flixOye
Buzz

ಮಗುವಿನ ಆಗಮನದ ಸಂಭ್ರಮ ಹಂಚಿಕೊಂಡ ಸ್ಟಾರ್ ಜೋಡಿ…

ಮೊನ್ನೆಯಷ್ಟೇ ಮೇಘನಾರಾಜ್ ರವರು ಸೀಮಂತ ಶಾಸ್ತ್ರ ವನ್ನು ನೆರವೇರಿಸಿಕೊಂಡರು. ಈಗ ಮತ್ತೊಂದು ಸ್ಟಾರ್ ಜೋಡಿ ತಮ್ಮ ಮನೆಗೆ ಬರುವ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗೂಗ್ಲಿ, ರಣವಿಕ್ರಮ ಖ್ಯಾತಿಯ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷ ಪುರೋಹಿತ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಬೇಬಿ ಬಂಪ್ ಪೋಟೋ ಶೂಟ್ ಕೂಡ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆ ಪೋಟೋಗಳನ್ನು ಹಾಕುವುದರ ಮೂಲಕ ಖುಷಿಯನ್ನು ಹಂಚಿಕೊಂಡಿದ್ದಾರೆ.

https://www.instagram.com/p/CF6d-BdHclr/?igshid=zt9evhk5x8lg

ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಪವನ್ ಒಡೆಯರ್ ಸ್ಟಾರ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅಪೇಕ್ಷ ಪುರೋಹಿತ್ ಕಿರುತೆರೆಯಲ್ಲಿ ನಟಿಸುತ್ತಿದ್ದು, ಟಿ.ಎನ್.ಸೀತಾರಾಮ್ ರವರ ‘ಕಾಫಿ ತೋಟ’ ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟರು. ಅಲ್ಲಿಂದ 2-3 ಸಿನಿಮಾಗಳಲ್ಲೂ ಅಭಿನಯಿಸಿದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ‌ ಜೋಡಿಗೆ ಆಪ್ತರು ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ಈ ಸಂಭ್ರಮದ ಖುಷಿಯನ್ನು ಮತ್ತಷ್ಟು ವಿಶೇಷವನ್ನಾಗಿಸಲು ಹಾಡೊಂದನ್ನು ಕಂಫೋಸ್ ಮಾಡಿದ್ದು, ಅದನ್ನು ಸದ್ಯದಲ್ಲಿ ಬಿಡುಗಡೆ ಮಾಡುವುದಾಗಿ ಪವನ್ ಒಡೆಯರ್ ಹೇಳಿಕೊಂಡಿದ್ದಾರೆ.

ಸಂಬಂಧಿತ · Related