ದಿ ಮಾಸ್ಟರ್ ದ್ರೋಣನ ಆಗಮನಕ್ಕೆ ವೇದಿಕೆ‌ ಸಜ್ಜು…!!!

Published on

298 Views
Advertisement

ಈ ವಾರ ದಿ ಮಾಸ್ಟರ್ ದ್ರೋಣ ಚಿತ್ರದ ಫಸ್ಟ್ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ.
ದ್ರೋಣನಾಗಿ ಘರ್ಜಿಸಲಿದ್ದಾರೆ. ಡಾ. ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸ್ಪೆಷಲ್ ಸಿನಿಮಾ. ಸ್ಯಾಂಡಲ್ ವುಡ್ ಅಂಗಳದಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ದಿ ಮಾಸ್ಟರ್ ಅನ್ನೋ ಟ್ಯಾಗ್ ಲೈನ್ ನೊಂದಿಗೆ ಬರ್ತಿರೋ ದ್ರೋಣ. ಪ್ರಸುತ್ತ ಸಮಾಜದಲ್ಲಿ, ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆ, ಸರ್ಕಾರಿ ಶಾಲೆಗಳ ಮೇಲಿರೋ ಕೀಳಿರಿಮೆ, ಮತ್ತು ಅಲ್ಲಾಗುತ್ತಿರುವ ಅನ್ಯಾಯ ಧೋರಣೆ ವಿರುದ್ಧ ಹೋರಾಡೋ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ವೆರೈಟಿ ಪಾತ್ರಗಳನ್ನು ಮಾಡೋದ್ರಲ್ಲಿ ನಿಪುಣರಾಗಿರೋ ಶಿವಣ್ಣ, ಈ ಸಿನಿಮಾದ ಮೂಲಕ ಮತ್ತೊಮ್ಮೆ ವಿಶಿಷ್ಠಪಾತ್ರದಲ್ಲಿ ಅಭಿಮಾನಿ ದೇವ್ರುಗಳ ಮುಂದೆ ಬರಲಿದ್ದಾರೆ.


ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ತಮಿಳಿನ ಇನಿಯಾ ನಟಿಸಿದ್ದು, ಸ್ವಾತಿ ಶರ್ಮಾ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿ ಗೌಡ, ಶ್ರೀನಿವಾಸ್ ಗೌಡ. ಆನಂದ್, ನಾರಾಯಣ ಸ್ವಾಮಿ, ರವಿಕಿಶನ್, ಜಯಶ್ರೀ, ಮಾಸ್ಟರ್ ಮಹೇಂದ್ರ ಸೇರಿದಂತೆ ದೊಡ್ಡ ತಾರಾಬಳಗವಿದೆ. ದ್ರೋಣ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ನಿರ್ದೇಶನವಿದ್ದು, ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವ.ಬಿ, ಎಸ್.ಬಿ.ಹೆಚ್ (ಸಂಗಮೇಶ್ ಬಿ) ಶೇಷು ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ. ರಾಮ್ ಕ್ರಿಶ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣವಿರೋ ಈ ಚಿತ್ರದ ಟೀಸರ್ ಈಗಾಗ್ಲೇ ರಿಲೀಸ್ ಆಗಿದ್ದು, ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲವನ್ನು ಹುಟ್ಟಿಸಿದೆ. ಈ ನಡುವೆ ಮೊನ್ನೆಯಷ್ಟೇ ರಿಲೀಸ್ ಮಾಡಿದ್ದ ಮೊದಲ ಲಿರಿಕಲ್ ವಿಡಿಯೋ ರಾಮನ ಹಾಡು ಜನಮನ್ನಣೆಗಳಿಸಿದೆ. ಅಂದ್ಹಾಗೆ, ದ್ರೋಣ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದ್ದು ಅಫಿಯಲ್ಲಾಗಿ ಪ್ರಚಾರ ಕಾರ್ಯವನ್ನು ಶುರುಮಾಡೋದಕ್ಕೆ ಮುಂದಾಗಿದೆ. ಅದ್ರಂತೆ ಮೊದಲ ಮೇಕಿಂಗ್ ವಿಡಿಯೋನ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದು, ಈ ವಾರ ದ್ರೋಣ ಚಿತ್ರದ ಮೊದಲ ಮೇಕಿಂಗ್ ವಿಡಿಯೋವನ್ನ ರಿಲೀಸ್ ಮಾಡಲಿದ್ದು, ಸದ್ಯದಲ್ಲೇ ಆಡಿಯೋ ಲಾಂಚ್ ಮತ್ತು ಟ್ರೈಲರ್ ನ ಲಾಂಚ್ ಮಾಡಿ, ರಿಲೀಸ್ ಡೇಟ್ನ ಅನೌನ್ಸ್ ಮಾಡಲಿದೆಯಂತೆ.

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com