ತಾರೀಖಿನಂದು ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿತ್ತು. ಈ ಚಿತ್ರದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್, ರಚನಾ ರೈ ಮತ್ತು ಮಹೇಶ್ ಮಂಜ್ರೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಕರಾಗಿದ್ದಾರೆ.

ಚಿತ್ರದ ಮೊದಲ ಟೀಸರ್‌ ಅನ್ನು ದರ್ಶನ್‌ ರವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿತ್ತು. ಡೈಲಾಗ್ಸ್‌, ಉತ್ತಮ ಸಂಭಾಷಣೆ ಮತ್ತು ಆಕ್ಷನ್‌ ಸೀಕ್ವೆನ್ಸ್‌ ನಿಂದ ಚಿತ್ರದ ಟೀಸರ್‌ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಮೊದಲನೇ ಟೀಸರ್ 3,582,326 ವೀಕ್ಷಣೆಗಳಿಂದ ಯಶಸ್ಸನ್ನು ಕಂಡಿತ್ತು.

ಡೆವಿಲ್‌ ಚಿತ್ರವನ್ನು ಇದೇ ಕ್ರಿಸ್ಮಸ್‌ 2024ರಂದು ಬೆಳ್ಳಿತೆರೆಯ ಮೇಲೆ ಬರಲಿದ ಎಂಬ ಸಿಹಿ ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಆದರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರ ಬಹು ನಿರೀಕ್ಷಿತ ʼ ಕೆಡಿʼ ಚಿತ್ರದ ಮೂಹೂರ್ತ ಸಮಾರಂಭವನ್ನು 24 ಏಪ್ರಿಲ್‌ ರಂದು ಮಾಡಲಾಗಿತ್ತು, ಕೆವಿನ್‌ ಪ್ರೊಡಕ್ಷನ್‌ ಹಾಗೂ ಪ್ರೇಮ್‌ ರವರ ನಿರ್ದೇಶನದ ಕೆಡಿ ಚಿತ್ರ ಬಹು ತಾರಾಗಣದ ಸಿನಿಮಾವಾಗಿದ್ದು, ಸಾಕಷ್ಟು ಸ್ಟಾರ್‌ ನಟ, ನಟಿಯರು ನಟಿಸಿದ್ದಾರೆ.

Advertisement

 

ಇದೀಗ, ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾರವರ ಕೆಡಿ ಚಿತ್ರ ಇದೇ ಕ್ರಿಸ್ಮಸ್‌ 2024ರಂದು ಬೆಳ್ಳಿತೆರೆಯ ಮೇಲೆ ಬರಲಿದೆ ಎಂಬ ಸಿಹಿ ಸುದ್ದಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ದರ್ಶನ್‌ ರವರ ಡೆವಿಲ್‌ ಚಿತ್ರದ ಜೊತೆ ಧ್ರುವ ರವರ ಕೆಡಿ ಬಿಡುಗಡೆಯಾಗುತ್ತಿರುವುದನ್ನು ನೋಡಿ ಅಭಿಮಾನಿಗಳು ಸ್ಟಾರ್‌ಗಳ ಕ್ಲ್ಯಾಶ್ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಇಬ್ಬರ ನಟರ ಸಿನಿಮಾಗಳು ಒಂದೇ ಬಾರಿಗೆ ರಿಲೀಸ್ ಆದರೆ ಅಭಿನಿಮಾನಿಗಳಿಗೆ ಹಬ್ಬವಾಗುತ್ತದೆ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ

 

ಸಂಬಂಧಿತ · Related